More

    ಕೋವಿಡ್ ಪರಿಕರ ಖರೀದಿಯಲ್ಲಿ ವ್ಯತ್ಯಾಸ ಆಗಿದ್ದು ನಿಜ

    ನಾಗಮಂಗಲ: ಕೋವಿಡ್ ರಕ್ಷಾ ಸಾಮಗ್ರಿಗಳಾದ ಪಿಪಿಇ ಕಿಟ್ ಮತ್ತಿತರ ವೈದ್ಯಕೀಯ ಪರಿಕರಗಳ ಖರೀದಿಸಲು ಟೆಂಡರ್ ನಡೆಸದ ಕಾರಣ ಅಲ್ಪ ಸ್ವಲ್ಪ ವ್ಯತ್ಯಾಸ ಆಗಿರುವುದು ನಿಜ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಒಪ್ಪಿಕೊಂಡರು.

    ತಾಲೂಕಿನ ಬಿಜಿ ನಗರದ ಏಮ್ಸ್ ಆಸ್ಪತ್ರೆಯ ಆವರಣದಲ್ಲಿ ಶನಿವಾರ ನೂತನ ಹಾಪ್‌ಕಾಮ್ಸ್ ಮಳಿಗೆ ಉದ್ಘಾಟಿಸಿ ಮಾತನಾಡಿದರು.
    ಕರೊನಾ ನಿಯಂತ್ರಣಕ್ಕಾಗಿ ಸರ್ಕಾರ ಇದುವರೆಗೆ 550-600 ಕೋಟಿ ರೂ. ಖರ್ಚು ಮಾಡಿದೆ. ಆದರೆ ವಿರೋಧ ಪಕ್ಷದ ನಾಯಕರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅಗತ್ಯವಿದ್ದರೆ ವಿರೋಧಪಕ್ಷದ ನಾಯಕರು ಈ ಬಗ್ಗೆ ತನಿಖೆ ನಡೆಸಲಿ ಎಂದವರು ಸವಾಲು ಹಾಕಿದರು.

    ಮಳಿಗೆಯ ಉದ್ಘಾಟನೆಯ ನಂತರ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಕರೋನಾ ನಿಯಂತ್ರಣಕ್ಕಾಗಿ ತಾಲೂಕಿನಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ತಾಲೂಕು ಟಾಸ್ಕ್‌ಫೋರ್ಸ್ ಸಮಿತಿ ಮುಖ್ಯಸ್ಥರೂ ಆದ ತಹಸೀಲ್ದಾರ್ ಕುಂಞ ಅಹಮ್ಮದ್, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ಎನ್. ಧನಂಜಯ ಅವರಿಂದ ಮಾಹಿತಿ ಪಡೆದರು.

    ಎಂಎಲ್‌ಸಿ ಎನ್.ಅಪ್ಪಾಜಿಗೌಡ, ಜಿ.ಪಂ. ಸದಸ್ಯ ಮುತ್ತಣ್ಣ, ಹಾಪ್‌ಕಾಮ್ಸ್ ಎಂಡಿ ದರ್ಶನ್, ಡಿಡಿ ಮಂಜುನಾಥ್, ತಹಸೀಲ್ದಾರ್ ಕುಂಞ ಅಹಮ್ಮದ್, ಸಿಪಿಐ ರಾಜೇಂದ್ರ, ತಾ.ಪಂ. ಇಒ ಅನಂತರಾಜು, ಟಿಎಚ್‌ಒ ಡಾ.ಧನಂಜಯ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಶಾಂತಾ ಇತರರು ಉಪಸ್ಥಿತರಿದ್ದರು.

    ದೇಗುಲ ಭೇಟಿ ಸಮರ್ಥನೆ: ಕೋವಿಡ್ ನಿಯಮಾನುಸಾರ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧವಿರುವ ದೇವಾಲಯಗಳಿಗೆ ಸಚಿವರ ಭೇಟಿ ಕುರಿತಾಗಿ ಪ್ರತಿಕ್ರಿಯಿಸಿದ ಸಚಿವ ಕೆ.ಸಿ.ನಾರಾಯಣಗೌಡ, ನಾವೂ ಹಿಂದುಗಳೇ. ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದು ನಮ್ಮ ದಿನನಿತ್ಯದ ಸಂಪ್ರದಾಯ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

    ಸಚಿವರ ಕಾರಿನಲ್ಲಿ ಎಂಎಲ್‌ಸಿ: ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ಎನ್.ಅಪ್ಪಾಜಿಗೌಡ ಸಚಿವ ನಾರಾಯಣಗೌಡರ ಕಾರಿನಲ್ಲೇ ಮಳಿಗೆ ಉದ್ಘಾಟನೆಗೆ ಬಂದಿದ್ದು, ಸಚಿವರ ಕಾರಿನಲ್ಲಿಯೇ ಆಸ್ಪತ್ರೆಗೆ ಭೇಟಿ ನೀಡಿದರು. ಸ್ಥಳದಲ್ಲೇ ಇದ್ದ ಜೆಡಿಎಸ್ ಕಾರ್ಯಕರ್ತರಿಗೆ ಈ ಪ್ರಸಂಗ ಅಚ್ಚರಿ ತರಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts