More

    ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ

    ದಾವಣಗೆರೆ: ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಗಿಡ ಬೆಳೆಸಿ ಮುಂದೆ ಎದುರಾಗುವ ಸಮಸ್ಯೆ ನಿವಾರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಹೇಳಿದರು.
     ದಾವಣಗೆರೆ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಹವಾಮಾನದ ಏರುಪೇರು ಮತ್ತು ಪ್ರಕೃತಿಯ ಎಲ್ಲ ಸಮಸ್ಯೆಗಳಿಗೆ ಪರಿಸರ ನಾಶವೇ ಕಾರಣವಾಗಿದೆ. ಗಿಡ, ಮರಗಳುಳ್ಳ ಪರಿಸರ ಸುಂದರವಾಗಿರುವುದಷ್ಟೇ ಅಲ್ಲ, ಆರೋಗ್ಯಕ್ಕೂ ಪೂರಕವಾಗಿರುತ್ತದೆ ಎಂದು ನುಡಿದರು.
     ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗವು ಸಹಭಾಗಿತ್ವ ವಹಿಸಿತ್ತು. ಡೀನ್‌ಗಳಾದ ಪ್ರೊ.ಪಿ. ಲಕ್ಷ್ಮಣ್, ಪ್ರೊ. ವೆಂಕಟರಾವ್ ಪಲಾಟಿ, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಅಶೋಕ ಕುಮಾರ ಪಾಳೇದ, ವಿದ್ಯಾರ್ಥಿ ಕಲ್ಯಾಣ ಘಟಕದ ನಿರ್ದೇಶಕ ಪ್ರೊ.ಯು.ಎಸ್. ಮಹಾಬಳೇಶ್ವರ, ಪ್ರಾಧ್ಯಾಪಕರಾದ ಪ್ರೊ.ಗೋವಿಂದಪ್ಪ, ಶಿವಕುಮಾರ ಕಣಸೋಗಿ, ಡಾ.ವೆಂಕಟೇಶ, ಡಾ.ವೀರೇಶ, ಡಾ.ಎಸ್.ಆರ್. ಸಂತೋಷಕುಮಾರ, ತೋಟಗಾರಿಕೆ ವಿಭಾಗದ ಅಧಿಕಾರಿ ವೈ.ಎಚ್. ಕುಂದರಗಿ, ಸಂಶೋಧನಾ ವಿದ್ಯಾರ್ಥಿಗಳು ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts