More

    ದೆಹಲಿ ಹಿಂಸಾಚಾರ ಏಕಪಕ್ಷೀಯವಾದ ವ್ಯವಸ್ಥಿತ ಸಂಚು: ಡಿಎಂಸಿ ವರದಿಯಲ್ಲಿ ಸ್ಫೋಟಕ ಮಾಹಿತಿ

    ನವದೆಹಲಿ: ಈಶಾನ್ಯ ದೆಹಲಿ ಹಿಂಸಾಚಾರ ವೇಳೆ ಸಾವಿರಾರು ಮಂದಿ ನಗರವನ್ನು ತೊರೆದು ಉತ್ತರ ಪ್ರದೇಶ ಮತ್ತು ಹರಿಯಾಣದ ತಮ್ಮ ಗ್ರಾಮಗಳಿಗೆ ಪಲಾಯನ ಮಾಡಿದ್ದಾರೆ. ದೆಹಲಿ ಗಲಭೆಯೊಂದು ಏಕಪಕ್ಷೀಯ ಹಾಗೂ ವ್ಯವಸ್ಥಿವಾದ ಸಂಚು ಎಂದು ದೆಹಲಿ ಅಲ್ಪಸಂಖ್ಯಾತ ಆಯೋಗ(ಡಿಎಂಸಿ)ದ ವರದಿ ಹೇಳಿದೆ.

    ದೆಹಲಿ ಅಲ್ಪಸಂಖ್ಯಾತ ಆಯೋಗದ ಮುಖ್ಯಸ್ಥ ಜಫರುಲಾ ಇಸ್ಲಾಂ ಖಾನ್​ ಮತ್ತು ಸದಸ್ಯ ಕರ್ತಾರ್​ ಸಿಂಗ್​ ಕೊಚ್ಚರ್​ ಅವರು ಈಶಾನ್ಯ ದೆಹಲಿಯ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಆಧಾರದ ಮೇಲೆ ವರದಿ ಸಿದ್ಧಪಡಿಸಲಾಗಿದೆ.

    ಕಳೆದ ವಾರದ ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧ ಬಣದಿಂದ ಹುಟ್ಟಿಕೊಂಡ ಗಲಭೆ ಬಳಿಕ ಹಿಂಸಾಚಾರಕ್ಕೆ ತಿರುಗಿತ್ತು. ಈ ಹಿಂಸಾಚಾರ ಮೌಜ್​ಪುರ, ಛಾಂದ್​ ಬಾಘ್​ ಮತ್ತು ಯಮುನಾ ವಿಹಾರಕ್ಕೆ ಹರಡಿತ್ತು. ಬೀದಿ ಬೀದಿಗಳಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ಓಡಾದಿದ ಪ್ರತಿಭನಾಕಾರರು, ವಾಹನಗಳು ಮತ್ತು ಮನೆಗಳನ್ನು ಧ್ವಂಸ ಮಾಡಿದರು. ಈ ಹಿಂಸಾಚಾರದಲ್ಲಿ 44 ಮಂದಿ ಸಾವಿಗೀಡಾಗಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

    ಈ ಸಂಬಂಧ ದೆಹಲಿ ಅಲ್ಪಸಂಖ್ಯಾತರ ಆಯೋಗ ವರದಿ ನೀಡಿದೆ. ಇದು ಏಕಪಕ್ಷೀಯ ಹಾಗೂ ವ್ಯವಸ್ಥಿತವಾದ ಸಂಚು. ಮುಸ್ಲಿಮರಿಗೆ ಸೇರಿದ ಅನೇಕ ಮನೆಗಳು ಹಾಗೂ ಅಂಗಡಿಗಳು ಸಂಪೂರ್ಣ ಹಾನಿಯಾಗಿವೆ. ಸಾವಿರಾರು ಮಂದಿ ನಗರ ತೊರೆದಿದ್ದು, ಉತ್ತರ ಪ್ರದೇಶ ಹಾಗೂ ಹರಿಯಾಣದ ತವರು ಗ್ರಾಮಗಳಿಗೆ ಪಲಾಯನ ಮಾಡಿದ್ದಾರೆ. ಸಮುದಾಯ ನಡೆಸುತ್ತಿರುವ ಶಿಬಿರದಲ್ಲಿ ಇನ್ನು ನೂರಾರು ಮಂದಿ ವಾಸಿಸುತ್ತಿದ್ದಾರೆ. ಇನ್ನೂ ಕೆಲವರು ದೆಹಲಿ ಸರ್ಕಾರ ನಡೆಸುತ್ತಿರುವ ಶಿಬಿರದಲ್ಲಿ ಇದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

    ಡಿಎಂಸಿ ತಂಡ ಈಶಾನ್ಯ ದೆಹಲಿಯ ಅನೇಕ ಪ್ರದೇಶಗಳಿಗೆ ಭೇಟಿ ನೀಡಿದೆ. ಮನೆಗಳು, ಅಂಗಡಿ, ಶಾಲೆ ಹಾಗೂ ವಾಹನಗಳು ಸೇರಿ ಸಾಕಷ್ಟು ಹಾನಿಯಾಗಿರುವುದಕ್ಕೆ ಡಿಎಂಸಿ ಸಾಕ್ಷಿಯಾಗಿದೆ. ಸ್ಥಳೀಯರ ಸಹಾಯದೊಂದಿಗೆ ಮುಸ್ಲಿಂ ಅಂಗಡಿ ಹಾಗೂ ಮನೆಗಳನ್ನು ಹಾನಿಗೊಳಿಸಲಾಗಿದೆ. ಇದು ಏಕಪಕ್ಷೀಯವಾದ ವ್ಯವಸ್ಥಿತವಾದ ಸಂಚು ಎಂದು ಖಾನ್​ ಹೇಳಿದ್ದಾರೆ.

    ಭಾರಿ ಪ್ರಮಾಣದ ನೆರವು ಇಲ್ಲದೆ, ಇಲ್ಲಿನ ಜನರು ಮರು ಜೀವನ ಸ್ಥಾಪಿಸಿಕೊಳ್ಳಲು ಸಾಧ್ಯವಿಲ್ಲ. ದೆಹಲಿ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಸಾಕಾಗುವುದಿಲ್ಲ ಎಂಬುದು ನಮ್ಮ ಭಾವನೆಯಾಗಿದೆ. ಹೀಗಾಗಿ ಹೆಚ್ಚಿನ ನೆರವು ಬೇಕಿದೆ ಎಂದು ಡಿಎಂಸಿ ಹೇಳಿದೆ.

    ಅಂದಹಾಗೆ ಡಿಎಂಸಿ ಶಾಸನಬದ್ಧ ಅಂಗವಾಗಿದ್ದು, ಅದನ್ನು 1999ರ ದೆಹಲಿ ಅಲ್ಪಸಂಖ್ಯಾತ ಆಯೋಗ ಕಾಯ್ದೆ ಅಡಿ ರಚಿಸಲಾಗಿದೆ. ಪ್ರಸ್ತುತ ಜಫರುಲಾ ಇಸ್ಲಾಂ ಖಾನ್​ ಇದರ ಮುಖ್ಯಸ್ಥರಾಗಿದ್ದಾರೆ. ಇವರ ನೇತೃತ್ವದಲ್ಲಿ ತಂಡವೊಂದು ಈಶಾನ್ಯ ದೆಹಲಿಯ ಗಲಭೆ ಪೀಡಿತ ಪ್ರದೇಶಗಳಾದ ಛಾಂದ್​ಬಾಘ್​, ಜಫರಾಬಾದ್​, ಬ್ರಿಜ್​ಪುರಿ, ಗೋಕಲಪುರಿ, ಮುಸ್ತಫಾಬಾದ್​, ಶಿವ್​ ವಿವಾಹ, ಯಮುನಾ ವಿಹಾರ, ಭಜನ್​ಪುರ ಮತ್ತು ಖಜೋರಿ ಖಾಸ್​ ಏರಿಗಳಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts