More

    ಧನಸಹಾಯ ಮಂಜೂರಾತಿಗೆ ಆಗ್ರಹ

    ಯಾದಗಿರಿ: ಕಟ್ಟಡ ಕಾರ್ಮಿಕರಿಗೆ ಧನಸಹಾಯ ಮಂಜೂರು ಮಾಡುವಂತೆ ಆಗ್ರಹಿಸಿ ಸೋಮವಾರ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

    ಕರೊನಾ ಹಾವಳಿಯಿಂದಾಗಿ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರು ಬಲಿಪಶುವಾಗಿದ್ದಾರೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಗಳ ಬೇಡಿಕೆ ಮೆರೆಗೆ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಪರಿಹಾರವಾಗಿ ಒಂದು ಸಾವಿರ, ಬಳಿಕ ಎರಡು ಸಾವಿರ ಆ ನಂತರ ಐದು ಸಾವಿರ ಪರಿಹಾರ ನೋಂದಾಯಿತ ಮತ್ತು ನವೀಕರಣಗೊಳ್ಳದ ಕಾಮರ್ಿಕರಿಗೆ ನೀಡುವುದಾಗಿ ಘೋಷಣೆ ಮಾಡಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

    ಆದರೆ ಘೋಷಣೆ ಮಾಡಿ 2 ತಿಂಗಳು ಕಳೆದರೂ ಇದುವರೆಗೂ ಸಹಾಯ ಧನಕ್ಕಾಗಿ ಅರ್ಜಿ ಸಲ್ಲಿಸಿದ ಬಹುತೇಕ ಕಾರ್ಮಿಕರಿಗೆ ಪರಿಹಾರಧನ ತಲುಪಿಲ್ಲ. ಕೋವಿಡ್-19 ತನ್ನ ದಾಳಿಯನ್ನು ಇಡೀ ರಾಜ್ಯದಲ್ಲಿ ಮುಂದುವರೆಸಿದೆ. ಸರ್ಕಾರ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿದ್ದರೂ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ಮರಳಿರುವುದರಿಂದ ನಿರ್ಮಾಣ ಕಾಮಗಾರಿಗಳು ಸಮರ್ಪಕವಾಗಿ ಆರಂಭಗೊಂಡಿಲ್ಲ ಎಂದು ಆರೋಪಿಸಿದರು.

    ರಾಜ್ಯದಲ್ಲಿ ಶೇ.80ರಷ್ಟು ಕಾರ್ಮಿಕರು ಸಣ್ಣ ಪುಟ್ಟ ನಿರ್ಮಾಣ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಕರೊನಾ ಭೀತಿಯಿಂದಾಗಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಮನೆ ಸೇರಿ ಇತರೆ ನಿರ್ಮಾಣ ಕೆಲಸಗಳು ಚುರುಕು ಪಡೆದಿಲ್ಲ. ಹೀಗಾಗಿ ಸಂಕಷ್ಟದಲ್ಲಿರುವ ಎಲ್ಲ ಕಾರ್ಮಿಕರಿಗೆ ಕೂಡಲೇ ಸಹಾಯಧನ ಒದಗಿಸಬೇಕು ಎಂದು ಆಗ್ರಹಿಸಿದರು.

    ಕಾರ್ಮಿಕರ ಮುಖಂಡರಾದ ಬಿ.ಎನ್.ರಾಮಲಿಂಗಪ್ಪ, ಮಲ್ಲೇಶ್, ಭೀಮಪ್ಪ, ಮಲ್ಲಪ್ಪ, ಸಂಗಪ್ಪ, ಶರಣಪ್ಪ, ಭೀಮರಾಯ, ಮರೆಪ್ಪ, ದೇವಪ್ಪ, ಸುಭಾಷ್, ಮಾರ್ಕಂಡೇಶ್ವರ, ಸಂಜಯ್ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts