More

    ಹಕ್ಕುಪತ್ರ ನೀಡುವ ಬೇಡಿಕೆಗೆ ಸ್ಪಂದಿಸದ ಸರ್ಕಾರ

    ದೇವದುರ್ಗ: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ನಿವೇಶನ ರಹಿತರಿಗೆ ಜಮೀನು ಮಂಜೂರು ಮಾಡಬೇಕೆಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಿನಿವಿಧಾನಸೌಧ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

    ಸುಮಾರು ನಾಲ್ಕೈದು ದಶಕಗಳಿಂದ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುತ್ತಿಲ್ಲ. ದಲಿತರು ಭೂ ಮಾಲೀಕರ ಹೊಲ-ಗದ್ದೆಗಳಲ್ಲಿ ದುಡಿದು ಜೀವನ ಸಾಗಿಸುವಂತಾಗಿದೆ. ಸುವರ್ಣಗ್ರಾಮ, ಆಶ್ರಯ ನಿವೇಶನ ಸೇರಿ ವಿವಿಧ ವಸತಿ ಯೋಜನೆಯಡಿ ಸರ್ಕಾರ ಭೂಮಿ ಗುರುತಿಸಿ ದಶಕಗಳೇ ಕಳೆದರೂ ಅಧಿಕಾರಿಗಳು ಹಂಚಿಕೆ ಮಾಡಿ ಹಕ್ಕುಪತ್ರ ನೀಡುವಲ್ಲಿ ವಿಫಲರಾಗಿದ್ದಾರೆ. ನಿರಂತರ ಹೋರಾಟ ಮಾಡಿ ಅರ್ಜಿ ಸಲ್ಲಿಸಿದ್ದರೂ ಸರ್ಕಾರ ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಬಡವರಿಗೆ ಸೂಕ್ತ ನಿವೇಶನ ನೀಡಿ ಮನೆ ಮಂಜೂರು ಮಾಡಬೇಕು. ಸುವರ್ಣಗ್ರಾಮ ಯೋಜನೆಯಡಿ ಆಯ್ಕೆಯಾದ ಕ್ಯಾದಿಗೇರಾ, ಶಾವಂತಗೇರಾ, ಲಿಂಗದಹಳ್ಳಿ, ತಿಪ್ಪಲದಿನ್ನಿ, ನಾಗೋಲಿ, ಚಿಂತಲಕುಂಟ ಗ್ರಾಮಗಳ ಬಡವರಿಗೆ ನಿವೇಶನ ನೀಡಬೇಕು. ಮಸರಕಲ್, ಗಬ್ಬೂರು, ಮಲ್ಲಾಪುರ ಗ್ರಮಗಳ ಫಲಾನುಭವಿಗಳಿಗೆ ಲೇಔಟ್ ನಿರ್ಮಿಸಿ ಸೌಲಭ್ಯ ಕಲ್ಪಿಸಬೇಕು. ಕೊರತೆ ಇರುವ ಕಡೆ ಸ್ಮಶಾನ ಭೂಮಿ ಮಂಜೂರು ಮಾಡಬೇಕು. ಮಸೀದಪುರ ಗ್ರಾಮ ಸ್ಥಳಾಂತರ ಮಾಡಬೇಕು.

    ಪಟ್ಟಣದ ಸರ್ವೇ ನಂ.3/1 ಜಾಗ ಒತ್ತುವರಿ ತಡೆಯಬೇಕು. ರೋಡಲಬಂಡ ಏತನೀರಾವರಿ ಯೋಜನೆ ಜಾರಿಗೊಳಿಸುವುದೂ ಸೇರಿ ಇತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts