More

    ನಿಮ್ಮಿಂದ ದೇಶವೇ ಬಲಿಯಾಗುವಂತೆ ಮಾಡದಿರಿ, ನಾಗರಿಕರಂತೆ ವರ್ತಿಸಿ ಎಂದು ನಟ ದರ್ಶನ್​ ಹೇಳಿದ್ಯಾಕೆ?

    ಬೆಂಗಳೂರು: ಜಾಗತಿಕವಾಗಿ ಮರಣ ಮೃದಂಗ ಬಾರಿಸುತ್ತಿರುವ ಕರೊನಾ ವೈರಸ್​ ಪಿಡುಗಿನಿಂದ ಬಚಾವ್​ ಆಗಲು ಅನೇಕ ಗಣ್ಯರು ದೇಶದ ಜನತೆಯ ಬಳಿ ಸರ್ಕಾರ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡುತ್ತಿದ್ದಾರೆ. ಅದರಂತೆಯೇ ನಟ ದರ್ಶನ್​ ಕೂಡ ಆರೋಗ್ಯ ಬಗ್ಗೆ ಎಚ್ಚರವಿರಲಿ, ನಿರ್ಲಕ್ಷ್ಯ ಬೇಡ ಎಂದು ಸಲಹೆ ನೀಡಿದ್ದಾರೆ.

    ಇನ್​ಸ್ಟಾಗ್ರಾಂ, ಫೇಸ್​ಬುಕ್​ ಮತ್ತು ಟ್ವಿಟರ್​ನಂತಹ ಸಾಮಾಜಿಕ ಜಾಲತಾಣದಲ್ಲಿ ದರ್ಶನ್​ ಮನವಿ ಮಾಡಿಕೊಂಡಿದ್ದು, ಅವರು ಬರೆದಂತಹ ಸಂದೇಶ ಹೀಗಿದೆ… ಎಲ್ಲಾ ಭಾರತೀಯರಲ್ಲೂ ನನ್ನ ಕಳಕಳಿಯ ವಿನಂತಿ. ಈ ಮಾರಕವಾದ ಕರೊನ ವೈರಸ್​ನಿಂದ ಪಾರಾಗುವುದು ನಮ್ಮ ಮೊದಲ ಆದ್ಯತೆ ಆಗಿರಬೇಕು. ಈ ವೈರಸ್ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಸರ್ಕಾರ, ವೈದ್ಯರು, ಪೊಲೀಸ್ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ದಯಮಾಡಿ ನಿಮ್ಮ ಕುಟುಂಬಕ್ಕಾಗಿ, ನಿಮ್ಮ ನೆರೆ-ಹೊರೆಯ ಗೆಳೆಯರಿಗಾಗಿ, ನಮಗಾಗಿ ಆದಷ್ಟು ನಿಮ್ಮ ಮನೆಯಲ್ಲಿ ಸುರಕ್ಷಿತವಾಗಿರಿ ಎಂದು ಮನವಿ ಮಾಡಿದ್ದಾರೆ.

    ಈ ಸೋಂಕು ರೋಗ ಬಹಳ ಅಪಾಯಕಾರಿ ಎಂಬುದು ನಿಮಗೆ ತಿಳಿದರೂ ಸಹ ತಮ್ಮ ಊರುಗಳಿಗೆ ಹೋಗುವುದು, ಹಬ್ಬಕ್ಕಾಗಿ ಸಂಚರಿಸುವುದು ಮಾಡದಿರಿ. ನಿಮ್ಮ ಈ ಕೃತ್ಯದಿಂದ ಇಡೀ ದೇಶವೇ ಮಾರಣಹೋಮಕ್ಕೆ ತುತ್ತಾಗುವಂತೆ ಮಾಡದಿರಿ. ಇಟಲಿ, ಸ್ಪೇನ್ ದೇಶಗಳಲ್ಲಿ ಜಾಗೃತ ಕ್ರಮಗಳನ್ನು ಮೊದಲೇ ಸರಿಯಾಗಿ ಪಾಲಿಸದೆ ಆಗುತ್ತಿರುವ ಅನಾಹುತಗಳು ನಿಮ್ಮ ಕಣ್ಣ ಮುಂದಿವೆ. ನಿಮ್ಮ ಕರ್ತವ್ಯ ಮನೆಯಲ್ಲಿಯೇ ಇದ್ದು ದೇಶದ ಹಿತಕ್ಕಾಗಿ ಎಲ್ಲಾ ನಿಯಮಗಳನ್ನು ಪಾಲಿಸುವುದು. ಇದನ್ನು ದಯಮಾಡಿ ನೆರವೇರಿಸಿಕೊಡಿ. ಸಾಮಾನ್ಯ ಜ್ಞಾನ ಸಾಮಾನ್ಯವಲ್ಲ ಎನ್ನುವ ಹಾಗೆ ಮಾಡಬೇಡಿ. ದೇಶದ ನಾಗರಿಕರಂತೆ ವರ್ತಿಸಿ ಎಂದು ಕೇಳಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

    #JantaCurfew ,,,, #clap,,, ಸರಿಯೋ, ತಪ್ಪೋ?

    ‘ಕರೊನಾ’ ಹಮ್ ಕ್ಯಾ ಕರೊನಾ: ಪವನ್ ಒಡೆಯರ್ ಧ್ವನಿ, ಪ್ರಥಮ್ ಪಂಚಿಂಗ್ ಡೈಲಾಗ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts