More

    ನಿರ್ಣಯ ಕೈಗೊಳ್ಳುವ ಪ್ರೌಢಿಮೆ ಬೆಳೆಸಿಕೊಳ್ಳಿರಿ

    ಪಿರಿಯಾಪಟ್ಟಣ: ಪ್ರತಿಯೊಬ್ಬರೂ ಸಂಘಟಿತರಾಗುವ ಮೂಲಕ ರಾಜಕೀಯವಾಗಿ ನಿರ್ಣಯ ಕೈಗೊಳ್ಳುವ ಪ್ರೌಢಿಮೆ ಬೆಳೆಸಿಕೊಳ್ಳುವ ಮೂಲಕ ಸಂವಿಧಾನ ಬದಲಿಸುವ ಮಾತುಗಳನ್ನಾಡುವವರಿಗೆ ಉತ್ತರ ನೀಡಲು ಸಜ್ಜಾಗಬೇಕು ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

    ತಾಲೂಕಿನ ನವಿಲೂರು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಹಾಗೂ ಗೌತಮ ಬುದ್ಧ ಅವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.

    ಸಂವಿಧಾನದ ಅಳಿವು, ಉಳಿವಿನ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವಿದ್ದು, ಎಚ್ಚರ ತಪ್ಪಿದರೆ ಸಂವಿಧಾನ ಮತ್ತಷ್ಟು ಅಪಾಯಕ್ಕೆ ಸಿಲುಕಲಿದೆ ಎಂದರು. ಯೋಗ್ಯರು, ಸಮರ್ಥರು ಹಾಗೂ ವಿವೇಕರ ಕೈಗೆ ಅಧಿಕಾರ ನೀಡುವ ನಿರ್ಣಯ ಕೈಗೊಳ್ಳಬೇಕು ಎಂದರು.

    ಅಂಬೇಡ್ಕರ್, ಬುದ್ಧ, ಬಸವಣ್ಣರ ಪ್ರತಿಮೆಗಳು ಕೇವಲ ಪೂಜಾ ವಸ್ತುಗಳಾಗಿರದೆ ತುಳಿತಕ್ಕೊಳಗಾದ ಶೋಷಿತರು ತಮ್ಮ ಹಕ್ಕುಗಳನ್ನು ಪಡೆಯಲು ಪ್ರೇರಣಾ ಶಕ್ತಿಗಳಾಗಿದ್ದಾರೆ ಎಂದರು.

    ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಮಾತನಾಡಿ, ಬಾಬಸಾಹೇಬರು ದೇಶದ ಎಲ್ಲ ವರ್ಗದ ಜನರನ್ನು ಗಮನದಲ್ಲಿರಿಸಿ ಶ್ರೇಷ್ಠವಾದ ಸಂವಿಧಾನ ರಚಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಂವಿಧಾನ ಬದಲಿಸಬೇಕು ಎನ್ನುವ ವ್ಯಕ್ತಿಗಳನ್ನು ನಾವು ದೂರವಿಡಬೇಕಿದೆ ಎಂದರು.
    ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳು ಎಂದೂ ಜನಪರವಾಗಿರುತ್ತವೆ. ಮುಂದಿನ ದಿನಗಳಲ್ಲಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಬೌದ್ಧ ಧರ್ಮ ಗುರು ಕರ್ಮಪ, ಬೋದಿದತ್ತ ಬಂತೇಜಿ, ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ಚಿಂತಕ ಹೊ.ಬ.ರಘೋತ್ತಮ, ನವಿಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಾ ಪ್ರಕಾಶ್, ಉಪಾಧ್ಯಕ್ಷ ಬಸವರಾಜು, ಯಶೋಧಮ್ಮ, ಮಂಜುಳಾ, ಶಾಂತಮ್ಮ, ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಮಹದೇವು, ಗ್ರಾಮದ ಯಜಮಾನ ಸೋಮೇಗೌಡ, ಸಣ್ಣದೊಡ್ಡಯ್ಯ, ರಾಮು, ತಮ್ಮಣ್ಣಯ್ಯ, ಪಿ.ಮಹದೇವ್, ಎಸ್.ರಾಮು, ಚೆನ್ನಪ್ಪ, ಚೆಲುವರಾಜು ಇತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts