More

    ನೋಡಿ ಸ್ವಾಮಿ ಇಂತವರೂ ಇರುತ್ತಾರೆ; ಟೀ, ಚಿಕನ್​ ಇಷ್ಟಪಡುವವರು ಇದನ್ನು ಓದಬೇಡಿ..!

    ಟೀ ಅಥವಾ ಚಹಾ ಎಂದರೆ ಭಾರತೀಯರಲ್ಲಿ ದೊಡ್ಡ ಅಭಿಮಾನಿಗಳಿದ್ದಾರೆ. ಹಾಗೇಯೆ ಚಿಕನ್​ ಟಿಕ್ಕಾಕ್ಕೆ ಕೂಡ.

    ಇವೆರೆಡರ ರುಚಿಯನ್ನು ಅವರು ಆಸ್ವಾದಿಸುವ ಶೈಲಿಯೇ ಭಿನ್ನ. ಇದರ ರುಚಿ ಬಗ್ಗೆ ಕೆಲವರಂತೂ ತುಂಬ ಪಕ್ಕಾ ಇರುತ್ತಾರೆ. ಚಹಾ ಹಾಗೂ ಚಿಕನ್​ ಟಿಕ್ಕಾದ ರುಚಿ ಬಗ್ಗೆ ಅವರು ಅಷ್ಟು ಖಡಕ್​ ಆಗಿರುತ್ತಾರೆ. ಈ ರುಚಿಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅವರು ಸಹಿಸುವುದಿಲ್ಲ.

    ಆದರೆ ಇನ್ನು ಕೆಲವರು ಇರುತ್ತಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಇಂತಹ ಭಾರತೀಯ ರುಚಿಯನ್ನು ಹಾಲು ಮಾಡಲು ಸಿದ್ಧರಿರುತ್ತಾರೆ. ಹೌದು, ಇದು ತಮಾಷೆಯಲ್ಲ, ಇಂತಹ ಮಹಿಳೆಯೊಬ್ಬಳು ಇಲ್ಲಿದ್ದಾಳೆ. ಈಕೆ ಚಹಾ ಮತ್ತು ಚಿಕನ್​ ಟಿಕ್ಕಾದ ರುಚಿಯನ್ನೇ ಹಾಳು ಮಾಡಿದ್ದಾಳೆ.

    ಪೊಕೊಸ್ಚಿಕ್​ ಎಂಬಾಕೆ ಚಿಕನ್ ​ಟಿಕ್ಕಾದ ಮೇಲೆ ಟೀ ಸುರಿದುಕೊಂಡು ತಿಂದಿದ್ದಾಳೆ. ಅಷ್ಟೇ ಅಲ್ಲ, ಇದನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದಾಳೆ.

    “ಹಾಯ್​ ಹುಡುಗರೇ​, ನಾನು ಇಡ್ಲಿ ಮತ್ತು ಟೀ ಜತೆಗಿನ ವಿಡಿಯೋಗೆ ನೀವು ಟೀ ಜತೆಗೆ ತಂದೂರಿ ಪ್ರಯೋಗಿಸು ಎಂದು ಹೇಳಲೇ ಇಲ್ಲ! ಆದರೆ ನನಗೆ ಲೆಗ್​ ಪೀಸ್​ ಸಿಗಲಿಲ್ಲ. ಬದಲಿಗೆ ಸಿಕ್ಕಿದ್ದು ಚಿಕನ್​ ಟಿಕ್ಕಾ. ಮೊದಲಿಗೆ ನನಗೂ ಬೇಡ ಎನ್ನಿಸಿತ್ತು. ಆದರೆ ನಂತರ ಇ ಹೊಸ ಪ್ರಯೋಗ ಮಾಡಿದೆ. ನಿಜಕ್ಕೂ ಇದರ ರುಚಿಯನ್ನು ಅನುಭವಿಸಿದೆ. ಇದು ಒಳ್ಳೆಯ ರುಚಿ.”

    ಹೀಗೆಂದು ತನ್ನ ವಿಡೀಯೊಗೆ ಅಡಿ ಬರಹ ಬರೆದುಕೊಂಡಿದ್ದಾಳೆ. ಇದಕ್ಕೆ ನೆಟ್ಟಿಗರು ಕೂಡ ವಿಧವಿಧವಾಗಿ ಮಜಾವಾಗಿ ಪ್ರತಿಕ್ರಿಯಿಸಿದ್ದಾರೆ.

    ‘ಪಾಪ ಬಡಪಾಯಿ ಚಿಕನ್​ ಎರಡೆರಡು ಸಲ ಬೆಯ್ಯಬೇಕಾಯಿತು’ ಎಂದು ಒಬ್ಬರು ಹೇಳಿದರೆ, ಇದನ್ನು ‘ಚಿಕನ್​ ಟೀ ಕ್ಕಾ’ ಎನ್ನಬಹುದು ಎಂದಿದ್ದಾರೆ. ಇನ್ನೊಬ್ಬ ಆಕೆಗೆ ಒಂದು ಉಪಾಯ ಸೂಚಿಸಿದ್ದಾನೆ. ‘ನೀನು ಏಕೆ ಬೆಂದ ಮೊಟ್ಟೆ ಜೊತೆ ಟೀ ಪ್ರಯೋಗ ಮಾಡಬಾರದು’ ಎಂದಿದ್ದಾನೆ.

    ಇನ್ನೂ ಎಂತಂಥ ಫೊಸ್ಟ್​ಗಳನ್ನು ನೋಡಬೇಕೊ ಎಂದು ಕೊಂಡವರು ಅದೇಷ್ಟೋ ಮಂದಿ! (ಏಜೆನ್ಸೀಸ್​) 

    ನೋಡಿ ಸ್ವಾಮಿ ಇಂತವರೂ ಇರುತ್ತಾರೆ; ಟೀ, ಚಿಕನ್​ ಇಷ್ಟಪಡುವವರು ಇದನ್ನು ಓದಬೇಡಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts