More

    ಡೆಲ್ಲಿಗೆ ಸುಲಭ ತುತ್ತಾದ ಟೈಟಾನ್ಸ್: ಪಂತ್ ಪಡೆಗೆ 2ನೇ ಜಯ

    ಅಹಮದಾಬಾದ್: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-17ರ ತನ್ನ 7ನೇ ಲೀಗ್ ಪಂದ್ಯದಲ್ಲಿ ಹಾಲಿ ರನ್ನರ್ ಅಪ್ ಗುಜರಾತ್ ಟೈಟಾನ್ಸ್ ಎದುರು 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ರಿಷಭ್ ಪಂತ್ ಬಳಗ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದರೆ, ಶುಭಮಾನ್ ಗಿಲ್ ಪಡೆ ಟೂರ್ನಿಯಲ್ಲಿ 4ನೇ ಸೋಲಿನೊಂದಿಗೆ 7ನೇ ಸ್ಥಾನಕ್ಕೆ ಕುಸಿಯಿತು.

    ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಟೂರ್ನಿಯ 32ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಗುಜರಾತ್ ಟೈಟಾನ್ಸ್ ಅಗ್ರ ಕ್ರಮಾಂಕ ವೈಲ್ಯ, ಆಲ್ರೌಂಡರ್ ರಶೀದ್ ಖಾನ್ (31) ಹೋರಾಟದ ನಡುವೆಯೂ 17.3 ಓವರ್‌ಗಳಲ್ಲಿ 89 ರನ್‌ಗಳಿಗೆ ಆಲೌಟ್ ಆಯಿತು. ಸುಲಭ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ 8.5 ಓವರ್‌ಗಳಲ್ಲಿ 4 ವಿಕೆಟ್‌ಗೆ 92 ರನ್‌ಗಳಿಸಿ ಜಯದ ಸಂಭ್ರಮ ಕಂಡಿತು.

    ಸುಲಭ ಚೇಸಿಂಗ್: ಅಲ್ಪಮೊತ್ತ ಬೆನ್ನತ್ತಿದ್ದ ಜೇಕ್ ್ರೇಸರ್ ಮೆಕ್‌ಗುರ್ಕ್ (20) ಹಾಗೂ ಪೃಥ್ವಿ ಷಾ (7) ನಿರಾಸೆ ಮೂಡಿಸಿದರು. ಮೊದಲ ವಿಕೆಟ್‌ಗೆ ಇವರಿಬ್ಬರು 12 ಎಸೆತದಲ್ಲಿ 25 ರನ್‌ಗಳಿದರು. ನಂತರ ಇಂಪ್ಯಾಕ್ಸ್ ಆಟಗಾರ ಅಭಿಷೇಕ್ ಪೊರೆಲ್ (15) ಹಾಗೂ ಶೈ ಹೋಪ್ (19) ಉಪಯುಕ್ತ ಕೊಡುಗೆ ನೀಡಿ ಚೇಸಿಂಗ್ ಸುಲಭಗೊಳಿಸಿದರು. ನಾಯಕ ರಿಷಭ್ ಪಂತ್ (16*) ಹಾಗೂ ಸುಮಿತ್ ಕುಮಾರ್ (9*) 5ನೇ ವಿಕೆಟ್‌ಗೆ 19 ಎಸೆತದಲ್ಲಿ 25 ರನ್‌ಗಳಿಸಿ ಇನ್ನು 67 ಎಸೆತ ಬಾಕಿಯಿರುವಂತೆಯೇ ಗೆಲುವು ತಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts