More

    ಸಂಸದರಿಗೆ ಕರೊನಾ ಬಂತು ಅಂತ ಸಂಸತ್ತನ್ನು ಮುಚ್ಚಿದ್ದಾರಾ?: ಈಶ್ವರಪ್ಪ ಪ್ರಶ್ನೆ

    ಬೆಂಗಳೂರು: ಶಾಲಾ ಮಕ್ಕಳಿರುವ ಸ್ಥಳಕ್ಕೇ ಶಿಕ್ಷಕರು ಹೋಗಿ ಪಾಠ ಮಾಡುವ ವಿದ್ಯಾಗಮ ಯೋಜನೆ ಕುರಿತು ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಶಿಕ್ಷಕರಿಂದ ಕೆಲವು ಮಕ್ಕಳಿಗೆ ಕರೊನಾ ಸೋಂಕು ಹರಡಿರುವ ಘಟನೆಯೇ ಇದಕ್ಕೆ ಕಾರಣ. ಇದರಿಂದಾಗಿ ತೀವ್ರ ಚಿಂತೆಗೆ ಒಳಗಾಗಿರುವ ಪಾಲಕರು ವಿದ್ಯಾಗಮ ಯೋಜನೆಯನ್ನೇ ನಿಲ್ಲಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

    ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ, ‘‘ವಿದ್ಯಾಗಮ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ ಪ್ರಶ್ನೆಯೆ ಇಲ್ಲ. ಕೆಲವು ಮಕ್ಕಳಿಗೆ, ಶಿಕ್ಷಕರಿಗೆ ಸೋಂಕು ತಗುಲಿತು ಎಂಬ ಕಾರಣಕ್ಕೆ ಇಡೀ ಯೋಜನೆಯನ್ನೇ ನಿಲ್ಲಿಸಲು ಆಗುವುದಿಲ್ಲ. ಕರೊನಾದಿಂದಾಗಿ ಕೆಲವು ರೈತರು ಸತ್ತಿದ್ದಾರೆ. ಹಾಗಂತ ಎಲ್ಲಿಯಾದರೂ ಕೃಷಿ ಚಟುವಟಿಕೆಯನ್ನು ನಿಲ್ಲಿಸಿದ್ದಾರಾ? ಕರೊನಾ ಬಂದು ಕೇಂದ್ರ ಸಚಿವರು, ಸಂಸದರು ಮೃತಪಟ್ಟಿದ್ದೂ ಇದೆ. ಹಾಗಂತ ಸಂಸತ್ತನ್ನೇ ಮುಚ್ಚಿದ್ದಾರಾ?’’ ಎಂದು ಸುದ್ದಿಗಾರರಿಗೆ ಪ್ರಶ್ನಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಅ. 15ರವರೆಗೆ ಭಾರಿ ಮಳೆ, ಯೆಲ್ಲೋ ಅಲರ್ಟ್

    ‘‘ವಿದ್ಯಾಗಮ ಯೋಜನೆಯಿಂದಲೇ ಕರೊನಾ ಬಂತು ಅಂತ ಯಾಕೆ ಭಾವಿಸುತ್ತೀರಿ? ಆ ಯೋಜನೆ ಇಲ್ಲದೇ ಇದ್ದಾಗಲೂ ಸಾಕಷ್ಟು ಜನ ಶಿಕ್ಷಕರಿಗೆ, ಮಕ್ಕಳಿಗೆ ಕರೊನಾ ಸೋಂಕು ತಗುಲಿಲ್ಲವೇ? ಒಂದು ಯೋಜನೆ ಬೇಡವಾದ ಕಾರಣದಿಂದಾಗಿ ಅದಕ್ಕೆ ಕರೊನಾ ಲಿಂಕ್ ಹಚ್ಚಬಾರದು’’ ಎಂದು ಹೇಳಿದರು.

    ಚಿಂತೆಗೀಡಾಗಿದ್ದ ಆರೋಪಿ ಡಿಕೆಶಿ ಸಂಬಂಧಿಕರಿಗೆ ಹೈಕೋರ್ಟ್‌ನಿಂದ ಸಿಕ್ತು ತಾತ್ಕಾಲಿಕ ರಿಲೀಫ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts