More

    ದಾವಣಗೆರೆ ಜಿಲ್ಲೆಯ 4 ಪೊಲೀಸ್ ಠಾಣೆಗಳು ಮೇಲ್ದರ್ಜೆಗೆ;  ಪ್ರತಿ ಠಾಣೆಗೂ ಒಂದೊಂದು ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆ ಸೃಜನೆ

    ದಾವಣಗೆರೆ: ದಾವಣಗೆರೆ ಜಿಲ್ಲೆಯ ನಾಲ್ಕು ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಈ ಠಾಣೆಗಳಿಗೆ 4 ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆಗಳನ್ನೂ ಹೊಸದಾಗಿ ಸೃಜಿಸಲಾಗಿದೆ.

    ದಾವಣಗೆರೆ ಜಿಲ್ಲೆಯ 4 ಪೊಲೀಸ್ ಠಾಣೆಗಳು ಮೇಲ್ದರ್ಜೆಗೆ;  ಪ್ರತಿ ಠಾಣೆಗೂ ಒಂದೊಂದು ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆ ಸೃಜನೆದಾವಣಗೆರೆಯ ಕೆಟಿಜೆ ನಗರ ಠಾಣೆ ಮತ್ತು ವಿದ್ಯಾನಗರ ಠಾಣೆ, ಆಜಾದ್ ನಗರ ಠಾಣೆ ಹಾಗೂ ಹರಿಹರ ನಗರ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗಿದ್ದು, ಪ್ರತಿ ಠಾಣೆಗೂ ಒಂದು ಪೊಲೀಸ್ ಇನ್ಸಪೆಕ್ಟರ್ ಹುದ್ದೆಯನ್ನು ಹೊಸದಾಗಿ ಕಲ್ಪಿಸಲಾಗುತ್ತಿದೆ.

    ಸ್ಮಾರ್ಟ್ ಸಿಟಿ ದಾವಣಗೆರೆ ವ್ಯಾಪ್ತಿಯಲ್ಲಿ ಮೇಲ್ದರ್ಜೆಗೇರಿಸಿರುವ ಕೆಟಿಜೆ ನಗರ ಮತ್ತು ವಿದ್ಯಾನಗರ ಎರಡೂ ಠಾಣೆಗಳು ಸದ್ಯ ಕೆಟಿಜೆ ನಗರ ವೃತ್ತದಲ್ಲಿ ಇದ್ದು, ಇದೀಗ ಹೊಸ ಆದೇಶದಂತೆ ಪ್ರತ್ಯೇಕಗೊಳ್ಳಲಿವೆ. ಹೀಗಾಗಿ ಕೆಟಿಜೆ ನಗರ ವೃತ್ತದಲ್ಲಿ ಯಾವುದೇ ಠಾಣೆ ಇರದಂತೆ ಆಗಿದೆ.

    ಇನ್ನು ಆಜಾದ್ ನಗರ ವೃತ್ತದಲ್ಲಿ ಆಜಾದ್ ನಗರ, ಗಾಂಧಿನಗರ ಮತ್ತು ಆರ್‌ಎಂಸಿ ಯಾರ್ಡ್ ಪೊಲೀಸ್‌ ಠಾಣೆಗಳಿದ್ದು, ಆಜಾದ್ ನಗರ ಠಾಣೆ ಮೇಲ್ದರ್ಜೆಗೇರಿದ್ದರಿಂದ ಇಲ್ಲಿ ಗಾಂಧಿನಗರ ಮತ್ತು ಆರ್‌ಎಂಸಿ ಯಾರ್ಡ್ ಎರಡೇ ಪೊಲೀಸ್ ಠಾಣೆಗಳು ಉಳಿಯಲಿವೆ. ಆಜಾದ್ ನಗರ ಠಾಣೆ ಪ್ರತ್ಯೇಕವಾಗಿ ಮೇಲ್ದರ್ಜೆ ಸ್ಥಾನಮಾನ, 1 ಪಿಐ ಹುದ್ದೆ ಹೊಂದಲಿದೆ.

    ಇನ್ನು, ಜಿಲ್ಲೆಯ ಹರಿಹರ ವೃತ್ತದಲ್ಲಿ ಹಾಲಿ ಹರಿಹರ ನಗರ, ಹರಿಹರ ಗ್ರಾಮಾಂತರ ಮತ್ತು ಮಲೇಬೆನ್ನೂರು ಮೂರು ಠಾಣೆಗಳಿದ್ದು, ಹರಿಹರ ನಗರ ಠಾಣೆ ಮೇಲ್ದರ್ಜೆಗೇರಿದ್ದರಿಂದ ಮೂಲ ವೃತ್ತದಲ್ಲಿ ಹರಿಹರ ಗ್ರಾಮಾಂತರ ಮತ್ತು ಮಲೇಬೆನ್ನೂರು ಎರಡೇ ಪೊಲೀಸ್ ಠಾಣೆಗಳು ಉಳಿಯಲಿವೆ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts