ಬೆಂಗಳೂರಲ್ಲಿ ಯುವತಿಗೆ ರಿವಾಲ್ವಾರ್ ತೋರಿಸಿ ಪಿಜಿ ಮಾಲೀಕನಿಂದ ಅತ್ಯಾಚಾರ

rape
Published on

ಬೆಂಗಳೂರು: ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ಬಂದಿದ್ದ ಯುವತಿಗೆ ರಿವಾಲ್ವಾರ್ ತೋರಿಸಿ ಅತ್ಯಾಚಾರವೆಸಗಿದ ಆರೋಪ ಕೇಳಿಬಂದಿದೆ.

ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ ಬಿಹಾರ ಮೂಲದ ಉದ್ಯಮಿ‌ಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅನಿಲ್ ರವಿಶಂಕರ್ ಪ್ರಸಾದ್ ಬಂಧಿತ. ಈತ ಟೈಲ್ಸ್ ಬಿಸಿನೆಸ್ ಮಾಡುತ್ತಿದ್ದ. ಈತನ ಒಡೆತನದ ಪಿಜಿಯಲ್ಲಿದ್ದ ಯುವತಿಯೊಬ್ಬಳಿಗೆ ಆರೋಪಿಯು ರಿವಾಲ್ವಾರ್​ ತೋರಿಸಿ ಬೆದರಿಕೆ ಹಾಕಿ ಅತ್ಯಾಚಾರವೆಸಗಿದ್ದಾನೆ ಎಂದು ದೂರು ದಾಖಲಾಗಿದೆ. ಪೊಲೀಸರು ಆರೋಪಿ ಜತೆಗೆ ರಿವಾಲ್ವರ್ ಅನ್ನೂ ಜಪ್ತಿ ಮಾಡಿದ್ದಾರೆ. ಆರೋಪಿಯನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿ ಮೂರು ದಿನಗಳ ಕಸ್ಟಡಿಗೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net