More

    ಸರ್ವಜ್ಞನ ತ್ರಿಪದಿಗಳಲ್ಲಿ ವಿಶ್ವಮಾನವ ಸಂದೇಶ

    ದಾವಣಗೆರೆ : ಸರ್ವಜ್ಞನ ತ್ರಿಪದಿಗಳಲ್ಲಿ ವಿಶ್ವಮಾನವ ಸಂದೇಶ ಹಾಗೂ ಜೀವನದ ಮೌಲ್ಯಗಳಿವೆ ಎಂದು ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರಿನ್‌ಭಾನು ಎಸ್. ಬಳ್ಳಾರಿ ಹೇಳಿದರು.
     ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಆಯೋಜಿಸಿದ್ದ, ಕಾಯಕ ಶರಣರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಸರ್ವಜ್ಞ ಅವರು ಸತ್ಯ, ಶುದ್ಧವಾದ ಕಾಯಕ ಮಾಡುತ್ತಾ ಸಮಾಜದ ಅಂಕು ಡೊಂಕುಗಳನ್ನು ತ್ರಿಪದಿಗಳ ಮೂಲಕ ತಿದ್ದುವಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ, ಉರಿಲಿಂಗ ಪೆದ್ದಿ ಅವರು ಶರಣ ಪಡೆಯ ಮಹನೀಯರಾಗಿದ್ದಾರೆ. ಇವರನ್ನು ‘ಪಂಚ ತಜ್ಞರು’ ಎಂದು ಕರೆಯುತ್ತಾರೆ ಎಂದರು.
     ಇವರು ನಿಜವಾದ ಕಾಯಕ ಜೀವಿಗಳು. ಬಸವಣ್ಣ ಹೇಳಿರುವಂತೆ ಕಾಯಕವೇ ಕೈಲಾಸ, ಯಾವುದೇ ಕೆಲಸ ಸಣ್ಣದು ಅಥವಾ ದೊಡ್ಡದಲ್ಲ. ಕಾಯಕದಲ್ಲಿ ನಂಬಿಕೆ ಇರಬೇಕು, ಅದೇ ಅಂತರಂಗ ಶುದ್ಧಿ, ಅದೇ ಬಹಿರಂಗ ಶುದ್ಧಿ ಎಂದು ತಿಳಿಸಿದರು.
     ಶರಣರ ವಚನಗಳ ಮೂಲಕ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಜಾತಿಗಳಿಗೆ ಸೀಮಿತವಾಗದೆ ಎಲ್ಲ ಮಹನೀಯರ ಬಗ್ಗೆ ತಿಳಿದುಕೊಂಡು ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.
     ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣ ನಾಯಕ್ ಮಾತನಾಡಿದರು. ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ಚಂದ್ರಶೇಖರ್ ಸುಂಕದ, ದಾವಣಗೆರೆ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಎಚ್. ವಿಶ್ವನಾಥ್, ಹಿರಿಯ ವೃತ್ತಿ ರಂಗಭೂಮಿಯ ಕಲಾವಿದರು ಹಾಗೂ ಸಮಾಜದ ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts