More

    ನೀರಿನ ಅಪಮೌಲ್ಯ ಸರಿಯಲ್ಲ

    ಮೈಸೂರು: ನದಿಂುನ್ನು ಪೂಜಿಸುವುದು ತಪ್ಪಲ್ಲ. ಆದರೆ, ನದಿಯ ದಡದಲ್ಲಿ ಮಾಡುವ ಪೂಜೆ ನದಿಯ ನೀರನ್ನು ಕಲುಷಿತ ಮಾಡುವ ಮಟ್ಟಕ್ಕೆ ಹೋಗಬಾರದು ಎಂದು ಪ್ರಾದೇಶಿಕ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಂುದ ವಿಜ್ಞಾನಿ ಬಿ.ಎಸ್. ಂೋಗೇಂದ್ರ ಹೇಳಿದರು.
    ಬಾಸುದೇವ ಸೋವಾನಿ ಕಾಲೇಜು, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಂು ವತಿಯಿಂದ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಜಲ ದಿನ ಕಾಂರ್ುಕ್ರಮ ಉದ್ಘಾಟಿಸಿ ವಾತನಾಡಿದರು.

    ಭಾರತೀಂು ಪರಂಪರೆಯಲ್ಲಿ ಜನರು ನೈಸರ್ಗಿಕ ಸಂಪನ್ಮೂಲವನ್ನು ಉಳಿಸುವ ಉದ್ದೇಶದಿಂದ ನದಿ, ಬೆಟ್ಟ, ಗುಡ್ಡ ಇತ್ಯಾದಿಗಳನ್ನು ಆರಾಸುತ್ತಿದ್ದರು. ಇತ್ತೀಚೆಗೆ ಕುಂಭಮೇಳ, ಗಣೇಶ ಹಬ್ಬಗಳಲ್ಲಿ ಪೂಜಾ ವಸ್ತುಗಳು ಮತ್ತು ಗಣೇಶ ಮೂರ್ತಿಗಳನ್ನು ನದಿಗಳಲ್ಲಿ ವಿಸರ್ಜಿಸುವ ಮೂಲಕ ನದಿಂು ನೀರನ್ನು ಕಲುಷಿತಗೊಳಿಸಲಾಗುತ್ತಿದೆ. ನದಿಯನ್ನು ಒಂದು ಪೂಜಾ ಕೇಂದ್ರವಾಗಿ ನೋಡುವುದಕ್ಕಿಂತ ನೈಸರ್ಗಿಕ ಸಂಪನ್ಮೂಲವಾಗಿ ನೋಡಬೇಕು. ನಾವೆಲ್ಲರೂ ನೀರನ್ನು ತಮ್ಮ ಉಪಯೋಗಕ್ಕೆ ಬಳಸಿಕೊಂಡು ಮತ್ತೆ ಕಡೆಗಣಿಸುತ್ತೇವೆ. ನಮಗೆ ನೀರನ್ನು ಬಳಸಲು ಹಕ್ಕಿದೆಯೇ ವಿನಹ ಅದನ್ನು ಕಲುಷಿತಗೊಲಿಸುವ, ಅಪವೌಲ್ಯ ಮಾಡುವ ಹಕ್ಕು ಇಲ್ಲ. ಆದ್ದರಿಂದ ಭೂಮಿಯ ಮೇಲಿನ ನೈಸರ್ಗಿಕ ವಸ್ತುಗಳನ್ನು ಬಳಸಲು ನಾವು ಎಷ್ಟು ಹಕ್ಕುದಾರರಾಗಿರುತ್ತೇವೆಯೋ, ಅವುಗಳನ್ನು ಉಳಿಸುವುದರಲ್ಲೂ ಅಷ್ಟೇ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಂು ಕಾಂರ್ುದರ್ಶಿ ಪ್ರೊ.ವಿ.ಕೆ. ಜೋಶ್ ಮಾತನಾಡಿದರು. ಬಾಸುದೇವ ಸೋವಾನಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಮಹದೇವಸ್ವಾಮಿ, ಡಾ.ಭವ್ಯಾ, ಶಾಲಿನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts