More

    ಪ್ರತಿಯೊಬ್ಬರಿಗೂ ಸಮಾನ ಹಕ್ಕು; ಹಿರಿಯ ವಕೀಲ ಹನುಮಂತ್ರಾಯ ಚಿಂತಲಕುಂಟಾ ಅಭಿಮತ

    ಸಂವಿಧಾನ ಸಮರ್ಪಣಾ ದಿನಾಚರಣೆ

    ದೇವದುರ್ಗ: ಧರ್ಮ, ಭಾಷೆ, ಶ್ರೀಮಂತ, ಬಡವ ಎನ್ನದೆ ಪ್ರತಿಯೊಬ್ಬರಿಗೂ ಸಮಾನ ಅವಕಾಶವನ್ನು ಸಂವಿಧಾನ ಕಲ್ಪಿಸಿಕೊಟ್ಟಿದೆ. ಹೀಗಾಗಿ ಸರ್ವರಿಗೂ ಸಂವಿಧಾನವೇ ಕಾನೂನು ಗ್ರಂಥವಾಗಿದೆ ಎಂದು ಹಿರಿಯ ವಕೀಲ ಹನುಮಂತ್ರಾಯ ಚಿಂತಲಕುಂಟಾ ಹೇಳಿದರು.

    ಪಟ್ಟಣದ ತಾಲೂಕು ವಕೀಲರ ಸಂಘದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನಚ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶಕ್ಕೆ ಅತ್ಯಂತ ದೊಡ್ಡ ಸಂವಿಧಾನ ನೀಡಿದ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಪ್ರತಿಯೊಂದು ಸಮಸ್ಯೆಗೂ ಸಂವಿಧಾನದಲ್ಲಿ ನ್ಯಾಯ ಹಾಗೂ ಪರಿಹಾರವಿದೆ. ಸಮಾಜದಲ್ಲಿ ತುಳಿತೊಕ್ಕೊಳಗಾದ ದಲಿತರು, ಬಡವರು, ನಿರ್ಗತಿಕರು ಸೇರಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಬೇಕು ಎನ್ನುವುದು ಸಂವಿಧಾನದ ಆಶಯವಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಒಂದೇ ರೀತಿಯ ಕಾನೂನು ,ಹಕ್ಕು, ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts