More

    ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮುಖ್ಯ

    ವಿಜಯಪುರ: ಎನ್‌ಎಸ್‌ಎಸ್ ಶಿಬಿರಗಳು ಜೀವನದಲ್ಲಿ ಹಲವಾರು ಕೌಶಲ್ಯಗಳನ್ನು ಕಲಿಸುತ್ತವೆ. ಇಂಥ ಶಿಬಿರಗಳ ಮೂಲಕ ಶಿಸ್ತು ಬದ್ದವಾಗಿ ಸಮಯ ಪಾಲನೆ ಮಾಡುವುದು, ಸಹಾಯ, ಸಹಕಾರ ಮತ್ತು ಸೇವಾ ಮನೋಭಾವವನ್ನು ಕಲಿಸುತ್ತವೆ ಎಂದು ವಿವಿಯ ಕುಲಸಚಿವ ಪ್ರೊ.ಬಿ.ಎಸ್.ನಾವಿ ಹೇಳಿದರು.

    ನಗರ ಹೊರವಲಯದ ಹಿಟ್ಟನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ರಾಷ್ಟಿಯ ಸೇವಾ ಯೋಜನೆ ಕೋಶದ ಮುಕ್ತ ಹಾಗೂ ‘ಬ’ ಘಟಕದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ನಾನು ಸ್ವಯಂ ಸೇವಕನಾಗಿ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಯಾಗಿ, ಎನ್‌ಎಸ್‌ಎಸ್ ಸಂಯೋಜಕನಾಗಿ ಸೇವೆ ಮಾಡಿದ್ದೇನೆ. ಅದು ನನ್ನ ಜೀವನದಲ್ಲಿ ಮಹತ್ತರ ಬೆಳವಣಿಗೆಗೆ ಸಹಾಯಕವಾಗಿದೆ ಎಂದರು.

    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಮಾತನಾಡಿ, ಎನ್‌ಎಸ್‌ಎಸ್ ಶಿಬಿರದ ಮೂಲಕ ನೀವು ಅತ್ಯದ್ಭುತವಾದ ಅನುಭವ ಪಡೆದಿದ್ದೀರಿ. ಗ್ರಾಮ ವಾಸ್ತವ್ಯ ಮಾಡಿ ಗ್ರಾಮದ ಸಮಸ್ಯೆಗಳನ್ನು ಅರಿತಿದ್ದೀರಿ. ಇದು ನಿಮ್ಮ ಜೀವನದಲ್ಲಿ ಬಹುದೊಡ್ಡ ಪಾಠವಾಗಲಿದೆ. ಎನ್‌ಎಸ್‌ಎಸ್ ಶಿಬಿರವು ಜೀವನದ ಪಾಠಗಳನ್ನು ಕಲಿಸುತ್ತದೆ. ನಮ್ಮಲ್ಲಿರುವ ಕೌಶಲ್ಯ ಬೆಳೆಸುವ ಮೂಲಕ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

    ಬದುಕನ್ನು ಹಸನಾಗಿಸುವುದರ ಜೊತೆಗೆ ಗ್ರಾಮವನ್ನು ಹಸನಾಗಿಸುವುದರಲ್ಲಿ ಎನ್‌ಎಸ್‌ಎಸ್ ಪಾತ್ರ ಬಹುಮುಖ್ಯ. ಗ್ರಾಮದಲ್ಲಿ ಮಾಡಿದ ಸೇವೆ ಬದುಕಿನುದ್ದಕ್ಕೂ ನಿಮ್ಮ ಜೊತೆಗಿರುತ್ತದೆ ಎಂದು ತಿಳಿಸಿದರು.

    ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಪ್ರೊ.ಶಾಂತಾದೇವಿ ಟಿ ಮಾತನಾಡಿ, ಎನ್‌ಎಸ್‌ಎಸ್ ಅಂದರೆ ನಮ್ಮ ಸರ್ವಾಂಗೀಣ ಬೆಳವಣಿಗೆ, ಅಭಿವೃದ್ಧಿಯನ್ನು ಮಾಡುತ್ತದೆ. ಮಹಿಳೆಯರಲ್ಲಿ ಆತ್ಮಬಲ ಹೆಚ್ಚಿಸುವ ಕಾರ್ಯ ಈ ಶಿಬಿರದ ಉದ್ದೇಶವಾಗಿತ್ತು. ಅದು ಈಡೇರಿರುವುದು ಸಂತಸದ ಸಂಗತಿ ಎಂದರು.

    ಹಿಟ್ಟಿನಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಿ ಮಾರುತಿ ಸುಬೇದಾರ, ಎನ್‌ಎಸ್‌ಎಸ್ ಮುಕ್ತ ಹಾಗೂ ಬ ಘಟಕದ ಕಾರ್ಯಕ್ರಮಾಧಿಕಾರಿ ಡಾ.ತಹಮೀನ್ ಕೋಲಾರ, ಡಾ. ಅಮರನಾಥ ಪ್ರಜಾಪತಿ ಮತ್ತಿತರರಿದ್ದರು. ಸ್ವಯಂ ಸೇವಕಿ ಚಂದ್ರಕಲಾ ಸ್ವಾಗತಿಸಿದರು. ಸುಶ್ಮಿತಾ, ಗೀತಾಂಜಲಿ, ಪ್ರಿಯಂಕಾ ಪರಿಚಯಿಸಿದರು. ಲಕ್ಷ್ಮಿ ಬಾಗಲಕೋಟಿ, ಶ್ವೇತಾ, ಹೇಮಾವತಿ, ಸಾವಿತ್ರಿ, ಜ್ಯೋತಿ ಅನಿಸಿಕೆ ಹಂಚಿಕೊಂಡರು. ತನುಜಾ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts