More

    ಮನೆಗೆ ತೆರಳುತ್ತಿದ್ದ ಮಹಿಳಾ ಪೊಲೀಸ್​​​ ಅಧಿಕಾರಿಯನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಸಬ್​ಇನ್ಸ್​ಪೆಕ್ಟರ್​…

    ನವದೆಹಲಿ: ಕರ್ತವ್ಯ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಮಹಿಳಾ ಸಬ್​ ಇನ್ಸ್​ಪೆಕ್ಟರ್​ರನ್ನು ಅವರ ಸಹೋದ್ಯೋಗಿ ಗುಂಡಿಟ್ಟು ಕೊಂದ ಘಟನೆ ವಾಯವ್ಯ ದೆಹಲಿಯ ಮೆಟ್ರೋ ಸ್ಟೇಶನ್​ ಬಳಿ ನಡೆದಿದೆ.

    ಪ್ರೀತಿ ಅಹ್ಲಾವತ್​ (26) ಅವರು ಪೂರ್ವ ದೆಹಲಿಯ ಪಟ್ಪರ್ಗಂಜ್ ಕೈಗಾರಿಕಾ ಪ್ರದೇಶ ಪೊಲೀಸ್ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಆಗಿದ್ದರು. ಶುಕ್ರವಾರ ರಾತ್ರಿ 9.30ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದರು. ಮೆಟ್ರೋ ಸ್ಟೇಶನ್​ನಲ್ಲಿ ಇಳಿದು ಮನೆಯ ಕಡೆ ಹಾದಿ ಹಿಡಿದಿದ್ದರು. ಆದರೆ ದುರದೃಷ್ಟವಾತ್​ ಅವರ ಸಹೋದ್ಯೋಗಿ ದೀಪಾಂಶು ರಥಿ ಎಂಬುವರ ಕೈಯಿಂದ ಹತ್ಯೆಗೀಡಾಗಿದ್ದಾರೆ.

    ಪ್ರೀತಿ ಮೂಲತಃ ಹರಿಯಾಣಾದ ಸೋನಿಪತ್​ ಮೂಲದವರಾಗಿದ್ದು ದೆಹಲಿಯ ರೋಹಿಣಿಯಲ್ಲಿ ಬಾಡಿಗೆ ವಸತಿಗೃಹದದಲ್ಲಿ ತಂಗಿದ್ದರು. ಅವರನ್ನು ಹತ್ಯೆ ಮಾಡಿದ ದೀಪಾಂಶು ಕೂಡ ಅಲ್ಲಿಯವರೇ ಎನ್ನಲಾಗಿದೆ. ಪ್ರೀತಿಯವರ ತಲೆಗೆ ಮೂರು ಗುಂಡು ಹಾರಿಸಿ ಹತ್ಯೆ ಮಾಡಿದ ದೀಪಾಂಶು ಸಾನಿಪತ್​ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
    ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರೀತಿ ಅವರ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲಿನ ಸಿಸಿಟಿವಿ ಫೂಟೇಜ್​ಗಳನ್ನೂ ಸಂಗ್ರಹಿಸಿದ್ದಾರೆ.

    ಈ ಹತ್ಯೆಗೆ ಪ್ರೀತಿ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ದೀಪಾಂಶು ರಥಿ ಪ್ರೀತಿ ಅಹ್ಲಾವತ್​ರನ್ನು ಪ್ರೀತಿಸುತ್ತಿದ್ದ. ಆದರೆ ಪ್ರೀತಿಗೆ ದೀಪಾಂಶು ಮೇಲೆ ಮನಸಿರಲಿಲ್ಲ. ಇದೇ ಕಾರಣಕ್ಕೆ ಹತ್ಯೆ ಮಾಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ತನಿಖೆ ಕೈಗೊಂಡಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts