More

    15 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ- ಎಪಿಎಂಸಿ ಅಧ್ಯಕ್ಷ ಪ್ರಕಾಶ ಪಾಟೀಲ್ ಹೇಳಿಕೆ

    ದೇವದುರ್ಗ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಗ್ರ ಅಭಿವೃದ್ಧಿಗಾಗಿ 15 ಕೋಟಿ ರೂ. ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಾರ್ಷಿಕ ಐದು ಕೋಟಿ ರೂ. ಆದಾಯದ ಗುರಿ ಹಾಕಿಕೊಳ್ಳಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಪ್ರಕಾಶ ಪಾಟೀಲ್ ಜೇರಬಂಡಿ ಹೇಳಿದರು.

    ಪಟ್ಟಣದ ಎಪಿಎಂಸಿ ಆವರಣದಲ್ಲಿ ಖಾಲಿ ಮಳಿಗೆ, ಒತ್ತುವರಿ ತೆರವು ಪರಿಶೀಲನೆ ನಡೆಸಿ ಶುಕ್ರವಾರ ಮಾತನಾಡಿದರು. ಎಪಿಎಂಸಿ ಆವರಣದಲ್ಲಿನ ಮಳಿಗೆ, ಖಾಲಿ ಜಾಗದ ಬಾಡಿಗೆ ಹಾಗೂ ದನದ ಸಂತೆ ತೆರಿಗೆ ಸೇರಿ ವಾರ್ಷಿಕ 5 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ. ತೂಕದ ಯಂತ್ರ ಖರೀದಿ, ಪ್ಲಾಟ್‌ಫಾರ್ಮ್ ಹಾಗೂ ಮೂಲಸೌಲಭ್ಯ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

    ಎಪಿಎಂಸಿಯಲ್ಲಿ 19ವಾಣಿಜ್ಯ ಮಳಿಗೆಗಳಿದ್ದು, ಪ್ರತಿ ಮಳಿಗೆಗೆ 8ರಿಂದ 15ಸಾವಿರ ರೂ. ಬಾಡಿಗೆ ನಿಗದಿ ಮಾಡಲಾಗಿದೆ. ಖಾಲಿ ಜಾಗದಲ್ಲಿ ಖಾಸಗಿಯವರು ಡಬ್ಬಿ, ಹೋಟೆಲ್ ಹಾಗೂ ಇತರ ವ್ಯಾಪಾರ ಮಾಡಲು ಹಾಕಿಕೊಂಡ ಅಂಗಡಿಗಳಿಂದಲೂ ಬಾಡಿಗೆ ಪಡೆಯಲಾಗುತ್ತಿದೆ. ಈ ಮೂಲಕ ಮಾಸಿಕ ಸುಮಾರು 3.5 ಲಕ್ಷ ರೂಪಾಯಿರಿಂದ 4 ಲಕ್ಷ ರೂ. ಬಾಡಿಗೆ ಬರುತ್ತಿದೆ.

    ಎ.ವೆಂಕಟೇಶ ನಾಯಕ ಕಲ್ಯಾಣ ಮಂಟಪ ಅಭಿವೃದ್ಧಿ ಮಾಡಿ ಬಾಡಿಗೆಗೆ ನೀಡಲಾಗುತ್ತಿದೆ. ನಾಲ್ಕು ಗೋದಾಮುಗಳ ಪೈಕಿ ಒಂದರಲ್ಲಿ ಕೋಲ್ಡ್ ಸ್ಟೋರೇಜ್ ಮಾಡುವ ಗುರಿಯಿದೆ. ಉಳಿದ ಮೂರು ಬಾಡಿಗೆ ಕೊಡಲಾಗುವುದು. ಈ ಬಗ್ಗೆ ಶೀಘ್ರ ಟೆಂಡರ್ ಕರೆಯಲಾಗುವುದು. ತಾಲೂಕಿನ ರೈತರು ಬೆಳೆದ ಬೆಳೆಗಳು ನಮ್ಮಲ್ಲೇ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts