

ಬಂಗಾರಪೇಟೆ: ದಕ್ಷಿಣ ಪಶ್ಚಿಮ ರೈಲ್ವೆಯ ಬೆಂಗಳೂರು ವಿಭಾಗದಲ್ಲಿ ರೈಲು ಹಳಿಗಳ ನಿರ್ವಹಣೆ ಹಾಗೂ ಸುರಕ್ಷತಾ ತಪಾಸಣೆ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಕುಪ್ಪಂ ವಾರ್ಗದ ರೈಲುಗಳ ಸಂಚಾರದಲ್ಲಿ ಬದಲಾವಣೆ ವಾಡಲಾಗಿದೆ. ಸೆ.22ರಿಂದ ನ.5ರ ವರೆಗೆ ವಿವಿಧ ದಿನಗಳಲ್ಲಿ ಕೆಲ ರೈಲುಗಳನ್ನು ಸಂಪೂರ್ಣ ರದ್ದುಪಡಿಸಲಾಗಿದ್ದು, ಇನ್ನೂ ಕೆಲ ರೈಲುಗಳ ಸಂಚಾರ ಭಾಗಶ: ರದ್ದುಪಡಿಸಲಾಗಿದೆ.
ರೈಲ್ವೆ ಇಲಾಖೆಯ ಆದೇಶದ ಪ್ರಕಾರ, ವೈಟ್‌ಫೀಲ್ಡ್-ದೇವನಗುಂದಿ, ದೇವನಗುಂದಿ-ವಾಲೂರು, ನಡುವಿನ ರೈಲು ಹಳಿಗಳಲ್ಲಿ ನಿರ್ದಿಷ್ಟ ಅವಧಿಗೆ ಕಾಮಗಾರಿ ನಡೆಸಲು ರೈಲು ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.
ರೈಲು ಸಂಖ್ಯೆ 66544 ಬಾಣಸವಾಡಿ-ಕುಪ್ಪಂ ಮೆಮು, 66543 ಕುಪ್ಪಂ-ಬೆಂಗಳೂರು ಮೆಮು ರೈಲುಗಳನ್ನು ಒಟ್ಟು 35 ದಿನಗಳ ಕಾಲ ಸಂಪೂರ್ಣ ರದ್ದುಪಡಿಸಲಾಗಿದೆ. ಈ ಕಾರಣದಿಂದ ಬೆಂಗಳೂರು, ಬಾಣಸವಾಡಿ, ಕೃಷ್ಣರಾಜಪುರ, ವೈಟ್‌ಫೀಲ್ಡ್, ವಾಲೂರು, ಬಂಗಾರಪೇಟೆ, ಕುಪ್ಪಂ ಭಾಗದ ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ.
ರೈಲು ಸಂಖ್ಯೆ 66511 ಬೆಂಗಳೂರು-ವಾರಿಕುಪ್ಪಂ ಮೆಮು ರೈಲನ್ನು 23 ದಿನಗಳ ಕಾಲ ಬಂಗಾರಪೇಟೆಯಲ್ಲೇ ಅಲ್ಪಾವಧಿಗೆ ನಿಲ್ಲಿಸಲಾಗುತ್ತದೆ. ರೈಲು ಸಂಖ್ಯೆ 66514 ವಾರಿಕುಪ್ಪಂ-ಕೃಷ್ಣರಾಜಪುರಂ ಮೆಮು ರೈಲು 23 ದಿನಗಳ ಕಾಲ ಬಂಗಾರಪೇಟೆಯಿಂದಲೇ ತನ್ನ ಸಂಚಾರ ಆರಂಭಿಸಲಿದೆ. ಅ.24ರಿಂದ ನ.5ರ ವರೆಗೆ 12 ದಿನ ರೈಲು ಸಂಖ್ಯೆ 66514 ಅನ್ನು ದೇವನಗುಂದಿಯಲ್ಲೇ ಅಲ್ಪಾವಧಿಗೆ ನಿಲ್ಲಿಸಲಾಗುತ್ತದೆ. ಈ ಅವಧಿಯಲ್ಲಿ ರೈಲು ಸಂಖ್ಯೆ 66515 ಕೃಷ್ಣರಾಜಪುರಂ-ವಾರಿಕುಪ್ಪಂ ಮೆಮು ರೈಲು ದೇವನಗುಂದಿಯಿಂದಲೇ ಸಂಚಾರ ಆರಂಭಿಸಲಿದೆ. ರೈಲು ಸಂಖ್ಯೆ 66511 ಬೆಂಗಳೂರು-ವಾರಿಕುಪ್ಪಂ ಮೆಮು ರೈಲನ್ನು ಸೂಚಿಸಿರುವ 23 ದಿನಗಳಲ್ಲಿ ಸುವಾರು 30 ನಿಮಿಷಗಳ ಕಾಲ ತಡವಾಗಿ ಓಡಿಸಲಾಗುತ್ತದೆ.
ವೈಟ್‌ಫೀಲ್ಡ್-ದೇವನಗುಂದಿ ವಾರ್ಗದಲ್ಲಿ ಮಧ್ಯಾಹ್ನ 12.05ರಿಂದ 1.35ರವರೆಗೆ, ದೇವನಗುಂದಿ-ವಾಲೂರು ವಾರ್ಗದಲ್ಲಿ ಮಧ್ಯಾಹ್ನ 12.15ರಿಂದ 1.45ರವರೆಗೆ ಹಾಗೂ ದೇವನಗುಂದಿ-ವೈಟ್‌ಫೀಲ್ಡ್ ವಾರ್ಗದಲ್ಲಿ ಸಂಜೆ 3.40ರಿಂದ 5.10ರ ವರೆಗೆ ರೈಲು ಹಳಿಗಳ ಕಾಮಗಾರಿ ನಡೆಯಲಿದೆ.
ಪ್ರಯಾಣಿಕರು ತಮ್ಮ ಪ್ರಯಾಣದ ದಿನದ ರೈಲು ಸಂಚಾರದ ಸ್ಥಿತಿಯನ್ನು ಮುಂಚಿತವಾಗಿ ಪರಿಶೀಲಿಸಿಕೊಂಡು, ಅಗತ್ಯವಿದ್ದಲ್ಲಿ ಪರ್ಯಾಯ ಸಾರಿಗೆ ವ್ಯವಸ್ಥೆ ವಾಡಿಕೊಳ್ಳುವಂತೆ ರೈಲ್ವೆ ಇಲಾಖೆ ಸೂಚಿಸಿದೆ.