

ಕಂಪ್ಲಿ: ಪಟ್ಟಣದ ಎಪಿಎಂಸಿ ಆವರಣದಲ್ಲಿ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದಿಂದ 2024-25ನೇಸಾಲಿನ ಹಿಂಗಾರು ಹಂಗಾಮಿನ ಜೋಳ ಖರೀದಿ ಕೇಂದ್ರಕ್ಕೆ ಶಾಸಕ ಜೆ.ಎನ್.ಗಣೇಶ್ ಬುಧವಾರ ಚಾಲನೆ ನೀಡಿದರು.
ಸಹಕಾರ ಸಂಘದ ಅಧ್ಯಕ್ಷ ಜಿ.ಭಾಸ್ಕರರೆಡ್ಡಿ ಮಾತನಾಡಿ, 113 ರೈತರು ಹೆಸರು ನೋಂದಾಯಿಸಿಕೊಂಡಿದ್ದು 13 ಸಾವಿರ ಮೆಟ್ರಿಕ್ ಟನ್ ಜೋಳ ಖರೀದಿಸಲಾಗುವುದು. ರೈತರು ಗುಣಮಟ್ಟದ ಜೋಳ ಮಾರಾಟಕ್ಕೆ ಮುಂದಾಗಬೇಕು ಎಂದರು.
ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್, ಉಪಾಧ್ಯಕ್ಷ ಶರಣಬಸವ, ಟಿಎಪಿಸಿಎಂಎಸ್ ಉಪಾಧ್ಯಕ್ಷೆ ಟಿ.ಎಂ.ಸಾವಿತ್ರಿ, ಸಿಇಒ ಕೆ.ವೀರೇಶ್, ನಿರ್ದೇಶಕರಾದ ಕೆ.ವಿರೂಪಾಕ್ಷಪ್ಪ, ಬಿ.ರಮೇಶ, ಎಸ್.ಮಾರೇಶ್, ಎಸ್.ಜಯಲಕ್ಷ್ಮೀ, ಎನ್.ಆಂಜನೇಯಲು, ಎಚ್.ಎಂ.ಪ್ರಭುಸ್ವಾಮಿ, ಮಂಜುನಾಥ ಗುಬಾಜಿ, ವಿ.ವೆಂಕಟರಾಮಯ್ಯ, ಟಿ.ಪ್ರಭಾಕರ, ಕೆ.ಭೀಮಲಿಂಗಪ್ಪ, ಎಚ್.ಲಿಂಗಪ್ಪ, ಪ್ರಮುಖರಾದ ಬಿ.ಸಿದ್ದಪ್ಪ, ಬಿ.ನಾರಾಯಣಪ್ಪ ಇತರರಿದ್ದರು.