More

    ಶ್ರೀಶೈಲಕ್ಕೆ ನೇರ ಸಾರಿಗೆ ಬಸ್

    ಹುನಗುಂದ: ಆಂಧ್ರ ಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವರ ಭಕ್ತರು ಹೆಚ್ಚಾಗಿದ್ದರಿಂದಾಗಿ ಹುನಗುಂದ ಘಟಕದಿಂದ ನೇರ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಘಟಕ ವ್ಯವಸ್ಥಾಪಕ ಅರವಿಂದ ಬಜಂತ್ರಿ ಹೇಳಿದರು.

    ಪಟ್ಟಣದ ಹುನಗುಂದ ಘಟಕದಲ್ಲಿ ಬುಧವಾರ ಶ್ರೀಶೈಲ ಜಾತ್ರೆ ನಿಮಿತ್ತ ವಿಶೇಷ ಬಸ್‌ಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

    ತಾಲೂಕಿನಿಂದ ಅಪಾರ ಭಕ್ತರು ಶ್ರೀಶೈಲಕ್ಕೆ ತೆರಳಲಿದ್ದಾರೆ. ಪ್ರಯಾಣದಲ್ಲಿ ಪ್ರಯಾಸ ಆಗಬಾರದೆಂಬ ಉದ್ದೇಶದಿಂದ ನೇರವಾಗಿ ಬಸ್ ಸೌಲಭ್ಯ ಒದಗಿಸಲಾಗಿದೆ. 50 ಜನ ಭಕ್ತರು ಸೇರಿ ಗ್ರಾಮೀಣ ಪ್ರದೇಶದಿಂದಲೂ ಶ್ರೀಶೈಲಕ್ಕೆ ಹೋಗಬಹುದು. ಇಲ್ಲಿಂದ ಶ್ರೀಶೈಲಕ್ಕೆ ತೆರಳಲು ಪ್ರತಿಯೊಬ್ಬರಿಗೆ 800 ರೂ. ಟಿಕೆಟ್ ಇದೆ. ಪ್ರಯಾಣಿಕರು ಹೆಚ್ಚಾದರೆ ಇನ್ನೂ ಹೆಚ್ಚಿನ ಬಸ್‌ಗಳನ್ನು ಬಿಡಲಾಗುವುದು ಎಂದು ತಿಳಿಸಿದರು.

    ಜಿ.ಬಿ. ಕಂಬಾಳಿಮಠ, ದುರಗಪ್ಪ ಹಾದಿಮನಿ, ಸಂಚಾರಿ ನಿರೀಕ್ಷಕಿ ಶೈಲಾ ಜಿಗಳೂರ, ಎಸ್.ಎಸ್. ಬಡಿಗೇರ, ಸಾರಿಗೆ ನಿಯಂತ್ರಕ, ಜಾತ್ರಾ ಉಸ್ತುವಾರಿ ಎಂ.ಎಸ್. ಮಸರಕಲ್, ಷಣ್ಮುಖ ಆನೇಹೊಸೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts