More

    10ನೇ ತರಗತಿ ಮಕ್ಕಳಿಗೆ ‘ದತ್ತ ಮೇಷ್ಟ್ರು’ ಪಾಠ!

    ಚಿಕ್ಕಮಗಳೂರು: ಕೋವಿಡ್​-19 ನಿಂದಾಗಿ ಎಸ್​ಎಸ್ಎಲ್​ಸಿ ಪರೀಕ್ಷೆ ಇನ್ನೂ ಆರಂಭವೇ ಆಗಿಲ್ಲ. ಶಾಲೆ ಬಾಗಿಲು ಹಾಕಿ ಒಂದೂವರೆ ತಿಂಗಳಾಯ್ತ ಬಂತು, ಓದಿದ್ದು ಮರೆತು ಹೋಗುವ ಹಾಗಿದೆ. ಶಿಕ್ಷಕರು-ವಿದ್ಯಾರ್ಥಿಗಳ ಮುಖಾಮುಖಿ ಭೇಟಿಯೂ ಸಾಧ್ಯವಾಗುತ್ತಿಲ್ಲ. ಸಮೀಪದಲ್ಲೇ ಮನೆ ಪಾಠಕ್ಕಾದರೂ ಹೋಗೋಣವೆಂದರೆ ಸೋಂಕಿನ ಭೀತಿ ಜತೆಗೆ ಲಾಕ್​ಡೌನ್​ ಬಿಸಿ… ಮುಂದೇನು ಎಂಬ ಆತಂಕದಲ್ಲಿದ್ದ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ. ಮೂಲತಃ ಅಧ್ಯಾಪಕರಾಗಿದ್ದ ಮಾಜಿ ಶಾಸಕರೊಬ್ಬರು ಹತ್ತನೇ ತರಗತಿ ಮಕ್ಕಳಿಗೆ ಫೇಸ್​ಬುಕ್ ಲೈವ್ ಮೂಲಕ ಕ್ಲಾಸ್​ ತೆಗೆದುಕೊಳ್ಳುತ್ತಿದ್ದಾರೆ!

    ಇದನ್ನೂ ಓದಿ ರಾಜ್ಯ ಪೊಲೀಸ್​ ಇಲಾಖೆಯಲ್ಲಿ 2,672 ಕಾನ್​ಸ್ಟೆಬಲ್​, 162 ಎಸ್​ಐ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

    ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರು ಫೇಸ್​ಬುಕ್ ಲೈವ್ ನಲ್ಲಿ ಪ್ರತಿನಿತ್ಯ ಸಂಜೆ 7:30 ರಿಂದ ರಾತ್ರಿ 8:30 ವರೆಗೆ ಪಾಠ ಮಾಡುತ್ತಿದ್ದಾರೆ. ಈ ಹಿಂದೆ ಗಣಿತ ಮತ್ತು ಭೌತಶಾಸ್ತ್ರ ಅಧ್ಯಾಪಕರಾಗಿ ಕೆಲಸ ಮಾಡಿದ್ದ ಇವರು ಸದ್ಯ ಇದೇ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಒಂದು ವಾರ ಗಣಿತ, ಇನ್ನೊಂದು ವಾರ ಭೌತಶಾಸ್ತ್ರ ವಿಷಯ ಭೋದಿಸಲಿದ್ದಾರೆ. ಪ್ರಸ್ತುತ ಈ ವಾರ ಗಣಿತ ತರಗತಿ ತೆಗೆದುಕೊಂಡಿದ್ದಾರೆ.

    ಇದನ್ನೂ ಓದಿ ಲಾಕ್​ಡೌನ್ ಆರಂಭದಿಂದಲೂ ಬಿಯರ್​ ಕುಡಿಯುತ್ತಲೇ ದಿನ ಕಳೆಯುತ್ತಿದ್ದಾರೆ, ಯಾರು ಗೊತ್ತಾ?

    ಮಾರ್ಚ್​-ಏಪ್ರಿಲ್ ನಲ್ಲೇ ನಡೆಯಬೇಕಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ಕರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಪರೀಕ್ಷೆ ಮುಂದೂಡಿ ಆದೇಶಿಸಿತ್ತು. ಸದ್ಯದಲ್ಲೇ ಪರೀಕ್ಷೆ ವೇಳಾಪಟ್ಟಿ ನಿಗದಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವರು ವಿದ್ಯಾರ್ಥಿಗಳಿಗೆ ಫೇಸ್​ಬುಕ್​ ವಿಡಿಯೋ ಮೂಲಕ ತರಗತಿ ನಡೆಸುತ್ತಿದ್ದಾರೆ.

    ತನ್ನ ಪ್ರವೃತ್ತಿ ಬಿಡದೆ ಮಕ್ಕಳಿಗೆ ಪಾಠ ಪುನರ್ ಮನನ ಮಾಡಲು ಬಂದಿರುವ ಗೆಳೆಯ ದತ್ತ ಅವರಿಗೆ ಧನ್ಯವಾದಗಳು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇನ್ನು ದತ್ತ ಅವರ ಈ ಕಾರ್ಯಕ್ಕೆ ಅಭಿಮಾನಿಗಳಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

    10th Mathematics Class 1

    Ysv Datta ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಮೇ 5, 2020

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts