ಭಾರತದಲ್ಲಿ ಅತಿ ಹೆಚ್ಚು ಸೊಳ್ಳೆಗಳು ಇರುವ ರಾಜ್ಯ ಯಾವುವು ಗೊತ್ತಾ? mosquito

dengue
Published on

mosquito | ಸೊಳ್ಳೆ ಎಲ್ಲಿಲ್ಲ ಹೇಳಿ, ಇವುಗಳನ್ನು ನಿರ್ಮೂಲನೆ ಮಾಡಬೇಕೆಂದು ಸರ್ಕಾರ ಆಗಾಗ ಸೊಳ್ಳೆಗಳ ನಿರ್ಮೂಲನೆ ಕಾರ್ಯಕ್ರಮಗಳನ್ನ ಹಳ್ಳಿಗಳಲ್ಲಿ ಹಾಗೂ ಪಟ್ಟಣಗಳಲ್ಲೂ ಸಹ ಜಾರಿಗೆ ತರುತ್ತಲೇ ಇರುತ್ತದೆ. ವಿಶೇಷವಾಗಿ ಭಾರತದ ಕೆಲವು ರಾಜ್ಯಗಳಲ್ಲಿ ಸೊಳ್ಳೆಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಕೊಳಕು ನೀರು ಮತ್ತು ಬದಲಾಗುತ್ತಿರುವ ಹವಾಮಾನವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಅಂದಹಾಗೆ ಎಲ್ಲಾ ಪ್ರದೇಶಗಳಲ್ಲೂ ಸೊಳ್ಳೆಗಳು ಇರೋದು ನಿಜ. ಆದರೆ ಆದರೆ ಭಾರತದಲ್ಲೇ ಅತೀ ಹೆಚ್ಚಾಗಿ ಸೊಳ್ಳೆಗಳು ಕಂಡುಬರುವ ರಾಜ್ಯಗಳಿವೆ. ಅದು ಯಾವ ರಾಜ್ಯವೆಂದು ತಿಳಿಯೋಣ.

ಭಾರತದ ಕೆಲವು ನಗರಗಳಲ್ಲಿ ಅತೀ ಹೆಚ್ಚಾಗಿ ಈ ಸೊಳ್ಳೆಗಳು ಕಂಡು ಬರುತ್ತವೆ. ಸೊಳ್ಳೆಯ ಗಾತ್ರ ನೋಡಲು ಚಿಕ್ಕದಾಗಿದ್ದರೂ ಸಹ ಅದರಿಂದಾಗುವ ಪರಿಣಾಮ ತುಂಬಾ ಅಪಾಯಕಾರಿ. ಸೊಳ್ಳೆಗಳ ಕಡಿತವು ರಾತ್ರಿಯಿಡೀ ನಿದ್ರೆಗೆ ಭಂಗ ತರುತ್ತದೆ ಮತ್ತು ರೋಗದ ಪ್ರಮಾಣವನ್ನು ಹೆಚ್ಚಿಸುತ್ತದೆ. ಆದರೆ ಯಾವ ರಾಜ್ಯ ಅಥವಾ ನಗರದಲ್ಲಿ ಹೆಚ್ಚು ಸೊಳ್ಳೆಗಳಿವೆ. ಇದರ ಹಿಂದಿನ ನಿಜವಾದ ಕಾರಣವೇನು ಎಂಬ ರಹಸ್ಯವನ್ನು ನೋಡೋಣ.

ಹೆಚ್ಚು ಸೊಳ್ಳೆಗಳಿರುವ ರಾಜ್ಯ ಯಾವುವು?

ಭಾರತದಲ್ಲಿ ಸೊಳ್ಳೆಗಳ ಸಂಖ್ಯೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬದಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಅವುಗಳ ಸಂಖ್ಯೆ ತುಂಬಾ ಹೆಚ್ಚಾಗಿದ್ದು, ಇದರಿಂದ ಜನರು ಹಗಲು ರಾತ್ರಿ ತುಂಬಾ ತೊಂದರೆ ಅನುಭವಿಸುತ್ತಾರೆ. ತಜ್ಞರ ಪ್ರಕಾರ ಹೆಚ್ಚಿನ ಸೊಳ್ಳೆಗಳು ಒಡಿಶಾ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ರಾಜ್ಯಗಳಲ್ಲಿ ಕಂಡುಬರುತ್ತವೆ. ಇದಕ್ಕೆ ಇಲ್ಲಿನ ಹವಾಮಾನ ಮತ್ತು ಸುತ್ತಮುತ್ತಲಿನ ವಾತಾವರಣ ಕಾರಣವಾಗಿದೆ. ಈ ರಾಜ್ಯಗಳು ದೊಡ್ಡ ನದಿಗಳು, ಸರೋವರಗಳು ಮತ್ತು ಕೊಳಗಳಿಂದ ಆವೃತವಾಗಿವೆ.

ಹಾಗಾಗಿ ಸೊಳ್ಳೆಗಳು ಕೊಳಕು ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಇಂದೋರ್ ಮತ್ತು ಕೋಟಾದಂತಹ ನಗರಗಳಲ್ಲಿ ಸೊಳ್ಳೆಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ ಎಂದು ಇತ್ತೀಚಿನ ವರದಿಯೊಂದು ಬಹಿರಂಗಪಡಿಸಿದೆ. ಭಾರತದ ಅತ್ಯಂತ ಸ್ವಚ್ಛ ನಗರವೆಂದು ಹಲವು ಬಾರಿ ಘೋಷಿಸಲ್ಪಟ್ಟ ಇಂದೋರ್‌ನಲ್ಲಿಯೂ ಸಹ ಜನರು ಸೊಳ್ಳೆಗಳಿಂದ ಬಳಲುತ್ತಿದ್ದಾರೆ. ರಾಜಸ್ಥಾನದ ಕೋಟಾದಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ, ಅಲ್ಲಿ ಕೊಳಕು ನೀರಿನ ಚರಂಡಿಗಳು ಮತ್ತು ನೀರು ನಿಲ್ಲುವಿಕೆಯ ಸಮಸ್ಯೆ ತುಂಬಾ ಗಂಭೀರವಾಗಿದೆ ಎಂದು ಅಂದಾಜಿಸಲಾಗಿದೆ.

ಸೊಳ್ಳೆಗಳು ಹೆಚ್ಚಾಗಲು ಕಾರಣವೇನು?

ಸೊಳ್ಳೆಗಳ ಸಂಖ್ಯೆ ಹೆಚ್ಚಾಗಲು ಹಲವು ಕಾರಣಗಳಿರಬಹುದು. ಅತಿ ದೊಡ್ಡ ಸಮಸ್ಯೆ ಎಂದರೆ ತೆರೆದ ಸ್ಥಳಗಳಲ್ಲಿ ಸಂಗ್ರಹವಾಗುವ ಕೊಳಕು ನೀರು. ಮಳೆಗಾಲದಲ್ಲಿ ಹಲವೆಡೆ ನೀರು ಸಂಗ್ರಹವಾಗುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತದೆ. ಇದಲ್ಲದೆ ಬದಲಾಗುತ್ತಿರುವ ಹವಾಮಾನವು ಸೊಳ್ಳೆಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚಳಿಗಾಲವು ಕಡಿಮೆ ಇದ್ದು, ಬೇಸಿಗೆ ಹೆಚ್ಚು ಇರುವುದರಿಂದ ಸೊಳ್ಳೆಗಳಿಗೆ ವರ್ಷವಿಡೀ ಬದುಕಲು ಮತ್ತು ಸಂತಾನೋತ್ಪತ್ತಿ ಮಾಡಲು ಸಹಾಯವಾಗುತ್ತದೆ. ಇದಕ್ಕೆ ಸ್ವಚ್ಛತೆಯ ಕೊರತೆಯೂ ಒಂದು ಪ್ರಮುಖ ಕಾರಣವಾಗಿದೆ. ಅನೇಕ ನಗರಗಳು ತೆರೆದ ಕಸ ಮತ್ತು ಕೊಳಕು ನೀರು ಸೊಳ್ಳೆಗಳಿಗೆ ಸೂಕ್ತವಾದ ಸಂತಾನೋತ್ಪತ್ತಿಯ ಸ್ಥಳವನ್ನು ಸೃಷ್ಟಿಸುತ್ತವೆ. ಇದರಿಂದಾಗಿ ಕೋಟಾ, ಭೋಪಾಲ್, ಪಾಟ್ನಾ ಮತ್ತು ಲಕ್ನೋದಂತಹ ನಗರಗಳಲ್ಲಿ ಸೊಳ್ಳೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.

ಸೊಳ್ಳೆಗಳು ಏಕೆ ಅಪಾಯಕಾರಿ?

ಸೊಳ್ಳೆಗಳು ಕಚ್ಚುವುದರಿಂದ ಏನೂ ಆಗದು ಎಂದು ನೀವು ಉದಾಸೀನ ಮಾಡಬಾರದು. ಏಕೆಂದರೆ ಸೊಳ್ಳೆಗಳು ಅನೇಕ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗುತ್ತವೆ. ಈ ಕಾಯಿಲೆಗಳಲ್ಲಿ ಕೆಲವು ಎಷ್ಟು ಮಾರಕವಾಗಿವೆಯೆಂದರೆ ಅವು ವ್ಯಕ್ತಿಯ ಸಾವಿಗೂ ಸಹ ಕಾರಣವಾಗಬಹುದು.

ಚಿಕನ್‌ಗುನ್ಯಾ : ಈ ರೋಗವು ಸೊಳ್ಳೆಗಳಿಂದ ಹರಡುತ್ತದೆ. ಈ ರೋಗ ಕಾಣಿಸಿಕೊಂಡರೆ, ಮೂಳೆಗಳಲ್ಲಿ ತುಂಬಾ ನೋವನ್ನು ಉಂಟುಮಾಡುತ್ತದೆ. ಈ ಕಾಯಿಲೆಗೆ ತುತ್ತಾದವರು ನಡೆಯಲು ಕೂಡ ಕಷ್ಟವಾಗುತ್ತದೆ.

ಮಲೇರಿಯಾ : ಈ ರೋಗವು ಸೊಳ್ಳೆಗಳಿಂದ ಹರಡುತ್ತದೆ. ಜ್ವರದ ನಂತರ ಶೀತ ಕಂಡು ಬರುತ್ತದೆ ಇದಕ್ಕೆ ನೀವು ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಇದು ಕೂಡ ದೇಹದ ಮೇಲೆ ದುಷ್ಪರಿಣಾಮ ಬೀರಬಲ್ಲದು.

ಡೆಂಗ್ಯೂ : ಸೊಳ್ಳೆಗಳಿಂದ ಹರಡುವ ಅತ್ಯಂತ ಅಪಾಯಕಾರಿ ರೋಗ ಡೆಂಗ್ಯೂ. ಇದೇನಾದರೂ ದೇಹದಲ್ಲಿ ಕಂಡುಬಂದರೆ ತೀವ್ರ ಜ್ವರ, ದೇಹದ ನೋವು ಮತ್ತು ಪ್ಲೇಟ್‌ಲೆಟ್‌ಗಳಲ್ಲಿ ಇಳಿಕೆ ಕಂಡುಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net