More

    ಪಕ್ಷೇತರ ಸ್ಪರ್ಧೆಗೆ ವಿನಯ ಕುಮಾರ್ ನಿರ್ಧಾರ

    ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಕಾಂಗ್ರೆಸ್ ಮುಖಂಡ, ಇನ್‌ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯ ಕುಮಾರ್ ನಿರ್ಧರಿಸಿದ್ದಾರೆ.
     ನಗರದ ಎಸ್.ಎಸ್. ಬಡಾವಣೆ ‘ಎ’ ಬ್ಲಾಕ್‌ನಲ್ಲಿರುವ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಸೋಮವಾರ ಬೆಂಬಲಿಗರ ಸಭೆಯಲ್ಲಿ ಈ ತೀರ್ಮಾನವನ್ನು ಪ್ರಕಟಿಸಿದರು.
     ಬೆಂಗಳೂರಿನಲ್ಲಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಮಾತುಕತೆಯ ಬಗ್ಗೆ ಸಭೆಗೆ ತಿಳಿಸಿದ ಅವರು, ನಾನು ಹೆಚ್ಚಾಗಿ ಗೌರವಿಸುವ ನಾಯಕರಾದ ಸಿಎಂ ಸಿದ್ದರಾಮಯ್ಯ ಹಾಗೂ ಸ್ವಾಮೀಜಿ ಅವರ ಮಾತುಗಳಿಗೆ ಬೆಲೆ ಕೊಡಬೇಕೆ ಅಥವಾ ನನ್ನನ್ನು ಪ್ರೀತಿಸುವ ಜನರ ಅಭಿಲಾಷೆಯಂತೆ ನಡೆದುಕೊಳ್ಳಬೇಕೆ ಎನ್ನುವ ಧರ್ಮ ಸಂಕಟದ ಸ್ಥಿತಿಯನ್ನು ಎದುರಿಸುತ್ತಿದ್ದೇನೆ ಎಂದರು.
     ಕ್ಷೇತ್ರದ ಜನರು ತೋರಿಸಿರುವ ಪ್ರೀತಿಯನ್ನು ಕಂಡು, ಅವರ ಆಸೆಯಂತೆ ಪಕ್ಷೇತರನಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕಿಡುವ ಪ್ರಶ್ನೆ ಇಲ್ಲ. ನಾನೀಗ ಗಟ್ಟಿ ನಿರ್ಧಾರ ಮಾಡಿದ್ದೇನೆ. ಸಿಎಂ ಮತ್ತು ಸ್ವಾಮೀಜಿ ಕ್ರಮೇಣ ನನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ ಎಂದು ತಿಳಿಸಿದರು.
     ನನಗೆ ಟಿಕೆಟ್ ಕೈತಪ್ಪಿದಾಗ ಪಕ್ಷದ ಮುಖಂಡರು ಬಂದು ಸಮಾಧಾನ ಮಾಡಿದ್ದರೆ ನನ್ನ ಮನಸ್ಸು ಬದಲಾವಣೆಯಾಗುವ ಸಾಧ್ಯತೆಯಿತ್ತು. ಆಗ ಯಾರೂ ಬರಲಿಲ್ಲ, ದೂರವಾಣಿ ಕರೆಯನ್ನೂ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
     ಅದಾದ ನಂತರ ಕ್ಷೇತ್ರದ 170 ಹಳ್ಳಿಗಳನ್ನು ಸುತ್ತಿ ಜನರ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಹೋದ ಕಡೆಗೆಲ್ಲ ಜನರು ನನಗೆ ಧೈರ್ಯ ತುಂಬಿದ್ದಾರೆ, ಪಕ್ಷೇತರನಾಗಿ ಸ್ಪರ್ಧಿಸುವಂತೆ ಹೇಳಿದ್ದಾರೆ. ಇಷ್ಟೆಲ್ಲ ಆದ ನಂತರ ಹಿಂದೆ ಸರಿಯುವ ಮಾತಿಲ್ಲ ಎಂದು ತಿಳಿಸಿದರು.
     ಯಾರನ್ನೋ ಸೋಲಿಸಲು ಅಲ್ಲ, ನಾನು ಗೆಲ್ಲುವುದಕ್ಕಾಗಿ ಸ್ಪರ್ಧಿಸುವ ನಿರ್ಧಾರ ಮಾಡಿರುವೆ. ಎರಡೂ ಪಕ್ಷಗಳ ಅಭ್ಯರ್ಥಿಗಳನ್ನು ನೋಡಿದರೆ ನನಗೆ ಗೆಲ್ಲುವ ಸುವರ್ಣಾವಕಾಶವಿದೆ. ನಾನು ಸಿಎಂಗೆ ಮುಖ ತೋರಿಸಬೇಕೆಂದರೆ ನನ್ನನ್ನು ಗೆಲ್ಲಿಸಿ ಕಳಿಸಿ ಎಂದು ಬೆಂಬಲಿಗರಿಗೆ ಮನವಿ ಮಾಡಿದರು.
     ಸಚಿವ ಈಶ್ವರ ಖಂಡ್ರೆ ಅವರ 26 ವರ್ಷದ ಮಗನಿಗೆ ಟಿಕೆಟ್ ನೀಡಿದ್ದಾರೆ, ಹಿಂದುಳಿದ ವರ್ಗದ ನನಗೆ ಅವಕಾಶ ಕೊಟ್ಟಿಲ್ಲ. ಇದು ಏನನ್ನು ಹೇಳುತ್ತದೆ ಎಂದು ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts