More

    ಎಸ್ಸೆಸ್ಸೆಲ್ಸಿ ಸುಗಮ ಪರೀಕ್ಷೆಗೆ ನೆರವಾದ ವೆಬ್‌ಕಾಸ್ಟಿಂಗ್

    ರಮೇಶ ಜಹಗೀರದಾರ್, ದಾವಣಗೆರೆ
     ಇದೇ ಮೊದಲ ಬಾರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳ ಮೇಲೆ ಕಣ್ಣಿಡಲು ಜಿಲ್ಲೆಯಲ್ಲಿ ವ್ಯವಸ್ಥೆ ಮಾಡಿದ್ದ ವೆಬ್‌ಕಾಸ್ಟಿಂಗ್ ಉತ್ತಮ ಫಲ ನೀಡಿದೆ. ಇದರಿಂದಾಗಿ ಅಕ್ರಮಗಳನ್ನು ಪತ್ತೆಹಚ್ಚಿ ಪರೀಕ್ಷೆಗಳ ಸುಗಮ ನಿರ್ವಹಣೆ ಮಾಡಲು ಸಾಧ್ಯವಾಗಿದೆ.
     ಮಾರ್ಚ್ 25 ರಿಂದ ಆರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಶನಿವಾರ ಮುಕ್ತಾಯವಾದವು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ವೆಬ್‌ಕಾಸ್ಟಿಂಗ್ ಮಾಡಲಾಯಿತು. ದಾವಣಗೆರೆ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯವರು ಸ್ಮಾರ್ಟ್‌ಸಿಟಿ ಕಚೇರಿಯ ಸಹಯೋಗ ಪಡೆದು ಅನುಷ್ಠಾನಗೊಳಿಸಿದರು.
     ಜಿಲ್ಲೆಯಲ್ಲಿ ಸ್ಥಾಪಿಸಲಾಗಿದ್ದ ಎಲ್ಲ 82 ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಅವುಗಳನ್ನು ದಾವಣಗೆರೆಯ ಸ್ಮಾರ್ಟ್‌ಸಿಟಿ ಕಚೇರಿಯಲ್ಲಿರುವ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ಗೆ ಸಂಪರ್ಕಿಸಿ, ಒಂದೇ ಸೂರಿನಡಿ ಎಲ್ಲ ಕೇಂದ್ರಗಳ ಚಿತ್ರಣ ಸಿಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಶಿಕ್ಷಣ ಇಲಾಖೆಯ ರಾಜ್ಯ ಕಚೇರಿಯಿಂದಲೂ ನಿಗಾ ವಹಿಸಲಾಗಿತ್ತು.
     ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ನಲ್ಲಿ 30 ಕಂಪ್ಯೂಟರ್‌ಗಳನ್ನು ಈ ಉದ್ದೇಶಕ್ಕೆ ಬಳಸಕೊಳ್ಳಲಾಯಿತು. ಶಿಕ್ಷಣ ಇಲಾಖೆಯ 25 ಸಿಬ್ಬಂದಿಯ ಜತೆಗೆ ಸ್ಮಾರ್ಟ್‌ಸಿಟಿಯ ಸಿಬ್ಬಂದಿಯೂ ಕೈಜೋಡಿಸಿದರು. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡಿದ್ದರಿಂದ ಇಲಾಖೆಯ ಅಧಿಕಾರಿಗಳಿಗೆ ಪರೀಕ್ಷಾ ನಿರ್ವಹಣೆ ಸುಲಭವಾಯಿತು.
     …
     (((ಬಾಕ್ಸ್)))
     * ಡಿಬಾರ್, ಅಮಾನತು
     ವೆಬ್‌ಕಾಸ್ಟಿಂಗ್ ವ್ಯವಸ್ಥೆಯ ಮೂಲಕವೇ ಪರೀಕ್ಷಾ ಅವ್ಯವಹಾರ ಮತ್ತು ಶಿಕ್ಷಕರ ಕರ್ತವ್ಯ ಲೋಪವನ್ನು ಪತ್ತೆಹಚ್ಚಲಾಯಿತು. ನಕಲು ಮಾಡಲು ಪ್ರಯತ್ನಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಡಿಬಾರ್‌ಗೊಳಿಸಿ, ಮೂವರು ಶಿಕ್ಷಕರನ್ನು ಅಮಾನತು ಮಾಡಲಾಯಿತು.
     ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಕ್ಯಾಮೆರಾ ಕಣ್ಗಾವಲು ಇದ್ದುದರಿಂದ ಎಲ್ಲೆಲ್ಲಿ ಏನೇನು ನಡೆಯುತ್ತಿದೆ ಎಂಬುದು ಕಂಪ್ಯೂಟರ್ ಪರದೆಯ ಮೇಲೆ ಕಾಣಿಸುತ್ತಿತ್ತು. ಅದರ ಆಧಾರದ ಮೇಲೆ ಅಧಿಕಾರಿಗಳು ಶಿಸ್ತುಕ್ರಮ ತೆಗೆದುಕೊಳ್ಳಲು ಸಾಧ್ಯವಾಯಿತು.
     ಪರೀಕ್ಷೆ ಬರೆಯುವ ವೇಳೆ ವಿದ್ಯಾರ್ಥಿಗಳು ಪರಸ್ಪರ ಮಾತನಾಡಿಕೊಂಡಿದ್ದು ಕ್ಯಾಮರಾಗಳಲ್ಲಿ ಸೆರೆಯಾಯಿತು. ಇದೇ ಕಾರಣಕ್ಕೆ ಶಿಕ್ಷಕರೊಬ್ಬರು ಅಮಾನತುಗೊಂಡರು. ಪರೀಕ್ಷಾ ಕೇಂದ್ರಗಳಲ್ಲಿನ ದೃಶ್ಯಗಳನ್ನು ಗಮನಿಸಿ ಅಗತ್ಯ ಸೂಚನೆಗಳನ್ನು ನೀಡಲಾಯಿತು.
     ಪರೀಕ್ಷಾ ಕೇಂದ್ರಗಳ ಬಳಿ ಸಂಬಂಧಪಡದ, ಅನುಮಾನಾಸ್ಪದ ವ್ಯಕ್ತಿಗಳು ಯಾರಾದರೂ ಓಡಾಡುತ್ತಿದ್ದಾರೆಯೆ ಎಂಬುದನ್ನೂ ಕ್ಯಾಮರಾಗಳು ಗಮನಿಸುತ್ತಿದ್ದವು. ಆದರೆ ಆ ರೀತಿಯ ಯಾವುದೇ ವ್ಯಕ್ತಿಗಳ ಚಲನವಲನ ಇರಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
     ನಿಗದಿತ ಸಮಯಕ್ಕೆ ಸರಿಯಾಗಿ ಪರೀಕ್ಷೆಗಳನ್ನು ಆರಂಭಿಸಲಾಯಿತೆ, ಮುಕ್ತಾಯವಾಗಿದ್ದು ಯಾವ ಸಮಯಕ್ಕೆ ಎಂಬ ಎಲ್ಲ ಮಾಹಿತಿ ಬೆರಳ ತುದಿಯಲ್ಲೇ ದೊರೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts