More

    ಪಿಡಿಒ ಹುದ್ದೆಗಳಿಗೆ ಕೆಳ ಹಂತದ ಅಧಿಕಾರಿ ನಿಯೋಜನೆ?

    ಬೆಂಗಳೂರು: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವರ್ಗಾವಣೆಯನ್ನು ಸರ್ಕಾರ ಸಮರ್ಪಕವಾಗಿ ನಿರ್ವಹಿಸದೇ ಇರುವುದರಿಂದ ಸಾಲು ಸಾಲು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ.

    ಸಾರ್ವತ್ರಿಕ ವರ್ಗಾವಣೆ ನಿರಂತರವಾಗಿ ನಡೆಯುತ್ತಲೇ ಇದೆ. ಅನೇಕರಿಗೆ ಸ್ಥಳ ತೋರಿಸದೇ ವರ್ಗಾವಣೆ ಮಾಡಲಾಗಿದೆ. ಏಕಾಏಕಿ ಕೆಲವು ಜಿಲ್ಲೆಗಳಿಂದ ಹೆಚ್ಚು ಸಂಖ್ಯೆಯಲ್ಲಿ ಪಿಡಿಒಗಳನ್ನು ವರ್ಗಾವಣೆ ಮಾಡಿರುವುದರಿಂದ ಜನರ ಕೆಲಸ ಕಾರ್ಯಗಳಿಗೂ ಅಡ್ಡಿಯಾಗಿದೆ.

    ಈ ನಡುವೆ ಪಿಡಿಒ ಹುದ್ದೆಗಳು ಖಾಲಿ ಇರುವುದರಿಂದ ಜಿಲ್ಲಾ ಪಂಚಾಯಿತಿ ಸಿಇಒಗಳು ಕಾನೂನು ಬಾಹಿರವಾಗಿ ಗ್ರೇಡ್ 2 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಪಿಡಿಒ ಹುದ್ದೆಗೆ ನಿಯೋಜನೆ ಮಾಡುತ್ತಿದ್ದಾರೆ.

    ಗ್ರೇಡ್ 1 ಕಾರ್ಯದರ್ಶಿ ಹುದ್ದೆ ಪಿಡಿಒ ಹುದ್ದೆಗೆ ತತ್ಸಮಾನ ಅಷ್ಟೆ. ಆದರೆ ಸ್ಥಳೀಯ ಮಟ್ಟದಲ್ಲಿ ಪರಸ್ಪರ ಈ ಹುದ್ದೆಗಳಿಗೆ ನಿಯೋಜನೆ ಮಾಡುವಂತಿಲ್ಲ. ಇನ್ನು ಗ್ರೇಡ್ 2 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ಈ ಹುದ್ದೆ ನೀಡುವಂತೆಯೇ ಇಲ್ಲ. ಆದರೂ ಕೊಡಗು ಸೇರಿದಂತೆ ವಿವಿಧೆಡೆ ಸ್ಥಳೀಯ ಮಟ್ಟದಲ್ಲೇ ಪಿಡಿಒಗಳ ಹುದ್ದೆಗೆ ಕಾರ್ಯದರ್ಶಿ ಗ್ರೇಡ್ 1, ಗ್ರೇಡ್ 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನೂ ಕಾನೂನು ಉಲ್ಲಂಸಿ ಸ್ಥಳೀಯ ಮಟ್ಟದಲ್ಲೇ ನಿಯೋಜನೆ ಮಾಡಲಾಗುತ್ತಿದೆ. ಕೆಳ ಹಂತದ ಅಧಿಕಾರಿಗಳನ್ನು ಪಿಡಿಒ ಹುದ್ದೆಗೆ ನಿಯೋಜನೆ ಮಾಡುವುದರಿಂದ ಪಿಡಿಒ ಹುದ್ದೆ ಗೌರವ ಕೂಡ ಕಡಿಮೆಯಾಗುತ್ತದೆ. ಅಲ್ಲದೆ, ಪಿಡಿಒ ಹುದ್ದೆ ನಿರ್ವಹಣೆಗೆ ಅನುಭವದ ಅವಶ್ಯಕತೆಯೂ ಇದೆ. ಜತೆಗೆ ದೊಡ್ಡ ಮೊತ್ತದ ಕಾಮಗಾರಿಗಳು ನಡೆಯುವುದರಿಂದ ಹೊಣೆಗಾರಿಕೆಯೂ ಮುಖ್ಯವಾಗುತ್ತದೆ.

    ಆದರೆ ಇದಾವುದನ್ನೂ ಪರಿಗಣಿಸದೇ ಕೊಡಗು ಸೇರಿದಂತೆ ವಿವಿಧ ಕಡೆ ಪಿಡಿಒ ಹುದ್ದೆಗಳಿಗೆ ಬೇರೆ ಅಧಿಕಾರಿಗಳನ್ನು ಸ್ಥಳೀಯವಾಗಿಯೇ ತೀರ್ಮಾನ ಕೈಗೊಂಡು ನಿಯೋಜನೆ ಮಾಡುವುದು ಮುಂದುವರೆದಿದೆ. ಸರ್ಕಾರ ಇದನ್ನು ನಿಯಂತ್ರಿಸಬೇಕಿದೆ.

    ತ್ರಿಶಂಕು ಸ್ಥಿತಿಯಲ್ಲಿ 60-70 ಪಿಡಿಒಗಳು ; ಕೆಲಸವಿಲ್ಲದೇ ಎರಡು ತಿಂಗಳು ಸಂಬಳ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts