More

    ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದಿರುವ ಡಿಸಿ

    ಚಿತ್ರದುರ್ಗ:ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ನೇಮಕವಾಗಿರುವ ಜಿಆರ್‌ಜೆ ದಿವ್ಯಾಪ್ರಭು ಅವರು ಕನ್ನಡ ಸೇರಿದಂತೆ ಹಲವು ಭಾ ಷೆಗಳಲ್ಲಿ ಪ್ರಾವಿಣ್ಯತೆ ಪಡೆದಿದ್ದಾರೆ. ಈಗಾಗಲೇ 2010ರಲ್ಲಿ ಐಎಫ್‌ಎಸ್ ಅಧಿಕಾರಿಯಾಗಿ ಕಾರವಾರದಲ್ಲಿ ಕೆಲಸ ಮಾಡಿರುವ ಇವರು, ಗು ಜರಾತ್ ಕೇಡರ್ ಅಧಿಕಾರಿಯಾಗಿದ್ದರೂ,ಕರ್ನಾಟಕದಲ್ಲಿ ಸರ್ಕಾರಿ ಸೇವೆಯನ್ನಾರಂಭಿಸಿ,ರಾಜ್ಯಕ್ಕೆ ಬಂದ ಮೂರೇ ತಿಂಗಳ ಅವಧಿಯೊಳಗೆ ಕನ್ನಡ್ನ ಕಲಿತು,ಅತ್ಯಂತ ಸುಲಲಿತವಾಗಿ ಮಾತನಾಡುವುದನ್ನು ಕಲಿತಿದ್ದಾರೆ.

    ಗುಜರಾತ್ ಮೂಲದ ಇವರಿಗೆ ಮಾತೃಭಾಷೆ ಗುಜರಾತಿ,ಅರಬಿಕ್,ಸಂಸ್ಕೃತ, ಹಿಂದಿ ಇತ್ಯಾದಿ ಅನೇಕ ಭಾಷೆಗಳು ಗೊತ್ತಿವೆ ಹಾಗೂ ಚೆನ್ನೈನಲ್ಲಿ ವಾಸ,ವಿದ್ಯಾಭ್ಯಾಸ ದಿಂದಾಗಿ ತಮಿಳಿನ ಲ್ಲೂ ಸಾಕಷ್ಟು ಹಿಡಿತವಿದೆ. ನನಗೆ ಹಲವು ಭಾಷೆಗಳನ್ನು ಕಲಿಯುವುದೆಂದರೆ ಖುಷಿ ಎಂದು ಸುದ್ದಿಗಾರರೊಂದಿಗೆ ಅನೌಪಾಚಾರಿಕವಾಗಿ ಮಾತನಾಡುತ್ತಾ ತಿಳಿಸಿದರು.

    ಐಎಫ್‌ಎಸ್ ಹುದ್ದೆಗೆ ರಾಜೀನಾಮೆ ನೀಡಿ ಮತ್ತೆ ಐಎಎಸ್ ಉತ್ತೀರ್ಣರಾಗಿ 2016 ಕರ್ನಾಟಕ ಕೇಡರ್ ಅಧಿಕಾರಿಯಾಗಿ ನೇಮಕ ವಾಗಿರುವ ಇವರು,ರಾಜ್ಯದ ಹಲವು ಹುದ್ದೆಗಳಲ್ಲಿ ಕಳೆದ 10 ವರ್ಷಗಳಿಂದ ಕಾರ‌್ಯನಿರ್ವಹಿಸುತ್ತಿದ್ದಾರೆ. ಇವರ ಪತಿ ಕೂಡ ಹಿರಿಯ ಐಎ ಎಸ್ ಅಧಿಕಾರಿಯಾಗಿದ್ದಾರೆ.

    ಮಹಿಳಾ ಸಬಲೀಕರಣ,ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುವುದಾಗಿ ಹೇಳಿದ,ತಾವು ಕಚೇರಿಯಲ್ಲಿ ಕೂರುವ ಬದಲು ಜಿಲ್ಲೆಯನ್ನು ಹೆಚ್ಚು ಸುತ್ತುವುದಕ್ಕೆ ಇಷ್ಟ ಪಡುವೆ. ಆಗ ಜನರ ಸಮಸ್ಯೆ ಅರಿವುದಾಗುತ್ತದೆ. ಮಂಡ್ಯ ಜಿಪಂ ಸಿಇಒ ಆಗಿದ್ದಾಗ ವಾರದಲ್ಲಿ ಎರಡು-ಮೂರು ದಿನ ಮಾತ್ರ ಕಚೇರಿಯಲ್ಲಿ ಇರುತ್ತಿದ್ದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts