More

    ಕಾನೂನು ನೆರವಿನಿಂದ ಸಮಸ್ಯೆಗಳಿಗೆ ಪರಿಹಾರ

    ದಾವಣಗೆರೆ : ಸಮಾಜದಲ್ಲಿ ಸಮಸ್ಯೆಗಳು ಎದುರಾದಾಗ ಕಾನೂನಿನ ನೆರವು ಪಡೆದು ಸೌಹಾರ್ದಯುತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಎಸ್.ಎಸ್. ಕೇರ್ ಟ್ರಸ್ಟ್‌ನ ಲೈಫ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ಸಲಹೆ ನೀಡಿದರು.
     ಬಾಪೂಜಿ ವಿದ್ಯಾಸಂಸ್ಥೆಯ ಆರ್.ಎಲ್. ಕಾನೂನು ಕಾಲೇಜು, ಎಸ್.ಎಸ್. ಕೇರ್ ಟ್ರಸ್ಟ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಕ್ಕರಗೊಳ್ಳ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
     ಶಾಲಾ ಮಕ್ಕಳು, ಪಾಲಕರು ಕಾನೂನಿನ ಅರಿವು ಪಡೆಯಬೇಕು ಎಂದು ತಿಳಿಸಿದ ಅವರು, ರಕ್ತದಾನದ ಮಹತ್ವ, ಉತ್ತಮ ಗುಣಮಟ್ಟದ ಆಹಾರ, ಶಿಕ್ಷಣದ ಮಹತ್ವವನ್ನು ವಿವರಿಸಿದರು.
     ಕಾನೂನು ಸೇವಾ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಮಹಾವೀರ್ ಎಂ. ಕರಣ್ಣನವರ್ ಮಾತನಾಡಿ, ಉಚಿತ ಕಾನೂನಿನ ನೆರವಿನ ಕುರಿತು ಮಾಹಿತಿ ನೀಡಿದರು.
     ವಿಶ್ರಾಂತ ಕುಲಪತಿ ಡಾ. ಕೆ. ಸಿದ್ದಪ್ಪ ಮಾತನಾಡಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಅರಿವು ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಯಲಿ ಎಂದು ಆಶಿಸಿದರು.
     ಆರ್.ಎಲ್. ಕಾನೂನು ಕಾಲೇಜಿನ ಪ್ರಾಚಾರ್ಯ ಡಾ.ಜಿ.ಎಸ್. ಯತೀಶ್ ಮಾತನಾಡಿ ಗ್ರಾಮದ ಮುಖಂಡರಿಗೆ ಕಾನೂನಿನ ಬಗ್ಗೆ ಕನಿಷ್ಠ ತಿಳಿವಳಿಕೆ ಇರಬೇಕು ಎಂದು ತಿಳಿಸಿದರು.
     ಗ್ರಾಮದ ಮುಖಂಡ ಕೆ.ಜಿ. ಬಸವನಗೌಡ್ರು ಮಾತನಾಡಿದರು. ಆರ್.ಡಿ. ಕುಲಕರ್ಣಿ, ಗ್ರಾಮದ ಮುಖಂಡರಾದ ಕೆ.ಜಿ. ಮಹಾಂದಾತಪ್ಪ, ವೈ.ಆರ್. ಧನ್ಯಕುಮಾರ್, ಎಂ.ಟಿ. ನಾಗರಾಜ, ಕಾರ್ಯಕ್ರಮದ ಸಂಯೋಜಕ ಟಿ. ವಿದ್ಯಾಧರ ವೇದವರ್ಮ ಇದ್ದರು. ವಿದ್ಯಾರ್ಥಿನಿ ಎಸ್.ಕೆ. ಸುಷ್ಮಾ ಪ್ರಾರ್ಥಿಸಿದರು.
     ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್, ಕಾನೂನು ಅಧಿಕಾರಿ ಮಂಜುನಾಥ ಬಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೊಟ್ರಮ್ಮ, ಉಪಾಧ್ಯಕ್ಷ ಗುತ್ಯಪ್ಪ ಎಸ್, ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು ವಿದ್ಯಾರ್ಥಿಗಳು ಇದ್ದರು. ನಂತರ ಗ್ರಾಮಸ್ಥರು ಕೆಲವೊಂದು ಕಾನೂನು ಸಮಸ್ಯೆಗಳು ಮತ್ತು ಗ್ರಾಮದ ಕುಂದು ಕೊರತೆಗಳ ಬಗ್ಗೆ ಗಣ್ಯರಿಗೆ ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts