More

    ಕೃಷಿ ಇಲಾಖೆ ಎಡಿ ಪ್ರಿಯಾಂಕಾ ಅಮಾನತು

    ದೇವದುರ್ಗ: ತಾಲೂಕಿನಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿದ್ದ, ಪ್ರಸ್ತುತ ಸಿಂಧನೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಎಸ್.ಪ್ರಿಯಾಂಕಾರನ್ನು ಅನುದಾನ ದುರ್ಬಳಕೆ ಆರೋಪದ ಮೇಲೆ ಅಮಾನತು ಮಾಡಿ ಕೃಷಿ ಲಾಖೆ ಆಯುಕ್ತ ಬಿ.ಶರತ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

    4.60 ಲಕ್ಷ ರೂ. ದುರ್ಬಳಕೆ ಬಗ್ಗೆ ತಾಪಂ ಮಾಜಿ ಸದಸ್ಯ ಖಾಸಿಂಸಾಬ್ ಅಂಜಳ ದೂರು ನೀಡಿದ್ದರು. ಈ ಕುರಿತು ತನಿಖೆ ಕೈಗೊಳ್ಳುವಂತೆ ಕೃಷಿ ಉಪನಿರ್ದೇಶಕಗೆ ಇಲಾಖೆಯ ನಿರ್ದೇಶಕ ಆದೇಶಿಸಿದ್ದರು. ವಿಚಾರಣೆಗೆ ಹಾಜರಾಗುವಂತೆ ಪ್ರಿಯಾಂಕಾಗೆ ನೋಟೀಸ್ ನೀಡಲಾಗಿತ್ತು. ಆದರೆ, ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದ ದೂರು ಆಗಿರುವುದರಿಂದ ವಿಚಾರಣೆಗೆ ಹಾಜರಾಗುವ ಪ್ರಮೇಯ ಉದ್ಭವಾಗುವದಿಲ್ಲ ಎಂದು ಇ ಮೇಲ್ ಮೂಲಕ ತಿಳಿಸಿ ವಿಚಾರಣೆಗೆ ಗೈರಾಗಿದ್ದರು.

    ತನಿಖೆಗೆ ಹಾಜರಾಗದಿರುವುದು ಹಾಗೂ ಮೇಲಧಿಕಾರಿಯೊಂದಿಗೆ ಉದ್ದಟತನದಿಂದ ಪತ್ರ ವ್ಯವಹಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಸ್ತುಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ತನಿಖಾಧಿಕಾರಿ ಶಿಫಾರಸು ಮಾಡಿದ್ದರು. ಅನುದಾನ ದುರ್ಬಳಕೆ, ಉದ್ದಟತನ ಹಾಗೂ ಕಚೇರಿ ಸಿಬ್ಬಂದಿ ಮೇಲೆ ದಬ್ಬಾಳಿಕೆ ಆರೋಪದ ಮೇಲೆ ಸೇವೆಯಿಂದ ಅಮಾನತು ಮಾಡಲಾಗಿದೆ. ಅಮಾನತು ಅವಧಿಯಲ್ಲಿ ಇಲಾಖೆ ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡದಂಡೆ ಸೂಚಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts