ಪ್ರಾಥಮಿಕ ತನಿಖೆ ಮುಗಿಸಿ ಮರಳಿದ ಸಿಐಡಿ ತಂಡ

blank

ದಾವಣಗೆರೆ: ಮಾಯಕೊಂಡ ಕಸ್ಟೋಡಿಯಲ್ ಡೆತ್ ಪ್ರಕರಣದ ತನಿಖೆಗೆ ಆಗಮಿಸಿದ್ದ ಸಿಐಡಿ ತಂಡ ಬೆಂಗಳೂರಿಗೆ ವಾಪಸಾಗಿದೆ.

ಡಿವೈಎಸ್ಪಿ ಗಿರೀಶ್ ನೇತೃತ್ವದಲ್ಲಿ ಆಗಮಿಸಿದ್ದ ತಂಡದ ಸದಸ್ಯರು ಎರಡು ದಿನ ಮಾಯಕೊಂಡಕ್ಕೆ ಭೇಟಿ ನೀಡಿ ಮಹತ್ವದ ಮಾಹಿತಿಗಳನ್ನು ಕಲೆಹಾಕಿತ್ತು.

ಮೊದಲ ದಿನ ಮರುಳಸಿದ್ದಪ್ಪನ ಮೃತದೇಹ ಸಿಕ್ಕಿದ್ದ ಬಸ್ ಸ್ಟಾಪ್ ಸ್ಥಳದ ಮಹಜರು ಮಾಡಲಾಗಿತ್ತು. ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗಿತ್ತು.

ಎರಡನೇ ದಿನ ಮೃತನ ಸಂಬಂಧಿಕರು ಹಾಗೂ ಆತನ ಸಂಪರ್ಕದಲ್ಲಿ ಇದ್ದವರನ್ನು ಕರೆಸಿ ಮಾಹಿತಿ ಪಡೆಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಗಳನ್ನು ತಂಡವು ಪರಿಶೀಲಿಸಿತು.

ಮೊದಲ ಹಂತದ ತನಿಖೆ ಪೂರೈಸಿರುವ ತಂಡವು ವಾಪಸಾಗಿದ್ದು ಮುಂಬರುವ ದಿನಗಳಲ್ಲಿ ಮತ್ತೆ ಆಗಮಿಸಿ ಮುಂದಿನ ಪ್ರಕ್ರಿಯೆಗಳನ್ನು ಕೈಗೆತ್ತಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

Share This Article

ಜಿಮ್​ಗೆ ಹೋಗದೇ, ಹಸಿವಿನಿಂದ ಬಳಲದೇ ಸುಲಭವಾಗಿ 18 ಕೆಜಿ ತೂಕ ಇಳಿಸಿದ ಯುವತಿ! ಹೇಗೆ ಗೊತ್ತಾ? Weight loss

Weight loss : ತೂಕ ಇಳಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿ ದೃಢಸಂಕಲ್ಪ ಬೇಕು ಮತ್ತು ಇಷ್ಟದ…

ನಿದ್ರೆಯಲ್ಲಿದ್ದಾಗ ಎದೆ ಮೇಲೆ ಕೂತು ಯಾರೋ ಕತ್ತು ಹಿಸುಕಿದಂತೆ ಅನುಭವ ಆಗಿದೆಯೇ? ಕಾರಣವೇನು? ಇಲ್ಲಿದೆ ಮಾಹಿತಿ… Sleep Paralysis

Sleep Paralysis: ರಾತ್ರಿ ಮಲಗಿರುವಾಗ ದುಃಸ್ವಪ್ನಗಳು ಬರುವುದು ಸಾಮಾನ್ಯ. ಕೆಲವೊಮ್ಮೆ ಯಾರೋ ನಿಮ್ಮ ಎದೆಯ ಮೇಲೆ…