More

    ನಾನು ರಾಮ ಭಕ್ತ, ನನ್ನನ್ನು ಬಂಧಿಸಿ

    ದಾವಣಗೆರೆ : ‘ನಾನು ರಾಮ ಭಕ್ತ. ನನ್ನನ್ನು ಬಂಧಿಸಿ’. ಹುಬ್ಬಳ್ಳಿಯಲ್ಲಿ ಹಿಂದು ಕಾರ್ಯಕರ್ತನನ್ನು ಬಂಧಿಸಿದ ಕ್ರಮವನ್ನು ವಿರೋಧಿಸಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ಹಿಂದು ಜಾಗರಣ ವೇದಿಕೆಯ ದಾವಣಗೆರೆ ಘಟಕದ ಕಾರ್ಯಕರ್ತರು ಕೂಗಿದ ಘೋಷಣೆಯಿದು.
     ಜಯದೇವ ವೃತ್ತದಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ನಗರ ಉಪ ವಿಭಾಗದ ಡಿವೈಎಸ್ಪಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
     ಹಿಂದು ಕಾರ್ಯಕರ್ತನನ್ನು 31 ವರ್ಷಗಳ ಬಳಿಕ ಬಂಧಿಸಲು ಕಾರಣವೇನು?. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ನಂತರ ನಿರಂತರವಾಗಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದರು.
     ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿರುವ ಕಾಂಗ್ರೆಸ್ ರಾಜ್ಯದಲ್ಲಿ ವಿನಾ ಕಾರಣ ಹಿಂದು ಕಾರ್ಯಕರ್ತರ ಮೇಲೆ ಪ್ರಕರಣಗಳನ್ನು ದಾಖಲಿಸುತ್ತಿದೆ. ಇದರಿಂದ ಹೆದರಿ ಹಿಂದೆ ಸರಿಯುವವರು ನಾವಲ್ಲ. ಬಂಧಿಸಿರುವ ಕರ ಸೇವಕರನ್ನು ಬಿಡುಗಡೆಗೊಳಿಸಬೇಕು. ಅಲ್ಲಿನ ಅಧಿಕಾರಿಯನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
     ಬಂಧಿಸುವುದಾದರೆ ನಮ್ಮನ್ನು ಬಂಧಿಸಿ. ನಾವೂ ಸಹ ರಾಮ ಭಕ್ತರು. ಇಲ್ಲವಾದರೆ ಕರ ಸೇವಕರನ್ನು ಕೂಡಲೇ ಬಿಡುಗಡೆಗೊಳಿಸಿ ಎಂದು ಒತ್ತಾಯಿಸಿದರು.
     ಸಂಘಟನೆಯ ದಾವಣಗೆರೆ ಪ್ರಾಂತ ಸಹ ಸಂಚಾಲಕ ಸತೀಶ, ನಗರ ಸಂಚಾಲಕ ನವೀನ, ಕೆ.ಬಿ. ಕೊಟ್ರೇಶ್, ಪ್ರಸನ್ನ ಕುಮಾರ್, ಶ್ರೀನಿವಾಸ್ ದಾಸಕರಿಯಪ್ಪ, ಗಣೇಶ, ಚೇತನ್, ಇ. ಕಲ್ಲೇಶ್, ಪರಶುರಾಮ್, ಕೃಷ್ಣಮೂರ್ತಿ, ಸಂತೋಷ, ನಾಗರಾಜ, ವಿಜಯ, ವಿಕಾಸ, ಪುನೀತ, ಸಂಜಯ್, ಎಸ್.ಟಿ. ವೀರೇಶ್, ಎಚ್.ಪಿ. ವಿಶ್ವಾಸ, ಸಚಿನ್ ವರ್ಣೇಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts