More

    ಜಿಲ್ಲಾ ಕಸಾಪ ಗದಗ: ಮಾಸದ ಮಾತು ಕಾರ್ಯಕ್ರಮ.

    ವಿಜಯವಾಣಿ ಸುದ್ದಿಜಾಲ ಗದಗ
    ಸುಖ ದು:ಖಗಳೆರಡೂ ಮಾನವನ ಜೀವನದ ಎರಡು ಮಗ್ಗಲುಗಳು. ಇವೆರಡೂ ಒಟ್ಟಿಗಿರಲು ಸಾಧ್ಯವಿಲ್ಲದಿದ್ದರೂ ಎಲ್ಲರ ಬಾಳಿನಲ್ಲೂ ಆಗಾಗ ಬಂದು ಹೋಗುವ ಅತಿಥಿಗಳು. ನಮಗಿಷ್ಟವಾದ ವ್ಯಕ್ತಿಗಳು, ವಿಷಯಗಳು ಸಂದರ್ಭಗಳು ನಮ್ಮ ಸುತ್ತಮುತ್ತಲಿದ್ದಾಗ ನಮಗೆ ಸುಖ ಸಂತೋಷಗಳಾಗುತ್ತವೆ. ಅದೇ ಇಷ್ಟವಿಲ್ಲದ ಟನೆಗಳು ಕೆಲಸ ಕಾರ್ಯಗಳು ವ್ಯಕ್ತಿಗಳು ಎದುರಾದಾಗ ಆಗುವುದೇ ದು:ಖ. ಈ ವ್ಯಸನ ಹೆಚ್ಚಿನ ಸಮಯದವರೆಗೆ ಇದ್ದಾಗ ಮನಸ್ಸಿನ ಮೇಲೆ ಆಗುವ ದಾಳಿಯೇ ಖಿನ್ನತೆಯಾಗಿದೆ ಎಂದು ಮನೋವಿಜ್ಞಾನಿ ಬರಹಗಾರ ವೈಜ್ಞಾನಿಕ ಚಿಂತಕ ಪದ್ಮಶ್ರೀ ಪ್ರಶಸ್ತಿ ಪುರಸತ ಡಾ. ಸಿ. ಆರ್​. ಚಂದ್ರಶೇಖರ ಹೇಳಿದರು.
    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಾಲಯದಲ್ಲಿ ಭಾನುವಾರ ಜರುಗಿದ ಮಾಸದ ಮಾತು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತಮ ಮಾನಸಿಕ ಆರೋಗ್ಯ ಹೊಂದಲು ನಮ್ಮ ಜೀವನಶೈಲಿಯ ಬದಲಾವಣೆ ಮತ್ತು ನಮಗಾಗಿ ನಾವು ಸಮಯ ಕೊಡಬೇಕಾಗುತ್ತದೆ. ನಮ್ಮ ಹವ್ಯಾಸ ಮತ್ತು ಯೋಜನೆಗಳು ಉತ್ತಮವಾಗಿರಲಿ. ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು. ಯೋಗ ವ್ಯಾಯಾಮ ಮತ್ತು ಧ್ಯಾನ ಮಾಡುವುದು. ಒತ್ತಡ ನಿಭಾಯಿಸುವುದನ್ನು ಕಲಿಯುವುದು. ಧನಾತ್ಮಕ ಚಿಂತನೆಯ ಜನರೊಂದಿಗೆ ಸಂಪರ್ಕ ಮಾಡಿಕೊಳ್ಳುವುದರಿಂದ ನಮ್ಮ ದೇಹಕ್ಕೆ ಅವಶ್ಯವಾಗಿರುವ ಪ್ರೀತಿ ಸಂತೋಈಷ ಸಿಗುತ್ತದೆ ಎಂದು ಹೇಳಿದರು.
    ಡಾ. ಜಿ.ಬಿ.ಪಾಟೀಲ, ವಿವೇಕಾನಂದ ಪಾಟೀಲ, ಡಾ. ರಾಜೇಂದ್ರ ಗಡಾದ, ಪ್ರೊ. ಚಂದ್ರಶೇಖರ ವಸ್ತ್ರದ, ಪ್ರೊ. ಅನ್ನದಾನಿ ಹಿರೇಮಠ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ. ಸಿ. ಆರ್​ ಚಂದ್ರಶೇಖರ ಬರೆದ ಮಾನಸಿಕ ಆರೋಗ್ಯ ಓದುವುದು ಹೇಗೆ ಎನ್ನುವ ಕುರಿತ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts