More

    ಹಾಲುಮತ ಸಂಸ್ಕೃತಿ ವೈಭವಕ್ಕೆ ಚಾಲನೆ

    ದೇವದುರ್ಗ: ತಾಲೂಕಿನ ಕೃಷ್ಣಾ ತಟದ ತಿಂಥಣಿ ಬ್ರಿಡ್ಜ್‌ನ ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ ಹಮ್ಮಿಕೊಂಡಿರುವ ಹಾಲುಮತ ಸಂಸ್ಕೃತಿ ವೈಭವಕ್ಕೆ ಬುಧವಾರ ಸಂಜೆ ವಿಧ್ಯುಕ್ತ ಚಾಲನೆ ನೀಡಲಾಗಿದೆ. ಶ್ರೀ ಸಿದ್ದರಾಮಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಂಜೆ 5ಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ.


    ಸಂಜೆ 5ಕ್ಕೆ ಹನ್ನೊಂದು ಪಲ್ಲಕ್ಕಿ ಆಹ್ವಾನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಮಾಳವಳ್ಳಿ ಮಾಳಿಂಗರಾಯ, ಜೇವರ್ಗಿ ಮಾಳಿಂಗರಾಯ, ಹೂವಿನಬಾವಿ ಬೀರಲಿಂಗೇಶ್ವರ, ಕರಡಕಲ್ ಬೀರಲಿಂಗೇಶ್ವರ, ಯಲಗಲದಿನ್ನಿ ಬೀರಲಿಂಗೇಶ್ವರ, ಜವಳಗೆರೆಯ ಮಾಳಿಂಗೇಶ್ವರ ದೇವರ ಪಲ್ಲಕ್ಕಿ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ರಾತ್ರಿ 7ಕ್ಕೆ ಪೂಜಾರಿ ಸಮೂಹದಿಂದ ಡೊಳ್ಳು-ಕಂಬಳಿ ಕುರಿ, ಬಂಡಾರದ ಪೂಜೆ ನೆರವೇರಿತು. ರಾತ್ರಿ 9ಕ್ಕೆ ಡೊಳ್ಳು ಪದಗಳ ಗಾಯನ ಜರುಗಿತು.

    ಗುರುವಾರ ಬೆಳಗ್ಗೆ 7ಕ್ಕೆ ಕೃಷ್ಣಾನದಿಯಲ್ಲಿ ಗಂಗಾ ಪೂಜೆ, ಹಾಲುಮತ ಕಲಾಮೇಳದೊಂದಿಗೆ 108ಆರತಿ ಮೆರವಣಿಗೆ ಜರುಗಿತು. ಬೆಳಗ್ಗೆ 10ಕ್ಕೆ ಶ್ರೀಬೀರಲಿಂಗೇಶ್ವರ, ಶ್ರೀಭರಮಲಿಂಗೇಶ್ವರ ದೇವಸ್ಥಾನವನ್ನು ಕೆ.ಆರ್.ನಗರದ ಶ್ರೀ ಶಿವಾನಂದಪುರಿ ಸ್ವಾಮೀಜಿ ಉದ್ಘಾಟಿಸಿದರು. ಕುರುಬರ ಸಂಘದ ಪ್ರಭಾರ ಅಧ್ಯಕ್ಷ ಸುಬ್ರಹ್ಮಣ್ಯ ಧ್ವಜಾರೋಹಣ ನೆರವೇರಿಸಿದರು. ಶಿರೂರು ಮಠದ ಶ್ರೀ ಚಿನ್ಮಯಾನಂದ ಸ್ವಾಮೀಜಿ ಸಾಮೂಹಿಕ ಪಟ್ಟ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಕಾಗಿನೆಲೆ ಮಹಾಸಂಸ್ಥಾನದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶ್ರೀಶಿವಾನಂದ ಪುರಿ ಸ್ವಾಮೀಜಿ, ಹೊಸದುರ್ಗ ಕನಕಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ, ಶ್ರೀಲಿಂಗಬೀರದೇವ ಸ್ವಾಮೀಜಿ, ಬೀರಪ್ಪ ಸ್ವಾಮೀಜಿ, ಪೂಜಾರಿ ಮಾರೆಪ್ಪ ಮುತ್ಯ, ಪೂಜಾರಿ ಕೆಂಚಪ್ಪ ಮುತ್ಯ, ಪೂಜಾರಿ ಧರ್ಮರಾಯ ಮುತ್ಯ, ಪೂಜಾರಿ ಅಂಬಣ್ಣ ಇತರರಿದ್ದರು.

    ಕಣ್ಮನ ಸೆಳೆದ ಡೊಳ್ಳು ಕುಣಿತ
    ಹಾಲುಮತ ಸಂಸ್ಕೃತಿ ವೈಭವದಲ್ಲಿ ವಿವಿಧ ಕಲಾವಿದರ ಡೊಳ್ಳು ಕುಣಿತ ಕಣ್ಮನ ಸೆಳೆಯಿತು. ಬೆಳಗ್ಗೆ ಶ್ರೀಬೀರಲಿಂಗೇಶ್ವರ ದೇವರಿಗೆ ಭಂಡಾರ ಅರ್ಪಣೆ, ಕಂಬಳಿ ಸೇವೆ ಗಮನಸೆಳೆಯಿತು. ಆಕಾಶವಾಣಿ ಕಲಾವಿದ ಬಸವರಾಜ ಭಂಟನೂರು, ಮೌನೇಶ ಕುಮಾರ ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು. ಪೂಜಾರಿಗಳು, ಕಂಸಾಳೆ ಕುಣಿತ ಸೇರಿ ವಿವಿಧ ಸಾಂಪ್ರದಾಯಿಕ ಕುಣಿತಗಳು ಗಮನಸೆಳೆದವು. ಬೆಳಗ್ಗೆ 10ಕ್ಕೆ ಕಣ್ಣಿನ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ನೂರಾರು ಜನರು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ರಾತ್ರಿ 8.30ಕ್ಕೆ ಸಿದ್ಧಪುರುಷ ಗೂಳ್ಯದ ಗಾದಿಲಿಂಗಪ್ಪ ತಾತ ನಾಟಕ ಪ್ರದರ್ಶನ ಕಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts