More

    ಡಿ.ಬಿ.ಚಂದ್ರೇಗೌಡ ಅತ್ಯುತ್ತಮ ಸಂಸದೀಯ ಪಟು

    ಆಲ್ದೂರು: ಡಿ.ಬಿ.ಚಂದ್ರೇಗೌಡ ಅತ್ಯುತ್ತಮ ಸಂಸದೀಯ ಪಟು, ಕಾನೂನು ತಜ್ಞರಾಗಿದ್ದರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
    ಹಾಂದಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಡಿ.ಬಿ.ಚಂದ್ರೇಗೌಡ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಡಿ.ಬಿ.ಚಂದ್ರೇಗೌಡ ಸದನದಲ್ಲಿ ಮಾತನಾಡುತ್ತಿರುವಾಗ ಸದನವೇ ಗಂಭೀರವಾಗಿ ಕೇಳುತ್ತಿತ್ತು. ರಾಜ್ಯಕ್ಕೆ ಉತ್ತಮ ಮಾರ್ಗದರ್ಶಕರಾಗಿದ್ದರು. ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಪರ್ಕ ಸೇತುವಾಗಿದ್ದರು ಎಂದರು.
    ಚಂದ್ರೇಗೌಡ ಮತ್ತು ನನ್ನ ಬಾಂಧವ್ಯ ಪಕ್ಷ ರಾಜಕಾರಣವನ್ನೂ ಮೀರಿತ್ತು. ಸ್ನೇಹ ಜೀವಿಯಾಗಿದ್ದ ಡಿಬಿಸಿ ಅವರ ಸಾವು ದೇಶಕ್ಕೆ ನಷ್ಟ ಉಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ರಾಜ್ಯದ ಕ್ಲಿಷ್ಟ ರಾಜಕೀಯ ಸನ್ನಿವೇಶದಲ್ಲಿ ಡಿ.ಬಿ.ಚಂದ್ರೇಗೌಡ ಉತ್ತಮ ಮಾರ್ಗದರ್ಶನ ನೀಡಿದ್ದರು. ಅವರು ಸಭಾಧ್ಯಕ್ಷರಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಸಂಕೀರ್ಣ ರಾಜಕೀಯ ಸ್ಥಿತಿ ಎದುರಾಗಿತ್ತು. ಅಂಥ ಸಂದರ್ಭದಲ್ಲಿ ಅವರ ಸಂಸದೀಯ ನಡಾವಳಿಗಳು ರಾಜ್ಯಕ್ಕೆ ಮಾರ್ಗದರ್ಶನವಾಗಿದ್ದವು ಎಂದು ಶ್ಲಾಘಿಸಿದರು.
    ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿ, ಡಿಬಿಸಿ ಅವರು ರಾಷ್ಟ್ರಕವಿ ಕುವೆಂಪು ಸಾಹಿತ್ಯದಿಂದ ಪ್ರಭಾವಿತರಾಗಿದ್ದರು. ನಿಸ್ವಾರ್ಥ ರಾಜಕಾರಣಿಯಾಗಿದ್ದು ಸಾಂಸ್ಕೃತಿಕ ವ್ಯಕ್ತಿತ್ವ ಹೊಂದಿದ್ದರು. ರಾಜಕೀಯವನ್ನು ಹವ್ಯಾಸವಾಗಿ ತೆಗೆದುಕೊಂಡಿದ್ದರು. ರಾಜಕೀಯದ ಲಾಭ ಪಡೆಯುವ ಆಸೆ ಹೊಂದಿರಲಿಲ್ಲ. ಅವರ ಸೇವೆ ದೇಶಕ್ಕೆ ಅಮೂಲ್ಯವಾಗಿತ್ತು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts