184 ಗ್ರಾಂ ಬಂಗಾರದ ಆಭರಣ ವಶ

shikaripura town police
ಶಿಕಾರಿಪುರ ಪಟ್ಟಣ ಠಾಣೆ ಪೊಲೀಸರು ಕಳ್ಳನಿಂದ ವಶಕ್ಕೆ ಪಡೆದು 14.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ. ಕೆ.ಇ.ಕೇಶವ, ಸಂತೋಷ್ ಪಾಟೀಲ್, ಶರತ್, ಸಂತೋಷ್ ಕುಮಾರ್, ಎನ್.ಶಿವಾಜಿ ರಾವ್, ಎನ್.ಗಿರೀಶ್ ನಾಯ್ಕ ಇದ್ದರು.
Published on

ಶಿವಮೊಗ್ಗ: ಶಿಕಾರಿಪುರ ಪಟ್ಟಣದ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು, 14.70 ಲಕ್ಷ ರೂ. ಮೌಲ್ಯದ 184 ಗ್ರಾಂ ಬಂಗಾರದ ಆಭರಣ ವಶಪಡಿಸಿಕೊಂಡಿದ್ದಾರೆ.

ಶಿಕಾರಿಪುರದ ರಂಗನಾಥಪುರ ಕಾಲನಿಯ ಬಿ.ಜೆ.ಅಭಿಷೇಕ ಗೌಡ (25) ಬಂಧಿತ ಆರೋಪಿ. ಈತ ಜ.24ರಂದು ರಾತ್ರಿ ಶಿಕಾರಿಪುರ ಪಟ್ಟಣದ ಮನೆಗೆ ನುಗ್ಗಿ ಬೀರುವಿನಲ್ಲಿದ್ದ ಬಂಗಾರದ ಆಭರಣಗಳನ್ನು ಕಳವು ಮಾಡಿದ್ದ. ಈ ಬಗ್ಗೆ ಮಹಿಳೆ ಶಿಕಾರಿಪುರ ಟೌನ್ ಠಾಣೆಗೆ ದೂರು ನೀಡಿದ್ದರು.

ಶಿಕಾರಿಪುರ ಡಿವೈಎಸ್‌ಪಿ ಕೆ.ಇ.ಕೇಶವ ಮೇಲ್ವಿಚಾರಣೆಯಲ್ಲಿ ಸಿಪಿಐ ಸಂತೋಷ್ ಪಾಟೀಲ್ ನೇತೃತ್ವದಲ್ಲಿ ಪಿಎಸ್‌ಐ ಶರತ್, ಅಪರಾಧ ವಿಭಾಗದ ಸಿಬ್ಬಂದಿ ಸಂತೋಷ್ ಕುಮಾರ್, ಎನ್.ಶಿವಾಜಿ ರಾವ್, ಎನ್.ಗಿರೀಶ್ ನಾಯ್ಕ ಅವರನ್ನೊಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net