More

    ಇನ್ನಷ್ಟು ಸಿಸಿ ಕ್ಯಾಮರಾ ಅಳವಡಿಕೆಗೆ ಚಿಂತನೆ

    ದಾವಣಗೆರೆ: ಸುಗಮ ಸಂಚಾರ ದೃಷ್ಟಿಯಿಂದ ನಗರದಲ್ಲಿ ಇನ್ನು ಹೆಚ್ಚಿನ ಸಿಸಿ ಕ್ಯಾಮರಾ ಅಳವಡಿಸುವ ಚಿಂತನೆ ಇದೆ ಎಂದು ದಾವಣಗೆರೆ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ ಕುಮಾರ್ ಹೇಳಿದರು.

    ದಾವಣಗೆರೆ ಸ್ಮಾರ್ಟ್‌ಸಿಟಿ ಲಿಮಿಟೆಡ್‌ನಿಂದ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುಗಮ ಸಂಚಾರ ಅರಿವು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

    ನಗರದ 23 ಜಂಕ್ಷನ್‌ಗಳಲ್ಲಿ ರೆಡ್‌ಲೈಟ್ ವೈಲೇಷನ್ ಡಿಟೆಕ್ಟಿವ್ ಅಳವಡಿಸುವಂತೆ ಪೊಲೀಸ್ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಒಂದು ತಿಂಗಳಲ್ಲಿ ಆರ್‌ಎಲ್‌ವಿಡಿ ಅಳವಡಿಸಲಾಗುವುದು ಎಂದರು.

    ನಗರದ ಎಲ್ಲ ಪ್ರಮುಖ ವೃತ್ತಗಳಲ್ಲಿ ಅಡಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಂ ಅಳವಡಿಸಿದ್ದು, ವಾಹನ ಸವಾರರು ಬೇಕಾಬಿಟ್ಟಿ ಸಿಗ್ನಲ್ ಜಂಪ್ ಮಾಡಬಾರದು. ಸಿಗ್ನಲ್ ದೀಪಗಳ ಸೂಚನೆಯ ನಿಯಮ ಪಾಲಿಸುವ ಮೂಲಕ ದಂಡ ಪಾವತಿಯಿಂದ ತಪ್ಪಿಸಿಕೊಳ್ಳಬೇಕು ಎಂದು ವೀರೇಶ ಕುಮಾರ್ ಸಲಹೆ ನೀಡಿದರು.

    ಯಾವುದೇ ಒಂದು ವ್ಯವಸ್ಥೆ ಅನುಷ್ಠಾನಗೊಳಿಸುವಾಗ ಅದರ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕು. ಆ ನಂತರದಲ್ಲಿ ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸುವುದು ಅರ್ಥಪೂರ್ಣವಾಗಲಿದೆ. ಆದ್ದರಿಂದ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

    ನಗರದ ನಾನಾ ವೃತ್ತಗಳಲ್ಲಿ ಶಾಲಾ ವಿದ್ಯಾರ್ಥಿಗಳು ಸುಗಮ ಸಂಚಾರದ ಕುರಿತು ವಾಹನ ಸವಾರರಲ್ಲಿ ಜಾಗೃತಿ ಮೂಡಿಸಿದರು.ದಾವಣಗೆರೆ ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ಡಿಜಿಎಂ ಮಮತಾ, ಸಿಐಟಿ ವ್ಯವಸ್ಥಾಪಕ ನಿಖಿಲ್, ಅನುಷ್ಠಾನ ಏಜೆನ್ಸಿ ಯೋಜನಾ ನಿರ್ದೇಶಕ ಸುರೇಶ್‌ಬಾಬು, ಬಿಜಿನೆಸ್ ಹೆಡ್ ಮುಜಾಹಿದ್ ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts