ಕೈಗಾರಿಕೆ ಪ್ರದೇಶಕ್ಕೆ ಹೆಚ್ಚುವರಿ ನೀರು ಬೇಡಿಕೆ: ರೈತರಿಂದ ವಿರೋಧ

xr:d:DAFZ-A9zg4g:27,j:3386304733,t:23020912
xr:d:DAFZ-A9zg4g:27,j:3386304733,t:23020912
Published on

ವಿಜಯವಾಣಿ ವಿಶೇಷ ಬೆಳಗಾವಿ:  ಹಿಡಕಲ್​ ಜಲಾಶಯದಿಂದ ಸುವರ್ಣ ಕರ್ನಾಟಕ ಕಾರಿಡಾರ ಬೆಂಗಳೂರು ಮತ್ತು ಮುಂಬೈ ಕೈಗಾರಿಕಾ ಕಾರಿಡಾರ (ಬಿಎಂಐಸಿ) ಯೋಜನೆಯಡಿ ಧಾರವಾಡ ಕೈಗಾರಿಕಾ ಪ್ರದೇಶಕ್ಕಾಗಿ 0.580 ಟಿಎಂಸಿ ಹೆಚ್ಚುವರಿ ನೀರಿನ ಬೇಡಿಕೆ ಸಲ್ಲಿಸಿದ್ದು, ಇದಕ್ಕೆ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯ ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕುಡಿಯಲು ಹಾಗೂ ಕೃಷಿಗೆ ಬಳಸುವ ಏಕೈಕ ಉದ್ದೇಶದಿಂದ 1961ರಲ್ಲಿ 51 ಟಿಎಂಸಿ ಸಾಮರ್ಥ್ಯದ ಹಿಡಕಲ್​ ಜಲಾಶಯ ಪ್ರಾರಂಭವಾಯಿತು. ಬಳಿಕ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯ ಕೃಷಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಟಪ್ರಭಾ ಎಡ ಮತ್ತು ಬಲ ದಂಡೆ ನೀರಾವರಿ ಯೋಜನೆ ಪ್ರಾರಂಭವಾಯಿತು. ಇದರೊಂದಿಗೆ ಬೆಳಗಾವಿ ಸೇರಿ ವಿವಿಧ ನಗರ, ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಈಗ ಧಾರವಾಡ ಕೈಗಾರಿಕೆ ಪ್ರದೇಶಕ್ಕೆ ಹೆಚ್ಚುವರಿಯಾಗಿ 0.580 ಟಿಎಂಸಿ ನೀರಿಗೆ ಬೇಡಿಕೆ ಸಲ್ಲಿಸಿದ್ದು, ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಈಗಾಗಲೇ ಏಳು ಕೈಗಾರಿಕೆಗೆ ಹಿಡಕಲ್​ ಜಲಾಶಯದಿಂದ 0.2294 ಟಿಎಂಸಿ ನೀರು ಬಳಸಲು ಅನುಮತಿಸಿದೆ. ಆದರೀಗ ಸರ್ಕಾರ, ಮೀಸಲಾದ ಪ್ರಮಾಣಕ್ಕಿಂತ 0.1294 ಟಿಎಂಸಿ ಹಂಚಿಕೆ ಮಾಡಿ ಆದೇಶ ಮಾಡಿದೆ. ಇದಲ್ಲದೆ ಹೆಚ್ಚುವರಿಯಾಗಿ 0.580 ಟಿಎಂಸಿ ನೀರಿಗೆ ಬೇಡಿಕೆ ಸಲ್ಲಿಸಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ. ಒಂದು ವೇಳೆ ಬೇಡಿಕೆಗೆ ಒಪ್ಪಿಗೆ ಸಲ್ಲಿಸಿದರೆ ಭವಿಷ್ಯದಲ್ಲಿ ನೀರಿನ ಸಮಸ್ಯೆ ಉಂಟು ಮಾಡಲಿದೆ.

ಈಗಾಗಲೇ ಹಿಡಕಲ್​ ಜಲಾಶಯದಿಂದ ಕೈಗಾರಿಕಾ ಉದ್ದೇಶಗಳಿಗೆ ಮಿತಿ ಮೀರಿ ನೀರು ಬಳಕೆಯಾಗಿದೆ. ಈಗ ಹೆಚ್ಚುವರಿ ನೀರು ನೀಡಿದರೆ ಕೃಷಿಗೆ ಭಾರಿ ಪೆಟ್ಟು ಬೀಳಲಿದೆ ಎಂದು ರೈತರು, ಹೋರಾಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಟಪ್ರಭಾ ರೈಟ್​ ಬ್ಯಾಂಕ್​ ಕಾಲುವೆ ವಿಭಾಗದ ಮಾಹಿತಿ ಪ್ರಕಾರ ಜಲಾಶಯದ ಒಟ್ಟು ಶುದ್ಧ ನೀರಿನ ಸಾಮರ್ಥ್ಯ 44.02 ಟಿಎಂಸಿಯಾಗಿದೆ. ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸಲು ಯಾವುದೇ ಟೆಂಡರ್​ ನೀಡಿಲ್ಲ. ಎ&ಯೋಜನೆ, ಬಿ&ಯೋಜನೆ ಅನ್ವಯವಾಗದು ಎಂಬ ಕಾರಣ ನೀಡಿ ಪ್ರಸ್ತಾವನೆ ನಿರಾಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಡಕಲ್​ ಜಲಾಶಯದಲ್ಲಿ ನೀರಿನ ಬಳಕೆ ಪ್ರಮಾಣದ ವಿವರ ವಿಭಾಗ ಅಂಕಿಸಂಖ್ಯೆ (ಟಿಎಂಸಿ) ನೀರಿನ ಸಾಮರ್ಥ್ಯ 51.00 ನೀರುಪಯುಕ್ತ ನೀರು 2.02 ಹೂಳಿನ ಪ್ರಮಾಣ 4.956 ಕೈಗಾರಿಕೆಗಳಿಗೆ ಹಂಚಿಕೆ 0.2294

ನಮ್ಮ ಗಮನಕ್ಕೆ ತಾರದೆ ಹಿಡಕಲ್​ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸುವ ಯೋಜನೆ ಕಾಮಗಾರಿ ಕೈಗೊಂಡಿರುವ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚಿಸಿದ್ದೇನೆ. ಸದ್ಯ ಕಾಮಗಾರಿ ತಡೆಹಿಡಿಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಯೋಜನೆ ವಿರೋಧಿಸಿ ವಿವಿಧ ಸಂಟನೆಗಳು ಹೋರಾಟ ನಡೆಸುತ್ತಿವೆ. ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net