More

    ಬೆಲೆ ಏರಿಕೆಯಿಂದ ಜೀವನ ನಡೆಸುವುದು ಕಷ್ಟ; ಸಿಐಟಿಯು ತಾಲೂಕು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ ಹೇಳಿಕೆ


    ದೇವದುರ್ಗ: ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಹಾಗೂ ಎಪಿಎಂಸಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್‌ಗೆ ತಾಲೂಕಿನಲ್ಲಿ ಸೋಮವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

    ಪಟ್ಟಣದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ಸೇರಿದ ಮುಖಂಡರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಿನಿವಿಧಾನಸೌಧ ಮಾರ್ಗವಾಗಿ ಜೆಪಿ ವೃತ್ತದವರೆಗೆ ರ‌್ಯಾಲಿ ನಡೆಸಿದರು. ಜೆಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಸಿಐಟಿಯು ತಾಲೂಕು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿ ಮಾಡಿದ ಕೃಷಿ ಕಾಯ್ದೆಯಿಂದ ರೈತರ ಜಮೀನಿಗೆ ಕುತ್ತುಬರಲಿದೆ. ಎಪಿಎಂಸಿ ಕಾಯ್ದೆ ಹಮಾಲರು, ಕೂಲಿಕಾರರ ಕೆಲಸ ಕಸಿಯಲಿದ್ದು, ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೂಡಲೇ ಭೂಸುಧಾರಣೆ, ಎಪಿಎಂಸಿ ಕಾಯ್ದೆ ವಾಪಸ್ ಪಡೆಯಬೇಕು. ಇಂಧನ ಬೆಲೆ ಇಳಿಸಿ, ಬೆಲೆ ಏರಿಕೆ ತಡೆಯಬೇಕು, ಕೃಷಿ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಕೈಬಿಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಹನುಮಂತ ಮನ್ನಾಪುರ್, ರಮೇಶ ರಾಮನಾಳ, ಮರಿಲಿಂಗ ಪಾಟೀಲ್, ಮೇಲಪ್ಪ ಬಾವಿಮನಿ, ಜಿ.ಹನುಮಂತ್ರಾಯ ನಾಯಕ ವಕೀಲ, ರಂಗಮ್ಮ ಅನ್ವರ್, ಮರಿಯಮ್ಮ, ರಮಾದೇವಿ, ಈಶಮ್ಮ ಊಟಿ, ಸುಮಂಗಲಾ ಇತರರಿದ್ದರು.

    ಸುಗಮ: ರೈತ ಸಂಘಟನೆಗಳು ನೀಡಿದ್ದ ಭಾರತ ಬಂದ್‌ಗೆ ತಾಲೂಕಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿ-ಮುಂಗಟ್ಟುಗಳು, ಸಾರಿಗೆ ಸಂಚಾರಕ್ಕೆ ಎಂದಿನಂತಿದ್ದವು. ಕೆಲಕಡೆ ಸಂಘಟನೆಗಳು ಅಂಗಡಿ ಮುಂಗಟ್ಟು ಬಲವಂತವಾಗಿ ಮುಚ್ಚಿಸಲು ಯತ್ನಿಸಿದವು. ಜಾಲಹಳ್ಳಿ, ಗಲಗ, ಅರಕೇರಾ, ಗಬ್ಬೂರು ಸೇರಿ ವಿವಿಧೆಡೆ ಬಂದ್‌ಗೆ ಸ್ಪಂದನೆ ಸಿಗಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts