More

    ಡಾ.ಡಿ.ಸಿ.ಪಾವಟೆ ಕಾಲೇಜ್‌ದಲ್ಲಿ ‘ಸಮನ್ವಯ ಶಿಕ್ಷಣ : ಒಂದು ಅವಲೋಕನ’ ಉಪನ್ಯಾಸ

    ವಿಶೇಷ ಅಗತ್ಯವುಳ್ಳ ಮಕ್ಕಳು ಮುಖ್ಯವಾಹಿನಿಗೆ ಬರಲಿ : ಕವಿತಾ
    ಗದಗ
    : ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಪಾಲಕ ಪೋಷಕರ ಹಾಗೂ ಸಮುದಾಯದ ಪಾತ್ರ ಮಹತ್ವದ್ದಾಗಿದೆ ಈ ಕುರಿತು ಅರಿವು ಮೂಡಿಸಿ ವಿಶೇಷ ಚೇತನರ ಬಾಳಿಗೆ ಬೆಳಕಾಗುವ ಪುಣ್ಯದ ಕಾರ್ಯಕ್ಕೆ ನಾವೆಲ್ಲರೂ ಮುಂದಾಗೋಣ ಎಂದು ಗದಗ ಶಹರ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಕವಿತಾ ಬೇಲೇರಿ ಅಭಿಪ್ರಾಯಪಟ್ಟರು.
    ಅವರು ಸೋಮವಾರ ಗದುಗಿನ ಡಾ.ಡಿ.ಸಿ.ಪಾವಟೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್.ಪ್ರಶಿಕ್ಷಣಾರ್ಥಿಗಳಿಗೆ ‘ಸಮನ್ವಯ ಶಿಕ್ಷಣ : ಒಂದು ಅವಲೋಕನ’ ವಿಷಯವಾಗಿ ಉಪನ್ಯಾಸ ನೀಡಿದರು.
    ವಿಶೇಷ ಅಗತ್ಯವುಳ್ಳ ಮಕ್ಕಳು ಸಂವೇದನಾಶೀಲರು ಇವರಿಗೆ ಆತ್ಮಸ್ಥೆöÊರ್ಯ ಹೆಚ್ಚಿಸುವ, ಸಹಕಾರ, ಪರಸ್ಪರ ಹೊಂದಾಣಿಕೆ ಕ್ರೀಡಾಮನೋಭಾವ ಹಾಗೂ ಹೊಸ ಅನುಭವಗಳನ್ನು ಪಡೆಯಲು ಪೂರಕವಾಗಿ ಬೇರೆ ಬೇರೆ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸುವದು, ಹೊರಸಂಚಾರ, ಸಮೀಪದ ಐತಿಹಾಸಿಕ ಸ್ಥಳಗಳಿಗೆ ಸಂದರ್ಶಿಸುವ ಕಾರ್ಯಕ್ರಮ ರೂಪಿಸಿದಾಗ ಈ ಮಕ್ಕಳಲ್ಲಿ ಹೊಸತನ ಮೂಡಲು ಸಾಧ್ಯ ಎಂದರು.
    ಉಪನ್ಯಾಸಕಿ ಡಾ.ಗಿರಿಜಾ ಹಸಬಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅಂಗವಿಕಲತೆ ಶಾಪವಲ್ಲ ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಈ ಮಕ್ಕಳು ಇತರ ಸಾಮಾನ್ಯ ಮಕ್ಕಳೊಂದಿಗೆ ಕಲಿಯಲು ನಾವು ಸಹಕರಿಸಬೇಕೆಂದರು.
    ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀಶೈಲ ಕಾಳಿ ಅವರು ಯಾವ ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗದAತೆ ಕ್ರಮ ಕೈಗೊಂಡು ಅದರಲ್ಲೂ ವಿಶೇಷ ಚೇತನ ಮಕ್ಕಳಿಗೆ ಶಾಲಾ ಬೋಧನೆಯಲ್ಲಿ ಪ್ರಾಶಸ್ತö್ಯ ನೀಡಿ ಅವರಲ್ಲಿ ಚೈತನ್ಯ ತುಂಬಬೇಕೆAದರು.
    ರಾಜೇಶ್ವರಿ ಆಲೂರ ಹಾಗೂ ರೋಹಿಣಿ ಹಲಗತ್ತಿ ಪ್ರಾರ್ಥಿಸಿದರು ಪ್ರೊ.ಕೆ.ಬಿ.ಸಂಕನಗೌಡ್ರ ಸ್ವಾಗತಿಸಿದರು ಪ್ರೊ.ಮೈತ್ರಾ ಸೈದಾಪೂರ ಪರಿಚಯಿಸಿದರು ಪ್ರೊ. ಲತಾ ಹಂಡಿ ನಿರೂಪಿಸಿದರು, ಎಂ.ಎನ್.ನದಾಫ ನಿರ್ವಹಿಸಿದರು ಪೂರ್ಣಿಮಾ ಮುರಗಿ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಪ್ರಶಿಕ್ಷಣಾರ್ಥಿಗಳು ಪಾಲ್ಗೋಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts