More

    Web Exclusive | ಎಲ್ಲ ಪಿಂಚಣಿದಾರರಿಗೂ ನೇರ ನಗದು; ಮನಿ ಆರ್ಡರ್ ವ್ಯವಸ್ಥೆಗೆ ಬದಲಿ ಮಾರ್ಗ

    | ಶಿವಶಂಕರ್ ಎಂ. ಹೆಬ್ಬಳ್ಳ ಮೈಸೂರು

    ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಫಲಾನುಭವಿಗಳಿಗೆ ನೀಡಲಾಗುತ್ತಿರುವ ಪಿಂಚಣಿ ಸೌಲಭ್ಯವನ್ನು ಸಂಪೂರ್ಣವಾಗಿ ನೇರ ನಗದು ವರ್ಗಾವಣೆ (ಡಿಬಿಟಿ) ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಪ್ರಸ್ತುತ 68.57 ಜನರಿಗೆ ಬೇರೆ ಬೇರೆ ಯೋಜನೆಗಳಡಿ ಮಾಸಿಕ ಪಿಂಚಣಿ ನೀಡಲಾಗುತ್ತಿದೆ. ಈ ಪೈಕಿ 19.5 ಲಕ್ಷ ಜನರನ್ನು ಹೊರತುಪಡಿಸಿ, ಉಳಿದವರು ಈಗಾಗಲೇ ನೇರ ನಗದು ವರ್ಗಾವಣೆಯ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಬಾಕಿ ಉಳಿದಿರುವ 19.5 ಲಕ್ಷ ಜನರು ಅಂಚೆ ಇಲಾಖೆಯಿಂದ ಮನಿ ಆರ್ಡರ್ ಮೂಲಕ ಪಿಂಚಣಿ ಸೌಲಭ್ಯ ಪಡೆಯುತ್ತಿದ್ದು, ಇನ್ನು ಮುಂದೆ ಅವರನ್ನೂ ಡಿಬಿಟಿ ವ್ಯಾಪ್ತಿಗೆ ತರಲು ಸರ್ಕಾರ ಇದೀಗ ಕ್ರಮ ಕೈಗೊಂಡಿದೆ.

    ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಾಮಾಜಿಕ ಭದ್ರತಾ ಮತ್ತು ಪಿಂಚಣಿಗಳ ನಿರ್ದೇಶನಾಲಯದಡಿ ಪಡೆಯá-ತ್ತಿರá-ವ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ, ವಿಧವಾ ಪಿಂಚಣಿ ಯೋಜನೆ, ಅಂಗವಿಕಲರ ಪಿಂಚಣಿ, ಸಂಧ್ಯಾ ಸುರಕ್ಷಾ ಯೋಜನೆ, ಆದರ್ಶ ವಿವಾಹ ಯೋಜನೆ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಅಂತ್ಯಸಂಸ್ಕಾರ ಸಹಾಯಧನ, ಜನಶ್ರೀ ಯೋಜನೆ, ಮನಸ್ವಿನಿ ಮತ್ತು ಮೈತ್ರಿ ಸೇರಿದಂತೆ ವಿವಿಧ ಯೋಜನೆಗಳಡಿ ಕೆಲ ಪಿಂಚಣಿ ಸೌಲಭ್ಯಗಳು ಅಂಚೆ ಕಚೇರಿ ಮೂಲಕ ಸಕಾಲಕ್ಕೆ ಫಲಾನುಭವಿಗಳನ್ನು ತಲುಪುತ್ತಿಲ್ಲ. ಇದರಿಂದಾಗಿ ರಾಜ್ಯಾದ್ಯಂತ ಸಾಕಷ್ಟು ದೂರುಗಳು ಕೇಳಿಬಂದಿದ್ದವು.

    ಅಲ್ಲದೆ, ಕಂದಾಯ ಸಚಿವರು ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡ ಸಂದರ್ಭ ಈ ಕುರಿತ ದೂರುಗಳೇ ಹೆಚ್ಚು ಪ್ರತಿಧ್ವನಿಸಿವೆ. ಈ ಹಿನ್ನೆಲೆಯಲ್ಲಿ ಸಚಿವ ಆರ್.ಅಶೋಕ್ ಅವರು ಪಿಂಚಣಿ ಫಲಾನುಭವಿಗಳಿಗೆ ಡಿಬಿಟಿ ವ್ಯವಸ್ಥೆ ಜಾರಿಗೆ ತರುವಂತೆ ನ.20ರಂದು ನಿರ್ದೇಶನ ನೀಡಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಮೊದಲೇ ಸಂಕಷ್ಟಕ್ಕೀಡಾಗಿರುವ ಜನರಿಗೆ ಸ್ಪಂದಿಸುವ ಉದ್ದೇಶದಿಂದ ಡಿಸೆಂಬರ್ ಒಳಗೆ ಎಲ್ಲ್ಲ ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿಗಳನ್ನು ನೇರ ನಗದು ವರ್ಗಾವಣೆ ಮಾದರಿಯಲ್ಲಿ ಫಲಾನುಭವಿಗಳ ಉಳಿತಾಯ ಖಾತೆಗೆ ಪಿಂಚಣಿ ಹಣ ಜಮೆ ಮಾಡಲು ಕ್ರಮ ಕೈಗೊಳ್ಳಬೇಕು. ಖಾತೆ ಹೊಂದಿರದವರಿಗೆ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಖಾತೆ ತೆರೆದು ಅದನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವ ಜವಾಬ್ದಾರಿಯನ್ನೂ ನಿರ್ವಹಿಸುವಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸಚಿವರು ನಿರ್ದೇಶಿಸಿದ್ದಾರೆ.

    ಕಚೇರಿಗೆ ಅಲೆದಾಟ

    ಗ್ರಾಮೀಣ ಭಾಗದಲ್ಲಿ ಪಿಂಚಣಿ ಸೌಲಭ್ಯ ಪಡೆಯಲು ವೃದ್ಧರು, ಮಹಿಳೆಯರು ಸಾಕಷ್ಟು ಪರದಾಡುತ್ತಿದ್ದಾರೆ. ದೂರದ ಹಳ್ಳಿಗಳಿಂದ ಪಟ್ಟಣಕ್ಕೆ ಬಂದು ಅಂಚೆ ಕಚೇರಿಗೆ ಅಲೆದು ಸಾಕಾಗಿದ್ದರು. ಇದನ್ನು ತಪ್ಪಿಸುವ ಉದ್ದೇಶದಿಂದ 2008ರಲ್ಲಿ ಮನಿಆರ್ಡರ್ ಮೂಲಕ ಪೋಸ್ಟ್​ಮನ್​ಗಳೇ ಪಿಂಚಣಿ ಹಣವನ್ನು ಅವರ ಮನೆ ಬಳಿ ತಂದುಕೊಡುತ್ತಿದ್ದರು. ಆದರೆ ಕೆಲವು ವರ್ಷಗಳಿಂದ ಪಿಂಚಣಿ ಹಣ ಫಲಾನುಭವಿಗಳ ಕೈಸೇರುವುದು ವಿಳಂಬವಾಗುತ್ತಿತ್ತು. ಇದಕ್ಕಾಗಿ ತಹಸೀಲ್ದಾರ್ ಕಚೇರಿ, ಅಂಚೆ ಕಚೇರಿಗೆ ಜನ ಅಲೆದು ಹೈರಾಣರಾಗಿದ್ದಾರೆ.

    ಹಣ ವಸೂಲಿ

    ಇತ್ತೀಚಿನ ವರ್ಷಗಳಲ್ಲಿ ಮನಿ ಆರ್ಡರ್ ಮೂಲಕ ಪಿಂಚಣಿ ಹಣ ತಂದುಕೊಡಲು ಪಿಂಚಣಿದಾರರಿಂದ ಪೋಸ್ಟ್​ಮನ್​ಗಳು ಹಣ ವಸೂಲಿ ಮಾಡುತ್ತಿದ್ದು, ಎರಡು ಮೂರು ತಿಂಗಳಿಗೊಮ್ಮೆ ತಂದುಕೊಡುವುದಲ್ಲದೆ, ಅದಕ್ಕೆ ಇಂತಿಷ್ಟು ಎಂಬಂತೆ ಕಮಿಷನ್ ಫಿಕ್ಸ್ ಮಾಡಿ ಪ್ರತಿ ತಿಂಗಳು ನೀಡಬೇಕೆಂಬ ಆರೋಪವೂ ಕೇಳಿಬಂದಿದ್ದು, ಇದೀಗ ಕಂದಾಯ ಇಲಾಖೆ ಕೈಗೊಂಡಿರುವ ನಿರ್ಧಾರದಿಂದ ಫಲಾನುಭವಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    68.57 ಲಕ್ಷ ಫಲಾನುಭವಿಗಳು

    ರಾಜ್ಯದಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ 68,57,940 ಜನರಿಗೆ ಮಾಸಿಕ ಪಿಂಚಣಿ ನೀಡಲಾಗುತ್ತಿದೆ. ಇವರ ಪೈಕಿ 13,11,809 ವೃದ್ಧರು (5,17,202 ಜನರು 64 ರಿಂದ 65 ವರ್ಷದೊಳಗಿನವರು, 7,94,607 ಜನರು 65 ವರ್ಷ ಮೇಲ್ಪಟ್ಟವರá-) 17,33,617 ಜನರು ನಿರ್ಗತಿಕ ವಿಧವಾ ವೇತನ, 8,84,156 ಅಂಗವಿಕಲರು, 1841 ಮೈತ್ರಿ, 1,26,629 ಮನಸ್ವಿನಿ, 4,277 ರೈತ ವಿಧವಾ ಪಿಂಚಣಿ, 40 ಜನರು ಆದರ್ಶ ವಿವಾಹ ಯೋಜನೆಯಡಿ ಪಿಂಚಣಿ ಪಡೆಯá-ತ್ತಿದ್ದಾರೆ. ಇವರ ಪೈಕಿ 19.5 ಲಕ್ಷ ಜನರು ಅಂಚೆ ಇಲಾಖೆಯ ಮನಿ ಆರ್ಡರ್ ಮೂಲಕ ಪಿಂಚಣಿ ಪಡೆಯá-ತ್ತಿದ್ದು, ಇದುವರೆಗೆ 9.5 ಲಕ್ಷ ಜನರಿಗೆ ಪೋಸ್ಟಲ್ ಸೇವಿಂಗ್ ಬ್ಯಾಂಕ್ ಮೂಲಕ ಪಿಂಚಣಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಉಳಿದ 10 ಲಕ್ಷ ಪಿಂಚಣಿದಾರರು ಬ್ಯಾಂಕ್ ಖಾತೆಗಳನ್ನು ಮಾಡಿಸಿಕೊಳ್ಳಬೇಕಿದ್ದು, ಶೀಘ್ರವೇ ಅವರಿಗೂ ಪೋಸ್ಟಲ್ ಬ್ಯಾಂಕ್ ಖಾತೆ ತೆರೆಯಲು ಕ್ರಮ ಕೈಗೊಂಡಿದೆ.

    5 ವರ್ಷಗಳಿಂದ ಪಿಂಚಣಿದಾರರಿಗೆ ಬ್ಯಾಂಕ್ ಖಾತೆ ಮಾಡಿಸಿಕೊಳ್ಳುವತೆ ಸಲಹೆ ಸೂಚನೆಗಳನ್ನು ನೀಡಲಾಗá-ತ್ತಿದೆ. ಆದರೆ ಈ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ರಾಜ್ಯದಲ್ಲಿ 19.5 ಲಕ್ಷ ಜನರು ಅಂಚೆ ಇಲಾಖೆ ಮನಿ ಆರ್ಡರ್ ಮೂಲಕ ಪಿಂಚಣಿ ಪಡೆಯá-ತ್ತಿದ್ದು, ಡಿಸೆಂಬರ್ ತಿಂಗಳೊಳಗೆ ಎಲ್ಲರಿಗೂ ಖಾತೆ ಮಾಡಿಸಿ ಅವರವರ ಖಾತೆಗೆ ಡಿಬಿಟಿ ಮೂಲಕ ಪಿಂಚಣಿ ಹಣ ಜಮೆ ಮಾಡಲಾಗá-ತ್ತದೆ.

    | ಜಿ.ಪಿ.ಪ್ರಭು ನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ, ಬೆಂಗಳೂರು

    ಎಲ್ಲೆಲ್ಲಿ ಎಷ್ಟೆಷ್ಟು ಫಲಾನುಭವಿಗಳು?

    ಬಾಗಲಕೋಟೆ 2,09,554, ಬಳ್ಳಾರಿ 2,87,106, ಬೆಂಗಳೂರು-(ಗ್ರಾಮಾಂತರ) 1,27,963, ಬೆಳಗಾವಿ 6,10,628, ಬೆಂಗಳೂರು-(ನಗರ) 3,41,870, ಬೀದರ್ 2,20,198, ಚಾಮರಾಜನಗರ 2,05,507, ಚಿಕ್ಕಬಳ್ಳಾಪುರ 1,86,008, ಚಿತ್ರದುರ್ಗ 2,34,552, ದಕ್ಷಿಣ ಕನ್ನಡ 1,55,540, ದಾವಣಗೆರೆ 2,26,515, ಧಾರವಾಡ 2,09,191, ಗದಗ 1,26,003, ಹಾಸನ 3,08,283, ಹಾವೇರಿ 1,96,411, ಕಲಬುರ್ಗಿ 2,26, 213, ಕೊಡಗು 52,228, ಕೋಲಾರ 2,15,666, ಕೊಪ್ಪಳ 1,76,144, ಮಂಡ್ಯ 3,41,029, ಮೈಸೂರು 3,59,960, ರಾಯಚೂರು 2,40, 628, ರಾಮನಗರ 2,18,337, ಶಿವಮೊಗ್ಗ 1,67,040, ತುಮಕೂರು 3,93,706, ಉಡುಪಿ 1,35,479, ಉತ್ತರಕನ್ನಡ 1,34,723, ವಿಜಯಪುರ 2,45,467 ಹಾಗೂ ಯಾದಗಿರಿಯಲ್ಲಿ 1,49,519 ಫಲಾನುಭವಿಗಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts