More

    ಕುಮಾರಸ್ವಾಮಿ ಬ್ರಾಹ್ಮಣ ಸಮಾಜದ ಕ್ಷಮೆ ಕೇಳಲಿ

    ದಾವಣಗೆರೆ : ಬ್ರಾಹ್ಮಣ ಸಮುದಾಯದ ಒಳ ಪಂಗಡಗಳ ನಡುವೆ ಒಡಕು ಮೂಡಿಸುವ ರೀತಿಯಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆ ಯಾಚಿಸಬೇಕು ಎಂದು, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪಿ.ಸಿ. ಶ್ರೀನಿವಾಸ್ ಆಗ್ರಹಿಸಿದರು.
     ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಮಾರಸ್ವಾಮಿ ಅವರು ರಾಜಕೀಯ ವಿಚಾರ ಏನೇ ಇರಲಿ, ಜಾತಿಯ ಬಗ್ಗೆ ಮಾತನಾಡುವ ಅಗತ್ಯವಿರಲಿಲ್ಲ. ಜಾತ್ಯತೀತ ಪಕ್ಷ ಎಂದು ಹೇಳುವವರಿಗೆ ಇದು ಭೂಷಣವಲ್ಲ ಎಂದು ತಿಳಿಸಿದರು.
     ಮುಂದಿನ ಸಿಎಂ ಯಾರಾಗಬೇಕು ಎಂಬುದು ಬಿಜೆಪಿಯ ಆಂತರಿಕ ವಿಷಯ. ಅದಕ್ಕೂ ಬ್ರಾಹ್ಮಣರಿಗೂ ಏನು ಸಂಬಂಧ?, ತ್ರಿಮತಸ್ಥರೂ ಒಗ್ಗಟ್ಟಿನಿಂದ ಇರುವಾಗ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಖಂಡಿಸಿದರು.
     ಸ್ವಾತಂತ್ರೃ ಹೋರಾಟದಲ್ಲಿ ಬ್ರಾಹ್ಮಣರ ಕೊಡುಗೆ ಅಪಾರವಾಗಿದೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಚಂದ್ರಶೇಖರ ಆಜಾದ್, ಮಂಗಲ್ ಪಾಂಡೆ ಇನ್ನೂ ಮುಂತಾದ ದೇಶಭಕ್ತರು ಜೀವನವನ್ನೇ ಅರ್ಪಣೆ ಮಾಡಿದ್ದಾರೆ. ಸಮಾಜದ ಅನೇಕರು ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
     ನಮಗೆ ಶಾಸ್ತ್ರ ಹೇಳುವುದು, ದೇಶದ ಒಳಿತಿಗಾಗಿ ಶಸ್ತ್ರ ಹಿಡಿಯುವುದೂ ಗೊತ್ತಿದೆ. ನಮ್ಮ ಸಮಾಜ ಯಾರಿಗೂ ಕೇಡು ಬಯಸುವುದಿಲ್ಲ. ಇತ್ತೀಚೆಗೆ ಕೆಲವು ರಾಜಕಾರಣಿಗಳು ಬ್ರಾಹ್ಮಣ ಪದವನ್ನು ಕೀಳಾಗಿ, ಯಾರನ್ನೋ ಮೆಚ್ಚಿಸಲು ಬಳಸುತ್ತಿದ್ದಾರೆ, ಇದು ಕೂಡಲೇ ನಿಲ್ಲಬೇಕು ಎಂದು ಒತ್ತಾಯಿಸಿದರು.
     ಕುಮಾರಸ್ವಾಮಿ ಅವರು ಸಮಾಜದ ಕ್ಷಮೆ ಕೇಳದಿದ್ದರೆ ಅವರು ಬಂದ ಕಡೆ ಮುತ್ತಿಗೆ ಹಾಕುವುದು ಸೇರಿ ವಿವಿಧ ರೀತಿಯ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
     ಸಮಾಜದ ಮುಖಂಡರಾದ ಸಿ.ಕೆ. ಆನಂದತೀರ್ಥಾಚಾರ್, ಎ.ಎಂ. ಬದರಿಪ್ರಸಾದ್, ಎಂ.ಜಿ. ಶ್ರೀಕಾಂತ್, ಅನಿಲ್ ಬಾರೆಂಗಳ್, ಜಗನ್ನಾಥ ರಾವ್, ಎಂ.ಎಸ್. ರಾಘವೇಂದ್ರ, ರಂಗನಾಥ್, ಕೊಲ್ಲೂರು ಜಯಪ್ರಕಾಶ್, ಬಿ.ಟಿ. ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts