More

    ಓದು ಅಭಿಯಾನ ವಿದ್ಯಾರ್ಥಿಗಳ ಕಲಿಕೆಗೆ ಪೂರಕ

    ಜಗಳೂರು: ಓದುವ ಅಭಿಯಾನ ಹಾಗೂ ಓದು ಕರ್ನಾಟಕ ಕಾರ್ಯಕ್ರಮಗಳು ಮಕ್ಕಳಲ್ಲಿ ಮಾತೃಭಾಷಾ ಕಲಿಕೆ ಮತ್ತು ಸರಳ ಗಣಿತ ಕೌಶಲಗಳ ಅಭಿವೃದ್ಧಿಗೆ ಪರಿಣಾಮಕಾರಿಯಾಗಿವೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂತೋಷ್ ಅಭಿಪ್ರಾಯಪಟ್ಟರು. ತಾಲೂಕಿನ ಗುರುಸಿದ್ದನಗೌಡ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಓದು ಕರ್ನಾಟಕ ಮೊದಲ ವಾರದ ಹಾಗೂ ಓದುವ ಅಭಿಯಾನದ 5ನೇ ವಾರದ ಮಕ್ಕಳ ಚಟುವಟಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ನೂರು ದಿನಗಳ ಓದುವ ಅಭಿಯಾನ ಹಾಗೂ 60 ದಿನಗಳ ಓದು ಕರ್ನಾಟಕ ಕಾರ್ಯಕ್ರಮದಲ್ಲಿ 1 ರಿಂದ 5ನೇ ತರಗತಿ ಮಕ್ಕಳಿಗೆ ಕಥೆ, ಕವನ ಓದು, ಶಾಲಾ ಗ್ರಂಥಾಲಯಕ್ಕೆ ಭೇಟಿ, ಅಭಿನಯ, ವೇಷಭೂಷಣ ಸ್ಪರ್ಧೆ ಖುಷಿ ನೀಡಿವೆ ಎಂದರು.ಮಕ್ಕಳಲ್ಲಿ ಜಾನಪದ ವಿನೋದಗಳಂತಹ ಚಟುವಟಿಕೆಗಳಿಂದ ಅಕ್ಷರ, ಪದ ಸಂಪತ್ತು ಹೆಚ್ಚಿ ಸ್ಪಷ್ಟವಾಗಿ ಮಾತೃಭಾಷೆ ಹಾಗೂ ಸರಳ ಗಣಿತ ಕಲಿಯಲು ಅನುಕೂಲವಾಗುತ್ತದೆ ಎಂದು ಹೇಳಿದರು.

    ಮುಖ್ಯ ಶಿಕ್ಷಕ ಕೆ.ಎಸ್.ರವಿಕುಮಾರ್ ಮಾತನಾಡಿ, ಓದು ಕರ್ನಾಟಕ ಕಾಯಕ್ರಮ ಈ ಬಾರಿ ಎಲ್ಲ ಜಿಲ್ಲೆಗಳಲ್ಲಿ ಜಾರಿಯಲ್ಲಿದ್ದು, ಪದ, ವಾಕ್ಯ ಕಲಿಕೆ, ಕಥಾ ಪುಸ್ತಕ, ಅಭ್ಯಾಸ ಪುಸ್ತಕಗಳ ಮೂಲಕ ಮಕ್ಕಳು ಆಸಕ್ತಿಯಿಂದ ಕಲಿಯಲು ಅನುಕೂಲವಾಗಿದೆ ಎಂದರು. ಈ ವರ್ಷ ಓದು ಕರ್ನಾಟಕ ಕಾರ್ಯಕ್ರಮ ವಿಶೇಷತೆಯಿಂದ ಕೂಡಿದೆ. ಕಳೆದ ವರ್ಷ ಕರೊನಾ ಕಾರಣದಿಂದ ಮಕ್ಕಳು ಶಾಲಾ ಪರಿಸರದಲ್ಲಿ ಕಲಿಯುವ ಅವಕಾಶದಿಂದ ವಂಚಿತರಾಗಿದ್ದು, ಅವರ ಕಲಿಕಾ ಮಟ್ಟ ಕುಂಠಿತವಾಗಿರುವ ಸಾಧ್ಯತೆ ಇದೆ. ಹಾಗಾಗಿ ಮತ್ತೆ ಶಾಲಾ ಪರಿಸರದಲ್ಲಿ ಕಲಿಯುವುದಕ್ಕಾಗಿ ಮಕ್ಕಳಲ್ಲಿ ಉತ್ಸಾಹ ತುಂಬಲು ಸರ್ಕಾರ ಈ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದೆ ಎಂದರು.

    ದಿನದ ಪ್ರಾರಂಭಿಕ ಚಟುವಟಿಕೆಗಳಿಗಾಗಿ ವೃತ್ತದ ಆಟಗಳು, ಸಣ್ಣ ಗುಂಪಿನ ಆಟಗಳು, ವೈಯಕ್ತಿಕ ಆಟದ ಸ್ಪರ್ಧೆ ಹಾಗೂ ಮಾನಸಿಕ ಲೆಕ್ಕಚಾರದ ಲೆಕ್ಕಗಳನ್ನು ಸರಳ ಗಣಿತ ಅಭ್ಯಾಸ ಪುಸ್ತಕದಲ್ಲಿ ನೀಡಲಾಗಿದೆ. ಈ ಅಭ್ಯಾಸ ಪುಸ್ತಕದಲ್ಲಿ ಸ್ಥಾನ ಬೆಲೆ, ಮೂರ್ತ ಪರಿಕಲ್ಪನೆ, ಸಂಖ್ಯಾ ರಚನೆ, ಮೂಲ ಕ್ರಿಯೆಗಳ ಪುನರಾವರ್ತನೆ ಆಟಗಳು, ಸಮಯ, ಕ್ಯಾಲೆಂಡರ್, ದರ ಪಟ್ಟಿ ಇಂತಹ ಚಟುವಟಿಕೆಗಳನ್ನು ನೀಡಲಾಗಿದ್ದು, ಇದರಿಂದ ಮಕ್ಕಳು ಸರಳವಾಗಿ ಗಣಿತ ಕಲಿಯಲು ಸಹಕಾರಿಯಾಗಿದೆ ಎಂದು ಹೇಳಿದರು. ಎಸ್‌ಡಿಎಂಸಿ ಸದಸ್ಯರಾದ ನೀಲಾಂಬಿಕಾ, ಕಾಟಪ್ಪ, ಶಿಕ್ಷಕಿ ಸಮೀರಾ ಖಾನಂ ಇತರರಿದ್ದರು. ವಿವಿಧ ವೇಷಭೂಷಣಗಳಲ್ಲಿ ಚಿಣ್ಣರು ಗಮನ ಸೆಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts