More

    ಜಿ.ಪಂ, ತಾ.ಪಂ. ಕ್ಷೇತ್ರಗಳ ಮರು ವಿಂಗಡಣೆ

    ದಾವಣಗೆರೆ :  ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ದಾವಣಗೆರೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಮರು ವಿಂಗಡಣೆಯ ಕರಡು ಪ್ರಕಟಣೆಯನ್ನು ಹೊರಡಿಸಿದ್ದು ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
     ಜಿಲ್ಲಾ ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಮೊದಲು ಇದ್ದಂತೆ 29 ಸದಸ್ಯರು ಇರಲಿದ್ದಾರೆ. ನ್ಯಾಮತಿ ತಾಲೂಕಿನಲ್ಲಿ 2, ಹೊನ್ನಾಳಿ, ಹರಿಹರ ಮತ್ತು ಜಗಳೂರು ತಾಲೂಕುಗಳಲ್ಲಿ ತಲಾ 4, ದಾವಣಗೆರೆ 7 ಮತ್ತು ಚನ್ನಗಿರಿ ತಾಲೂಕಿನಲ್ಲಿ 8 ಸದಸ್ಯರ ಸಂಖ್ಯೆಯನ್ನು ನಿಗದಿಗೊಳಿಸಲಾಗಿದೆ.
     ಜಿಲ್ಲೆಯಲ್ಲಿ ಇದುವರೆಗೆ ತಾಲೂಕು ಪಂಚಾಯಿತಿಗಳ ಒಟ್ಟು ಸದಸ್ಯರ ಸಂಖ್ಯೆ 107 ಇತ್ತು. ಈಗ ಆ ಸಂಖ್ಯೆ 98ಕ್ಕೆ ಇಳಿಕೆಯಾಗಿದ್ದು 9 ಸದಸ್ಯರು ಕಡಿಮೆಯಾದಂತಾಗಿದೆ.
     ನ್ಯಾಮತಿ ತಾ.ಪಂ.ಗೆ 9, ಹೊನ್ನಾಳಿ 13, ಹರಿಹರ 15, ಜಗಳೂರು 16, ದಾವಣಗೆರೆ 21, ಚನ್ನಗಿರಿ ತಾಲೂಕಿನಲ್ಲಿ 24 ಸದಸ್ಯರ ಸಂಖ್ಯೆ ನಿಗದಿಗೊಳಿಸಲಾಗಿದೆ.
     ಇದರೊಂದಿಗೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಹೆಸರನ್ನೂ ಕರಡು ಪ್ರತಿಯಲ್ಲಿ ನಮೂದಿಸಲಾಗಿದೆ. ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ 15 ದಿನಗಳ ಒಳಗಾಗಿ (ಸೆ. 19ರ ಸಂಜೆ 5 ಗಂಟೆಯೊಳಗೆ) ಆನ್‌ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಸಲ್ಲಿಸಬಹುದು.
     ಆಕ್ಷೇಪಣೆಗಳನ್ನು ‘ಠಿಠಿ://್ಟಟ್ಟ.ಞಠಿ.ಜಟ.ಜ್ಞಿ/್ಟಛ್ಚ್ಝಟ್ಠಚ್ಝಿಜ್ಚಿ/‘ ವೆಬ್‌ಸೈಟ್ ವಿಳಾಸಕ್ಕೆ ಅಥವಾ ಖುದ್ದಾಗಿ ಇಲ್ಲವೆ ಅಂಚೆ ಮೂಲಕ ‘ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ, 3ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ: 222/ಎ, ಬಹುಮಹಡಿ ಕಟ್ಟಡ, ಅಂಬೇಡ್ಕರ್ ವೀಧಿ ಬೆಂಗಳೂರು-560001’ ಇಲ್ಲಿ ತಲುಪಿಸಬಹುದು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts