More

    ಸಮರ್ಪಣೆ ಭಾವಕ್ಕೆ ಬೇಕು ಸಮರ್ಥ ಗುರು

    ಸವಣೂರ: ಭಕ್ತರು ಸಮರ್ಪಣೆ ಭಾವ ಹೊಂದಲು ಸಮರ್ಥ ಗುರುವಿನ ಅವಶ್ಯಕತೆ ಇದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರು ತಿಳಿಸಿದರು.

    ತಾಲೂಕಿನ ಹೊಸಹಲಸೂರ ಗ್ರಾಮದಲ್ಲಿ ದುರ್ಗಾದೇವಿ ದೇವಸ್ಥಾನ ಉದ್ಘಾಟನೆ, ಮೂರ್ತಿಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆಯಿಂದ ದುಷ್ಟ ಶಕ್ತಿ ದೂರವಾಗಲಿದೆ. ಮಾತೃಸ್ವರೂಪಿ ಸರ್ವರಿಗೂ ಒಳಿತನ್ನು ಮಾಡಲು ದೇವಸ್ಥಾನದಲ್ಲಿ ನಿರಂತರ ಧಾರ್ಮಿಕ ಕೈಂಕರ್ಯ ಜರುಗುತ್ತಿರಬೇಕು. ಭಕ್ತರು ಕಲ್ಲಿನಲ್ಲಿಯೂ ದೇವರನ್ನು ಕಾಣುವ ಶಕ್ತಿಯನ್ನು ಹೊಂದಿರುತ್ತಾರೆ. ರೇಣುಕರು ದೇವರ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಆಸ್ತಿಕರು, ನಾಸ್ತಿಕರ ಮಧ್ಯೆ ದೈವ ತನ್ನ ಶಕ್ತಿಯನ್ನು ತೋರುತ್ತದೆ. ದೇವರು ಸರ್ವವ್ಯಾಪಿಯಾಗಿದ್ದಾನೆ. ದೇವಿಶಕ್ತಿಯನ್ನು ಭಕ್ತರು ಅರಿಯಬೇಕು ಎಂದರು.

    ಬಂಕಾಪುರ ಅರಳಲೆಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ, ಸರ್ವಧರ್ಮದವರು ಒಗ್ಗೂಡಿದಲ್ಲಿ ಮಾತ್ರ ಧಾರ್ಮಿಕ ಕಾರ್ಯಕ್ಕೆ ಹೆಚ್ಚಿನ ಮೆರುಗು ತರಲು ಸಾಧ್ಯವಾಗಲಿದೆ. ಭಕ್ತರ ಸಹಕಾರದಿಂದ ಜಗದ್ಗುರುಗಳು ಪಂಚಪೀಠ ಕೇಂದ್ರ ಸ್ಥಳ ಬಾಳೆಹೊನ್ನೂರನ್ನು ಅಭಿವೃದ್ಧಿಪಡಿಸಿದ್ದಾರೆ. ಶ್ರೀಗಳ ಕುರಿತು ಅಪಪ್ರಚಾರ ಕೈಗೊಳ್ಳುತ್ತಿರುವುದು ಬೇಸರ ಮೂಡಿಸಿದೆ. ಪೀಠಕ್ಕೆ ಅವಮಾನ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲು ಭಕ್ತರು ಒತ್ತಾಯಿಸಬೇಕು ಎಂದರು.

    ಕೂಡಲ ಗುರುನಂಜೇಶ್ವರಮಠದ ಶ್ರೀ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.ವೇ.ಮೂ. ವಿರೂಪಾಕ್ಷಯ್ಯ ಹಿರೇಮಠ ಅವರಿಂದ ವೈದಿಕ ಕೈಂಕರ್ಯ ಜರುಗಿತು. ಶ್ರೀದುರ್ಗಾದೇವಿ ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳು, ತವರಮೆಳ್ಳಿಹಳ್ಳಿ, ಹಳೆಹಲಸೂರ, ಹೊಸಹಲಸೂರ ಗ್ರಾಮಸ್ಥರು, ಇತರರು ಪಾಲ್ಗೊಂಡಿದ್ದರು. ಉಪನ್ಯಾಸಕ ಗುರುಪಾದಯ್ಯ ಸಾಲಿಮಠ ಕಾರ್ಯಕ್ರಮ ನಿರ್ವಹಿಸಿದರು.

    ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ಹತ್ತಿರ ಇತ್ತೀಚೆಗೆ ನಡೆದ ಅಹಿತಕರ ಘಟನೆಯಿಂದ ಮಾಧ್ಯಮದ ಕೆಲವರಿಗೆ ತಮ್ಮ ತಪ್ಪಿನ ಅರಿವಾಗಿದ್ದು, ಪಶ್ಚತ್ತಾಪ ಪಡುತ್ತಿದ್ದಾರೆ. ಪೀಠದ ಕುರಿತು ಅವಹೇಳನ ಮಾಡಿರುವವರ ವಿರುದ್ಧ ಸರ್ಕಾರ ಸೂಕ್ತ ಕ್ರಮಕ್ಕೆ ಈಗಾಗಲೇ ಮುಂದಾಗಿದೆ. ಆದ್ದರಿಂದ, ಭಕ್ತರು ಶಾಂತಿ ಕಾಪಾಡಬೇಕು.

    I ರಂಭಾಪುರಿ ಶ್ರೀಗಳು

    ಫೋಟೋ ಶೀರ್ಷಿಕೆ: 20 ಎಸ್‌ವಿಆರ್ 03
    ಸವಣೂರ ತಾಲೂಕು ಹೊಸಹಲಸೂರ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವಚನ ನೀಡಿದರು. ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts