More

    ಭೂ ಸಮಸ್ಯೆ ಪರಿಹಾರಕ್ಕೆ 22ರಂದು ಧರಣಿ

    ಮೂಡಿಗೆರೆ: ಭೂ ಸಮಸ್ಯೆಗಳ ಶಾಶ್ವತ ಪರಿಹಾರ ಹಾಗೂ ಅಕ್ರಮ ಭೂ ಖಾತೆ ರದ್ದತಿಗೆ ಆಗ್ರಹಿಸಿ ಭೂ ಸಂಘರ್ಷ ಸಮಿತಿಯಿಂದ ೆ.22 ಮತ್ತು 23ರಂದು ಪಟ್ಟಣದ ತಾಲೂಕು ಕಚೇರಿ ಎದುರು ಅಹೋರಾತ್ರಿ ನಿರಂತರ ಧರಣಿ ನಡೆಸಲಾಗುವುದು ಎಂದು ಸಮಿತಿ ಅಧ್ಯಕ್ಷ ಬಿ.ರುದ್ರಯ್ಯ ಹೇಳಿದರು.
    ತಾಲೂಕಿನಲ್ಲಿ ನಿವೇಶನ ಮತ್ತು ಸ್ಮಶಾನಕ್ಕಾಗಿ ಜನರು ಈವರೆಗೂ ಭೂಮಿ ಕೇಳುತ್ತಿದ್ದಾರೆಂದರೆ ಇಲ್ಲಿಯವರೆಗೆ ಆಡಳಿತ ನಡೆಸಿದ ಮೂರು ಪಕ್ಷಕ್ಕೂ ನಾಚಿಕೆಯಾಗಬೇಕು. ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಹೊರ ಜಿಲ್ಲೆಯ ಪ್ರಭಾವಿಗಳು ಭೂಮಿ ಆಕ್ರಮಿಸಿಕೊಳ್ಳುತ್ತಿದ್ದಾರೆಯೇ ಹೊರತು, ಇಲ್ಲಿಯೇ ಹುಟ್ಟಿ ಬೆಳೆದ ದಲಿತರು, ಕಾರ್ಮಿಕರಿಗೆ ಬದುಕು ಕಟ್ಟಿಕೊಳ್ಳಲು ಭೂಮಿ ಮೇಲಿನ ಹಕ್ಕು ಸಿಗುತ್ತಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
    ಕಳಸ ಹಾಗೂ ಮೂಡಿಗೆರೆ ಕ್ಷೇತ್ರ ವ್ಯಾಪ್ತಿಯಲ್ಲಿ 6,780 ಎಕರೆ ಭೂಮಿ ಒತ್ತುವರಿಯಾಗಿದೆ. ಭೂ ಅಕ್ರಮ ಮಂಜೂರಾತಿ ವಿಷಯ ಬಯಲಿಗೆ ಬರುವಷ್ಟರಲ್ಲಿ ಉಪವಿಭಾಗಾಧಿಕಾರಿ ಬೇರೆಡೆಗೆ ವರ್ಗಾವಣೆ ಆಗುತ್ತಾರೆ. ಹಾಗಾದರೆ ಪ್ರಾಮಾಣಿಕವಾಗಿ ಕೆಲಸ ಮಾಡುವವರು ಯಾರು ಎಂದು ಪ್ರಶ್ನಿಸಿದರು.
    ತಲೆಮಾರುಗಳಿಂದ ಬದುಕು ಸಾಗಿಸುತ್ತಿರುವವರಿಗೆ ಭೂಮಿ ಇಲ್ಲ. ಇದನ್ನು ಹೀಗೆಯೇ ಬಿಟ್ಟರೆ ಈ ಪದ್ಧತಿ ಮುಂದುವರಿಯುತ್ತದೆ. ಇದಕ್ಕೆ ಮುಕ್ತಿ ಹಾಡಬೇಕು. ಮಲೆನಾಡಿನಲ್ಲಿ ಭೂಮಿ ಒಡೆತನಕ್ಕೆ ಭೂ ಮಿತಿ ಕಾಯ್ದೆ ಜಾರಿಯಾಗಬೇಕು. ದಲಿತರ ಭೂಮಿ ನಾಶಪಡಿಸಿರುವ ಬಗ್ಗೆ ತನಿಖೆಯಾಗಬೇಕು. ಬಡವರಿಗೆ ನಿವೇಶನಕ್ಕಾಗಿ ಭೂಮಿ ಮೀಸಲಿರಿಸಬೇಕು ಎಂದು ಆಗ್ರಹಿಸಿದರು.
    ಭೂಮಿ ಇಲ್ಲದೆ ಸಂಕಷ್ಟದಲ್ಲಿರುವ ಕಳಸ ಹಾಗೂ ಮೂಡಿಗೆರೆ ತಾಲೂಕಿನ ಎಲ್ಲ ಬಡಜನರು ಹಾಗೂ ಪ್ರಗತಿಪರ ಸಂಘಟನೆಯ ಮುಖಂಡರು ಧರಣಿಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು. ಸಮಿತಿ ಉಪಾಧ್ಯಕ್ಷ ರಮೇಶ್ ಕೆಳಗೂರು, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಭಾನುಪ್ರಕಾಶ್, ಹರಿಶ್ ಲಲಿಕೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts