More

    ಜನಪದ ನಮ್ಮ ಸಂಸ್ಕೃತಿ ಜೀವಾಳ, ವಿಪ ಸದಸ್ಯೆ ಹೇಮಲತಾ ನಾಯಕ ಅಭಿಮತ

    ಕೊಪ್ಪಳ: ನಮ್ಮ ಇತಿಹಾಸ, ಸಂಸ್ಕೃತಿ ಬಿಂಬಿಸುವಲ್ಲಿ ಜನಪದರ ಪಾತ್ರ ಬಹು ದೊಡ್ಡದು. ಜನಪದ ಸಂಸ್ಕೃತಿ ನಮ್ಮ ಜೀವನದ ಅವಿಭಾಜ್ಯ ಅಂಗ ಎಂದು ವಿಧಾನ ಪರಿಷತ್​ ಸದಸ್ಯೆ ಹೇಮಲತಾ ನಾಯಕ ಹೇಳಿದರು.

    ನಗರದ ಸಾಹಿತ್ಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಜನಪರ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ನಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ಸಾಗಬೇಕಿದೆ. ತತ್ವಪದ, ಸುಗ್ಗಿ ಹಾಡು, ಗೀಗೀ ಪದ ಸೇರಿ ಅನೇಕ ಕಲೆಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ಅವುಗಳನ್ನು ಉಳಿಸಿ ಪ್ರೋತ್ಸಾಹಿಸಬೇಕಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಜನಪದ ಕಲೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಕಲಾವಿದರು ಇಲಾಖೆ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನಾಡಿನ ಹಬ್ಬ, ಆಚರಣೆಗಳ ಬಗ್ಗೆ ಯುವಕರು ಅರಿಯಬೇಕು ಎಂದು ಸಲಹೆ ನೀಡಿದರು.

    ನಮ್ಮ ದೇಶ, ರಾಜ್ಯ, ಕಲೆ, ಸಂಸತಿ ಉಳಿಸಿ ಪೋಷಿಸುವವರು ಜನಪದರು. ನಮ್ಮ ಕಲೆಗಳನ್ನು ಉಳಿಸಿ ಮುಂದಿನವರಿಗೆ ಪರಿಚಯಿಸುವ ಜವಾಬ್ದಾರಿ ನಮ್ಮ ಮೇಲಿದೆ. ಟಿವಿ, ಮೊಬೈಲ್​ನಿಂದ ಸಂಸತಿ ಹಾಳಾಗುತ್ತಿದೆ. ಯುವಕರು ಸಾಮಾಜಿಕ ಜಾಲತಾಣಗಳಿಂದ ಹೊರ ಬರಬೇಕು. ಅಧ್ಯಯನಶೀಲರಾಗಬೇಕು. ಲಂಬಾಣಿ ನೃತ್ಯ, ತೊಗಲು ಗೊಂಬೆ, ಹಗಲುವೇಷ ಕಲೆಗಳನ್ನು ಕೆಲ ಸಮುದಾಯಗಳು ಉಳಿಸಿಕೊಂಡು ಬಂದಿವೆ. ಅವರನ್ನು ಪ್ರೋತ್ಸಾಹಿಸಬೇಕು ಎಂದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಕಲಾವಿದರು ತಮ್ಮ ಕಲೆ ಪ್ರದರ್ಶಿಸಿದರು. ಹಿರಿಯ ಕಲಾವಿದ ಮಾರೆಪ್ಪ ಚನ್ನದಾಸರ್​, ಕವಯತ್ರಿ ಸಾವಿತ್ರಿ ಮುಜಮದಾರ, ನಾನಾ ಶಾಲಾ – ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts