More

    ಜಾತಿ, ಧರ್ಮದ ಹೆಸರಲ್ಲಿ ಸಮಾನತೆ ಹಾಳು: ಪ್ರೊ.ಬರಗೂರು ರಾಮಚಂದ್ರಪ್ಪ

    ತುಮಕೂರು: ಪ್ರಜಾಪ್ರಭುತ್ವದ ಯಶಸ್ಸಿಗೆ ದೇಶದ ಜನರ ಪಂಚೇಂದ್ರಿಯ ಜಾಗೃತಾವಸ್ಥೆ ಬಹುಮುಖ್ಯ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ಬಂಡಾಯ ಸಾಹಿತ್ಯ ಸಂಟನೆ ಕರ್ನಾಟಕ, ತುಮಕೂರು ಜಿಲ್ಲಾ ಟಕದಿಂದ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಸಮತಾ ಸೌಹಾರ್ದ ಗೀತಗಾಯನ ಕಾರ್ಯಕ್ರಮದಲ್ಲಿ ಆನ್‌ಲೈನ್ ಮೂಲಕ ಆಶಯ ಭಾಷಣ ವಾಡಿದರು.

    ಕಣ್ಣು, ಕಿವಿ, ನಾಲಗೆ, ಸ್ಪರ್ಶೇಂದ್ರಿಯ, ವಾಸನೇಂದ್ರಿಯಗಳು ಸ್ವತಂತ್ರವಾಗಿ ನಮ್ಮ ವಿವೇಕಕ್ಕೆ ದಕ್ಕಿದಂತೆ ತಂತಮ್ಮ ಹಕ್ಕುಗಳನ್ನು ಸ್ಥಾಪಿಸುವಂತಿರಬೇಕು. ನಮ್ಮ ಕಿವಿಗಳು ನಮ್ಮದೇ ಆಗಿದ್ದರೆ ಅನರ್ಥಕಾರಿ ಆಳುವ ವರ್ಗಕ್ಕೆ ಕಿವಿಗೊಡುವುದಿಲ್ಲ ಎಂದರು.

    ಅಂತೆಯೇ ನಮ್ಮ ಕಣ್ಣುಗಳು ದುಷ್ಟಕೂಟದ ದೃಷ್ಟಿಕೋನವಾಗುವುದಿಲ್ಲ. ನಮ್ಮ ನಾಲಗೆ ಆಯತಪ್ಪಿ ಸೌಹಾರ್ದವನ್ನು ಹಾಳು ವಾಡುವವರ ಆಳಾಗುವುದಿಲ್ಲ. ವಾಸನೇಂದ್ರಿಯ ಮತ್ತು ಸ್ಪರ್ಶೇಂದ್ರಿಯಗಳು ಸಾವಾಜಿಕ ಸರ್ವಾಧಿಕಾರದ ಸಾಧನವಾಗುವುದಿಲ್ಲ. ಒಟ್ಟಾರೆ ಅಸವಾನತೆ, ಅಸ್ಪೃಶ್ಯತೆ, ಅಸಹಿಷ್ಣುಗಳಿಗೆ ಪ್ರತಿರೋಧ ಒಡ್ಡುವ ಪಂಚೇಂದ್ರಿಯಗಳು ನಮ್ಮವಾಗಬೇಕು. ನಮ್ಮ ಪಂಚೇಂದ್ರಿಯಗಳು ಸಂವಿಧಾನಾತ್ಮಕವಾದ ಸಮತೆ ಮತ್ತು ಸೌಹಾರ್ದತೆಗಳ ಸಂವೇದನೆಯ ನೆಲೆಗಳಾಗಬೇಕು ಎಂದರು.

    ಕನ್ನಡ ಸಾಹಿತ್ಯದಲ್ಲಿ ಹಿಂದಿನಿಂದಲೂ ಸಮತೆ ಮತ್ತು ಸೌಹಾರ್ದದ ದನಿಯೊಂದು ವಿನಾಶಕಾರಿ ವಿಷಯಗಳನ್ನು ಹಿಮೆಟ್ಟಿಸಿ ಗಟ್ಟಿಯಾಗಿ ಅಭಿವ್ಯಕ್ತಗೊಳ್ಳುತ್ತ ಬಂದಿದೆ. ಇಂದು ಜಾತಿ ಮತ್ತು ಧರ್ಮಗಳ ಹೆಸರಿನಲ್ಲಿ ಸವಾನತೆ ಮತ್ತು ಸಹಿಷ್ಣುತೆಯ ಆದರ್ಶವನ್ನು ಹಾಳು ವಾಡುವ ಪ್ರಯತ್ನಗಳು ಕೆಲವರಿಂದ ನಡೆಯುತ್ತಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕುವೆಂಪು ಅವರಿಂದ ಹಿಡಿದು ಸಮಕಾಲೀನ ಸಾಹಿತಿಗಳ ಕವಿತೆಗಳನ್ನು ನಾಡಿನ ಹಲವಾರು ಗಾಯಕರು ಹಾಡಿದರು. ಭೂಮಿ ಬಳಗದ ಜಿ.ಎಸ್.ಸೋಮಶೇಖರ್, ಬಂಡಾಯ ಸಂಟನೆ ಜಿಲ್ಲಾ ಸಂಚಾಲಕ ಡಾ.ಓ.ನಾಗರಾಜು, ಡಾ.ನಾಗಭೂಷಣ ಇದ್ದರು. ತುಮಕೂರು ಜಿಲ್ಲಾ ಲೇಖಕಿಯರ ಸಂದ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಕಾರ್ಯಕ್ರಮ ನಿರ್ವಹಿಸಿದರು.

    ವಿಜೃಂಭಿಸುತ್ತಿದೆ ಅವಿವೇಕ: ವೆಬಿನಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಾತನಾಡಿದ ಕೇಂದ್ರ ನಾಟಕ ಸಾಹಿತ್ಯಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಡಾ.ಲಕ್ಷ್ಮಣದಾಸ್, ಜನರಲ್ಲಿ ವಿವೇಕ ಹೋಗಿ ಇಂದು
    ನಾಡಿನಾದ್ಯಂತ ಅವಿವೇಕ ವಿಜೃಂಭಿಸುತ್ತಿದೆ. ಸಾಂಸ್ಕೃತಿಕ ಲೋಕ ದುರಂತದ ಸ್ಥಿತಿ ತಲುಪಿದೆ ಎಂದರು. ಕರೊನಾದಿಂದ ನಾಟಕ, ಸಂಗೀತ, ನೃತ್ಯ, ಜನಪದ ಸೇರಿ ಸಾಂಸ್ಕೃತಿಕ ಲೋಕ ಸ್ಥಗಿತಗೊಂಡಿದೆ. ಈ ಸಂದರ್ಭದಲ್ಲಿ ನಾವು ಸಾಂಸ್ಕೃತಿಕ ಎಚ್ಚರತಪ್ಪದೆ ಹಾಡು, ಸಂಗೀತ, ನೃತ್ಯ, ಸಾಹಿತ್ಯಓದು, ಕವಿತೆ, ಓದು, ಸಂಗೀತದ ಮೂಲಕ ಸಾಂಸ್ಕೃತಿಕ ಲೋಕವನ್ನು ಎಚ್ಚರಗೊಳಿಸಬೇಕಿದೆ. ಸೌಹಾರ್ದ, ಸಮತೆ, ಶ್ರದ್ಧೆ ಕಲಿಯೋಣ,  ನಾಡಿನ ಸಾಂಸ್ಕೃತಿಕ ಉಳಿಸಿ ಬೆಳೆಸೋಣ ಎಂದರು.

    ಎಲ್ಲ ಧರ್ಮಗಳ ಮೂಲಭೂತವಾದ ಮತ್ತು ಜಾತಿವಾದಗಳನ್ನು ನಾವು ವಿರೋಧಿಸಿ ಸಮತೆ ಮತ್ತು ಸೌಹಾರ್ದದ ಸವಾಜಕ್ಕಾಗಿ ಕ್ರಿಯಾಶೀಲರಾಗಬೇಕಾಗಿದೆ. ಈ ಮೂಲಕ ಪಂಚೇಂದ್ರಿಯ ಪ್ರಜಾಪ್ರಭುತ್ವ ವನ್ನುಆದ್ಯತೆಯಾಗಿ ಜಾಗೃತಗೊಳಿಸಿಕೊಳ್ಳಬೇಕಾಗಿದೆ.
    ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಬಂಡಾಯ ಸಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts