More

    ಅತೃಪ್ತರ ಸಭೆಯಲ್ಲಿ ಪಾಲ್ಗೊಂಡ ಶಾಸಕರ ಡಿಟೇಲ್ಸ್ ಇಲ್ಲಿದೆ ನೋಡಿ…

    ಬೆಂಗಳೂರು: ಹಿರಿಯ ಶಾಸಕ ಉಮೇಶ್​ ಕತ್ತಿ ಗುರುವಾರ ರಾತ್ರಿ ಭೋಜನಕೂಟ ಹೆಸರಲ್ಲಿ ನಡೆಸಿದ ಸಭೆಯಲ್ಲಿ ಪಾಲ್ಗೊಂಡವರ ಡಿಟೇಲ್ಸ್​ ಇಲ್ಲಿದೆ. ಇದು ಅತೃಪ್ತರ ಸಭೆ ಎಂದೇ ಹೇಳಲಾಗುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ಶಾಸಕರು ಪಾಲ್ಗೊಂಡಿದ್ದರು.

    ಇದನ್ನೂ ಓದಿರಿ ಕ್ಷುಲ್ಲಕ ರಾಜಕೀಯ ಬದಿಗಿಡಿ

    ವಿಜಯಪುರ ನಗರದ ಬಸನಗೌಡ ಯತ್ನಾಳ್, ಅರಬಾವಿಯ ಬಾಲಚಂದ್ರ ಜಾರಕಿಹೊಳಿ, ರಾಯಚೂರು ನಗರದ ಶಿವರಾಜ್ ಪಾಟೀಲ್, ಸುರಪುರದ ರಾಜುಗೌಡ, ಕಲಬುರಗಿ ದಕ್ಷಿಣದ ಅಪ್ಪುಗೌಡ, ಸೇಡಂನ ರಾಜಕುಮಾರ್ ಪಾಟೀಲ್, ಅಳಂದ ಕ್ಷೇತ್ರದ ಸುಭಾಷ್ ಗುತ್ತೇದಾರ್, ಕಲಬುರಗಿ ಗ್ರಾಮೀಣದ ಬಸವರಾಜ ಮತ್ತಿಮಡು, ಗಂಗಾವತಿಯ ಪರಣ್ಣ ಮುನವಳ್ಳಿ, ಸಿರಗುಪ್ಪದ ಸೋಮಲಿಂಗಪ್ಪ, ಹೊಸದುರ್ಗದ ಗೂಳಿಹಟ್ಟಿ ಶೇಖರ್, ತೇರದಾಳದ ಸಿದ್ದು ಸವದಿ, ರಾಮದುರ್ಗ ಕ್ಷೇತ್ರದ ಮಹದೇವಪ್ಪ ಯಾದವಾಡ ಇತರರು ಶಾಸಕ ಉಮೇಶ್ ಕತ್ತಿ ಏರ್ಪಡಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.

    ಇದನ್ನೂ ಓದಿರಿ ಫೋನ್​ನಲ್ಲೇ ​ಉಮೇಶ್​ ಕತ್ತಿಗೆ ಸಿಎಂ ಕ್ಲಾಸ್!

    ಈ ಭೋಜನಕೂಟದ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಶಾಸಕ ಮುರಗೇಶ್ ನಿರಾಣಿ, ನಾನು ಯಾವ ಊಟಕ್ಕೂ ಹೋಗಿಲ್ಲ. ಯಾವುದೇ ಬಂಡಾಯ ಇಲ್ಲ. ಯಡಿಯೂರಪ್ಪ ನಮ್ಮ ಪರಮೋಚ್ಚ ನಾಯಕ ಎಂದಿದ್ದಾರೆ.

    ಉಮೇಶ್​ ಕತ್ತಿ ಅವರು ನಮಗೆ ಸೀನಿಯರ್. ಅವರನ್ನು ಮಂತ್ರಿ ಮಾಡಬೇಕು. ನನ್ನನ್ನು ಮಂತ್ರಿ ಮಾಡುವುದು ಬಿಡುವುದು ಸಿಎಂ ಯಡಿಯೂರಪ್ಪ ಅವರಿಗೆ ಬಿಟ್ಟ ವಿಚಾರ. ಪಕ್ಕದಲ್ಲಿ ಇರೋರು ಎಸ್ಕರ್ಟ್ ತೆಗೆದುಕೊಂಡು ಹೋದ್ರೆ ಕತ್ತಿ ಅವರಿಗೆ ಬೇಸರ ಆಗಿರಬಹುದು. ಹಾಗಂತ ಬಂಡಾಯ ಅಲ್ಲ. ಯಡಿಯೂರಪ್ಪ ನಲವತ್ತು ವರ್ಷ ಪಕ್ಷ ಕಟ್ಟಿದ್ದಾರೆ. ಅವರ ಜತೆ ನಾವು ಇರ್ತೀವಿ ಎಂದು ಹೇಳಿದ್ದಾರೆ.

    ಪಕ್ಷದ ಬೆಳವಣಿಗೆಗಳ ಬಗ್ಗೆ ಮಾತನಾಡುವಷ್ಟು ದೊಡ್ಡವ ನಾನಲ್ಲ. ಸರ್ಕಾರ ಮೂರು ವರ್ಷ ಇರುತ್ತೆ. ಯಡಿಯೂರಪ್ಪ ಸಿಎಂ ಆಗಿ ಇರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿರಿ ಸಭೆ ನಡೆಸಿದ ಮಾತ್ರಕ್ಕೆ ಏನೂ ಆಗಲ್ಲ, ಉಮೇಶ್ ಕತ್ತಿ ಪಕ್ಷ ಬಿಡಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts