More

    ಗವಿಮಠ ಜಾತ್ರೆಯಲ್ಲಿ ಅಂಗವಿಕಲರಿಗೆ ಸಾಮೂಹಿಕ ಮದುವೆ, ನೋಂದಣಿಗೆ ಸೂಚನೆ

    ಕೊಪ್ಪಳ: ಹಲವಾರು ಸಾಮಾಜಿಕ ಕಾರ್ಯಕ್ಕೆ ಹೆಸರಾಗಿರುವ ಗವಿಮಠ ಈ ಬಾರಿ ಗವಿಸಿದ್ದೇಶ್ವರ ಜಾತ್ರೋತ್ಸವ ಅಂಗವಾಗಿ ಅಂಗವಿಕಲರಿಗೆ ಸಾಮೂಹಿಕ ವಿವಾಹ ನೆರವೇರಿಸಲು ನಿಶ್ಚಯಿಸಿದೆ. ಆಸಕ್ತರು ನೋಂದಣಿಗೆ ಗವಿಮಠ ಮನವಿ ಮಾಡಿದೆ.

    ಅಂಗವಿಕಲರೆಂದರೆ ತಾತ್ಸಾರದಿಂದ ಕಾಣುವವರು ಹೆಚ್ಚು. ಅಂಥವರಿಗೆ ನೆರವಾಗುವ ಉದ್ದೇಶದಿಂದ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ವಿಶೇಷ ಚೇತನರಿಗೆ ಚೈತನ್ಯ ಒದಗಿಸುವ ನಿಟ್ಟಿನಲ್ಲಿ 2024ರ ಜನೆವರರಿ 21ರಂದು ಸಾಮೂಹಿಕ ವಿವಾಹ ನೆರವೇರಿಸಲು ನಿಶ್ಚಯಿಸಿದೆ.

    50 ಜೋಡಿಗೆ ಮದುವೆ ಮಾಡಲು ನಿರ್ಧರಿಸಿದ್ದು, ಮದುವೆ ನಂತರ ಜೀವನೋಪಾಯಕ್ಕೂ ಅವಕಾಶ ಮಾಡಿಕೊಡಲಾಗುತ್ತಿದೆ. ಸೆಲ್ಕೋ ೌಂಡೇಶನ್​ ಸಹಯೋಗದಲ್ಲಿ ಒಂದು ಝರಾಕ್ಸ್​ ಯಂತ್ರ, ಸಣ್ಣ ಅಂಗಡಿ ವ್ಯವಸ್ಥೆ ಮಾಡಲಾಗುವುದು.

    ಆಸಕ್ತರು ಮುಂಚಿತವಾಗಿ ಹೆಸರು ನೋಂದಾಯಿಸಬಹುದು. ಮಾಹಿತಿಗಾಗಿ ನಾಗರಾಜ ದೇಸಾಯಿ-9448263019, ಮಲ್ಲಿಕಾರ್ಜುನ ಪೂಜಾರ-9901501235 ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts