More

    ಜೀವನಕ್ಕೆ ಬೇಕು ಶರಣರ ತತ್ವಾದರ್ಶ

    ದಾವಣಗೆರೆ: ಶಿವಶರಣ ಶ್ರೀ ನುಲಿಯ ಚಂದಯ್ಯ ಸತ್ಯಶುದ್ಧ ಕಾಯಕ ನಡೆಸಿ, ಅದರ ಸಂದೇಶ ಸಾರಿದವರು. ಇಂತಹ ಶರಣರ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರ ಮಾರ್ಗದಲ್ಲಿ ಸಾಗಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.

    ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ನುಲಿಯ ಚಂದಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

    ಕಾಯಕ ವರ್ಗಗಳಿಗೆ ಬಹಳಷ್ಟು ಮಹತ್ವ ನೀಡಿದ್ದ ಶರಣ ಶ್ರೀ ನುಲಿಯ ಚಂದಯ್ಯನವರ ಜಯಂತ್ಯುತ್ಸವವನ್ನು ಸರ್ಕಾರದಿಂದಲೇ ಆಚರಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದರು.

    ಎವಿಕೆ ಕಾಲೇಜಿನ ಪ್ರಾಧ್ಯಾಪಕಿ ಡಾ.ಗೀತಾ ಬಸವರಾಜ್ ಉಪನ್ಯಾಸ ನೀಡಿ, 12ನೇ ಶತಮಾನದಲ್ಲಿ ನುಲಿಯ ಚಂದಯ್ಯನವರು ಕಾಯಕದಿಂದ ಬಂದ ಹಣದಿಂದ ದಾಸೋಹ ಏರ್ಪಡಿಸುತ್ತಿದ್ದರು. ಸುಮಾರು 48 ವಚನಗಳನ್ನು ರಚಿಸಿ ಸತ್ಯ, ಶುದ್ಧ, ಪ್ರಾಮಾಣಿಕ ಸಂದೇಶವನ್ನು ಜನರಿಗೆ ತಿಳಿಸಿದ್ದಾರೆ. ಶ್ರಮಜೀವಿಗಳು ಮಾಡುವ ಕಾಯಕಕ್ಕೆ ಸೂಕ್ತ ಗೌರವ ಸಿಗಬೇಕು ಎಂಬುದು ಅವರ ಮನದಾಳದ ಆಶಯವಾಗಿತ್ತು ಎಂದರು.

    ವಕೀಲ ಕುಮಾರ್ ಮಾತನಾಡಿ, ಸರ್ಕಾರದ ಆದೇಶದಂತೆ ಜಿಲ್ಲಾಡಳಿತ, ಸಾಂಕೇತಿಕವಾಗಿ ನುಲಿಯ ಚಂದಯ್ಯ ಜಯಂತ್ಯುತ್ಸವ ಆಚರಿಸುತ್ತಿರುವುದು ಸಮಾಜದ ಸೌಭಾಗ್ಯ ಎಂದರು.

    ಸಮಾಜದ ಮುಖಂಡರಾದ ಆನಂದಪ್ಪ, ವಿರೂಪಾಕ್ಷಪ್ಪ, ಕೆ.ಎನ್.ಓಂಕಾರಪ್ಪ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಮುಖಂಡರಾದ ಮಂಜುನಾಥ, ಮಾರಪ್ಪ, ಗಂಗರಾಜು, ಶ್ರೀನಿವಾಸ್, ನಾಗರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts